ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬ ಪೊಲೀಸ್ ಗುಂಡಿಗೆ ಬಲಿಯಾಗಿದ್ದ ಪರಿಣಾಮ ಗ್ರೀಕ್‌ನ ಹಲವು ನಗರಗಳಲ್ಲಿ ಭಾನುವಾರ ಬೆಳಿಗ್ಗೆನಿಂದಲೇ ಹಿಂಸಾಚಾರ ಭುಗಿಲೆದ್ದಿದೆ.
ಶನಿವಾರ ರಾತ್ರಿ ಅಥೆನ್ಸ್‌ನಲ್ಲಿ ಪೊಲೀಸ್ ಪಡೆ ಅಪ್ರಾಪ್ತ ಬಾಲಕನೊಬ್ಬನ ಮೇಲೆ ಗುಂಡು ಹಾರಿಸಿದ್ದರ ಪರಿಣಾಮ. ಉದ್ರಿಕ್ತ ಯುವಕರ ಗುಂಪೊಂದು ಪೊಲೀಸರ ಮೇಲೆ ಪೆಟ್ರೋಲ್ ಬಾಂಬ್ ಎಸೆದಿದ್ದಲ್ಲದೆ, ಹಲವಾರು ಕಾರು, ಅಂಗಡಿ-ಮುಂಗಟ್ಟುಗಳು ಬೆಂಕಿಗೆ ಆಹುತಿಯಾಗಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆ ಇದೀಗ ಗ್ರೀಸ್‌ನಿಂದ ಮತ್ತೊಂದು ಬೃಹತ್ ನಗರವಾಗಿರುವ ಥೆಸ್ಸಾಲೊನಿಕಿಯತ್ತ ಹಬ್ಬಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ. ಆದರೆ ಈ ಘಟನೆಗೆ ಗ್ರೀಕ್‌ನಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದೆ. ಆ ನಿಟ್ಟಿನಲ್ಲಿ ಆಂತರಿಕ ಸಚಿವ ಪ್ರೊಕೊಪಿಸ್ ಪೌಲೋಪೋಲೋಸ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಅನಿರೀಕ್ಷಿತವಾಗಿ ನಡೆದ ಘಟನೆಗೆ ತಾನು ಸಾಂತ್ವಾನ ಹೇಳುವುದಾಗಿ ತಿಳಿಸಿದ ಸಚಿವ ಪೌಲೋಪೋಲೋಸ್, ಪೊಲೀಸ್ ಗುಂಡೇಟಿಗೆ ಸಾವನ್ನಪ್ಪಿರುವ ಘಟನೆಯನ್ನು ತನಿಖೆಗೆ ಆದೇಶಿಸಲಾಗಿದೆ. ಅಲ್ಲದೇ ಅಪರಾಧಿಗೆ ಶಿಕ್ಷೆ ನೀಡಲಾಗುವುದಲ್ಲದೇ, ಇನ್ನು ಮುಂದೆ ಇಂತಹ ಘಟನೆ ಪುನರಾವರ್ತನೆ ಆಗಲಾರದು ಎಂದು ಈ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ. |