ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಲಷ್ಕರ್ ವಿರುದ್ಧ ಪಾಕ್ ಕ್ರಮ ಕೈಗೊಳ್ಳಬೇಕು: ಅಮೆರಿಕದ ಎಚ್ಚರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲಷ್ಕರ್ ವಿರುದ್ಧ ಪಾಕ್ ಕ್ರಮ ಕೈಗೊಳ್ಳಬೇಕು: ಅಮೆರಿಕದ ಎಚ್ಚರಿಕೆ
ಪಾಕ್ ಕ್ರಮ ಕೈಗೊಳ್ಳದಿದ್ದರೆ, ಅಮೆರಿಕ ಕ್ರಮ ತೆಗೆದುಕೊಳ್ಳಲಿದೆ
ಮುಂಬೈ ದಾಳಿಯ ಹಿಂದೆ ಪಾಕಿಸ್ತಾನದ ಉಗ್ರರ ಕೈವಾಡ ಇರುವ ಬಗ್ಗೆ 'ಅಲ್ಲಗಳೆಯಲಾಗದ ಪುರಾವೆ' ಲಭಿಸಿದ್ದು, ಈ ಬಗ್ಗೆ ಪಾಕ್ ಕೂಡಲೇ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ, ಆ ಕೆಲಸವನ್ನು ಅಮೆರಿಕ ಮಾಡಲಿದೆ ಎಂದು ವಿದೇಶಾಂಗ ಸಚಿವೆ ಕಾಂಡೊಲೀಸಾ ರೈಸ್ ತಾಕೀತು ಮಾಡಿದ್ದಾರೆ.

ಮುಂಬೈಯಲ್ಲಿ ನಡೆದ ದಾಳಿಯ ಹಿನ್ನೆಲೆಯಲ್ಲಿ ಅಮೆರಿಕದ ಕಾಂಡೊಲೀಸ್ ರೈಸ್ ಅವರು ಭಾರತಕ್ಕೆ ಭೇಟಿ ನೀಡಿದ ಬಳಿಕ, ಪಾಕ್‌ಗೆ ಅನಿರೀಕ್ಷಿತ ಭೇಟಿ ನೀಡಿ, ಈ ಬಗ್ಗೆ ಪಾಕ್ ಅಧಿಕಾರಿಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿರುವುದಾಗಿ ತಿಳಿಸಿದ್ದಾರೆ.

ಅಲ್ಲದೇ ಮುಂಬೈ ದಾಳಿಯ ಹಿಂದೆ ಪಾಕ್‌ ಮೂಲದ ಭಯೋತ್ಪಾದಕರ ಕೈವಾಡ ಇರುವ ಬಗ್ಗೆ ನಿರಾಕರಿಸಲಾಗದಂತಹ ಸಾಕ್ಷಿ ಇರುವುದಾಗಿಯೂ ಅವರು ಪಾಕ್‌ಗೆ ಸ್ಪಷ್ಟ ನುಡಿಗಳಲ್ಲಿ ತಿಳಿಸಿರುವುದಾಗಿ ಮೂಲಗಳು ಹೇಳಿವೆ.

ಪಾಕ್‌ನ ನಿಷೇಧಿತ ಉಗ್ರಗಾಮಿ ಸಂಘಟನೆಯಾದ ಲಷ್ಕರ್ ಎ ತೊಯ್ಬಾ ಈ ದಾಳಿಯ ಹಿಂದಿರುವ ಕುರಿತು ತನಿಖಾಧಿಕಾರಿಗಳಿಗೆ ಬಲವಾದ ಸಾಕ್ಷಿ ದೊರೆತಿರುವುದರಿಂದ ಪಾಕ್ ಶೀಘ್ರವೇ ಕ್ರಮ ಕೈಗೊಳ್ಳಲೇಬೇಕು ಎಂದು ಅಮೆರಿಕ ಒತ್ತಡ ಹೇರತೊಡಗಿದೆ.

ಆ ನಿಟ್ಟಿನಲ್ಲಿ ಅಪರಾಧಿಗಳ ವಿರುದ್ಧ ನಿಷ್ಪಕ್ಷಪಾತವಾಗಿ ಕ್ರಮ ಕೈಗೊಳ್ಳಬೇಕು ಎಂದು ಪಾಕ್ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ, ಪ್ರಧಾನಿ ಯುಸೂಫ್ ರಾಜಾ ಗಿಲಾನಿ, ವಿದೇಶಾಂಗ ಸಚಿವ ಷಾ ಮೆಹಮೂದ್ ಖುರೇಷಿ ಹಾಗೂ ಆರ್ಮಿ ಜನರಲ್ ಅಶ್ಫಾಕ್ ಪರ್ವೆಜ್ ಕಯಾನಿ ಅವರೊಂದಿಗೆ ರೈಸ್ ಚರ್ಚಿಸಿರುವುದಾಗಿ ಮೂಲಗಳು ತಿಳಿಸಿದ್ದು, ಇಲ್ಲದಿದ್ದರೆ ಅಮೆರಿಕವೇ ಕ್ರಮ ಕೈಗೊಳ್ಳಲು ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜಿಂಬಾಬ್ವೆ: ಕಾಲರಾಕ್ಕೆ 575 ಬಲಿ - ವಿಶ್ವಸಂಸ್ಥೆ
ಅಫ್ಘಾನ್‌ಗೆ ಮತ್ತೆ 20ಸಾವಿರ ಸೇನಾ ಪಡೆ:ಅಮೆರಿಕ
ಜರ್ದಾರಿಗೆ 'ಪ್ರಣಬ್' ಬೆದರಿಕೆ: ಪಾಕ್ ಕಟ್ಟೆಚ್ಚರ!
ಪಾಕಿಸ್ತಾನ : ಅವಳಿ ಸ್ಫೋಟಕ್ಕೆ 27 ಬಲಿ
ಆಡ್ವಾಣಿಯನ್ನು ನಮಗೊಪ್ಪಿಸಿ: ಜಮಾತ್ ಉಲ್
ಅಮೆರಿಕ: ಜೈಲು ಶಿಕ್ಷೆ ಕಡಿಮೆಯಾಗಬೇಕೆ,ಶುಶ್ರೂಷೆ ಮಾಡಿ