ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕಿಸ್ತಾನ : ಅವಳಿ ಸ್ಫೋಟಕ್ಕೆ 27 ಬಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕಿಸ್ತಾನ : ಅವಳಿ ಸ್ಫೋಟಕ್ಕೆ 27 ಬಲಿ
ವಾಯುವ್ಯ ಪಾಕಿಸ್ತಾನದ ಜನನಿಭಿಡ ಮಾರುಕಟ್ಟೆ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಎರಡು ಬಾಂಬ್ ಸ್ಫೋಟಕ್ಕೆ ಕನಿಷ್ಠ 27 ಮಂದಿ ಬಲಿಯಾಗಿದ್ದು, ಅನೇಕ ಮಂದಿ ಗಾಯಾಗೊಂಡಿದ್ದಾರೆ.

ಹಿಂಸಾಚಾರ ಪೀಡಿತ ಅಫ್ಘಾನ್ ಗಡಿಭಾಗದ ಪ್ರಮುಖ ಪೇಶಾವರ ನಗರದ ಮಾರುಕಟ್ಟೆಯಲ್ಲಿ ಪ್ರಬಲ ಬಾಂಬ್ ಅಡಗಿಸಿಟ್ಟಿದ್ದ ಕಾರು ಛಿದ್ರಗೊಂಡ ಪರಿಣಾಮ, ಬಕ್ರೀದ್ ಹಬ್ಬಕ್ಕಾಗಿ ಶಾಪಿಂಗ್ ನಡೆಸುತ್ತಿದ್ದ ಬಹುತೇಕ ಮಂದಿ ಸಾವನ್ನಪ್ಪಿದ್ದಾರೆ.

ಪೇಶಾವರದ ಓರ್‌ಕಝಾಯಿ ಬುಡಕಟ್ಟು ಜಿಲ್ಲೆಯ ಸಮೀಪ ಸಂಭವಿಸಿದ ಕಾರು ಬಾಂಬ್ ಸ್ಫೋಟದಲ್ಲಿ 21 ಮಂದಿ ಸಾವನ್ನಪ್ಪಿದ್ದು, 84ಜನರು ಗಾಯಗೊಂಡಿದ್ದರೆ, ಇದಾದ ಗಂಟೆಗಳ ಬಳಿಕ ಮತ್ತೆ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 6ಮಂದಿ ಬಲಿಯಾಗಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಫೋಟದ ಹಿಂದೆ ಯಾವುದೇ ಸಂಘಟನೆಗಳು ಇದುವರೆಗೆ ಹೊಣೆಯನ್ನು ಹೊತ್ತಿಲ್ಲ. ಕಳೆದ 16 ತಿಂಗಳಿನಿಂದ ಸಂಭವಿಸುತ್ತಿರುವ ಆತ್ಮಾಹುತಿ ದಾಳಿ ಮತ್ತು ಇತರ ದಾಳಿಯಿಂದಾಗಿ ವಿವಿಧ ಪ್ರದೇಶಗಳಲ್ಲಿ ಈವರೆಗೆ 1,500 ಮಂದಿ ಬಲಿಯಾಗಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆಡ್ವಾಣಿಯನ್ನು ನಮಗೊಪ್ಪಿಸಿ: ಜಮಾತ್ ಉಲ್
ಅಮೆರಿಕ: ಜೈಲು ಶಿಕ್ಷೆ ಕಡಿಮೆಯಾಗಬೇಕೆ,ಶುಶ್ರೂಷೆ ಮಾಡಿ
ಲಷ್ಕರ್ ಹಫೀಜ್‌ನನ್ನು ಪಾಕ್ ಹಸ್ತಾಂತರಿಸುವುದಿಲ್ಲ: ಜಮಾತ್
ಹಜ್ ಯಾತ್ರೆ : ಭದ್ರತೆಗಾಗಿ 1 ಲಕ್ಷ ರಕ್ಷಣಾ ಸಿಬ್ಬಂದಿ
ಭಾರತ - ರಷ್ಯಾ ನಾಗರಿಕ ಅಣು ಒಪ್ಪಂದ
ಲಷ್ಕರ್ ವರಿಷ್ಠ ಹಫೀಜ್ ಸೆರೆಗೆ ಅಮೆರಿಕ ಆಗ್ರಹ