ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಕಾಶ್ಮೀರ ಬಿಕ್ಕಟ್ಟು ಇತ್ಯರ್ಥಕ್ಕೆ ಒಬಾಮ ಆಗ್ರಹ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಶ್ಮೀರ ಬಿಕ್ಕಟ್ಟು ಇತ್ಯರ್ಥಕ್ಕೆ ಒಬಾಮ ಆಗ್ರಹ
ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆಯೊಂದಿಗೆ ಕಾಶ್ಮೀರ ಬಿಕ್ಕಟ್ಟು ಇತ್ಯರ್ಥಕ್ಕೆ ಸರಿಯಾದ ಕ್ರಮವನ್ನು ಕೈಗೊಳ್ಳುವಂತೆ ಅಮೆರಿಕದ ನಿಯೋಜಿತ ಅಧ್ಯಕ್ಷ ಬರಾಕ್ ಒಬಾಮಾ ಮನವಿ ಮಾಡಿಕೊಂಡಿದ್ದು, ಭಯೋತ್ಪಾದನೆಯ ನಿರ್ಮ‌ೂಲನೆಗೆ ಬೇಕಾದ ಸೂಕ್ತ ಕಾರ್ಯತಂತ್ರವನ್ನು ರೂಪಿಸಬೇಕೆಂದು ತಿಳಿಸಿದ್ದಾರೆ.

ಒಂದು ರಾಷ್ಟ್ರದ ಮೇಲೆ ದಾಳಿ ಮಾಡಿದಾಗ ಅದಕ್ಕೆ ಸ್ವಯಂರಕ್ಷಣೆ ಮಾಡಿಕೊಳ್ಳುವ ಹಕ್ಕಿದೆ ಮತ್ತು ಇದುವರೆಗೆ ಪಾಕಿಸ್ತಾನ ಸರಕಾರವು ಸರಿಯಾದ ರೀತಿಯಲ್ಲಿ ಸ್ಪಂದಿಸಿದೆ ಎಂದು ಒಬಾಮ ಭಾನುವಾರ ಖಾಸಗಿ ಚಾನೆಲ್‌ವೊಂದಕ್ಕೆ ತಿಳಿಸಿದ್ದಾರೆ.

ಭಯೋತ್ಪಾದನೆ ಅಮೆರಿಕಕ್ಕೆ ಮಾತ್ರವಲ್ಲದೇ ಪಾಕಿಸ್ತಾನಕ್ಕೆ ಕೂಡ ಬೆದರಿಕೆಯಾಗಿದೆ ಎಂಬ ಒಬಾಮ ಹೇಳಿಕೆಯನ್ನು ಡೈಲಿ ಟೈಮ್ಸ್ ವರದಿ ಮಾಡಿದೆ.

ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನ ಗಡಿ ಪ್ರದೇಶದಲ್ಲಿ ನೆಲೆ ಸ್ಥಾಪಿಸಿರುವ ಉಗ್ರರ ಮೇಲೆ ದಾಳಿ ನಡೆಸುವುದರ ಮ‌ೂಲಕ ಭಯೋತ್ಪಾದನೆಯನ್ನು ನಿರ್ಮ‌ೂಲನೆಗೊಳಿಸಲು ಅಮೆರಿಕಕ್ಕೆ ಪಾಕಿಸ್ತಾನದೊಂದಿಗೆ ಮಹತ್ವ ಪೂರ್ಣವಾದ ಸಹಯೋಗದ ಅವಶ್ಯಕತೆಯಿದೆ ಎಂದು ಅವರು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುಂಬೈ ದಾಳಿ: ಲಷ್ಕರ್ ಕಮಾಂಡರ್ ಲಕ್ವಿ ಸೆರೆ
ಶೂಟೌಟ್: ಗ್ರೀಸ್‌‌ನಲ್ಲಿ ಭುಗಿಲೆದ್ದ ಹಿಂಸಾಚಾರ
ಲಷ್ಕರ್ ವಿರುದ್ಧ 48ಗಂಟೆಯೊಳಗೆ ಕ್ರಮ: ಪಾಕ್
ಪಾಕ್‌ನ್ನು ದೂಷಿಸುವುದನ್ನು ನಿಲ್ಲಿಸಿ: ಮುಶರ್ರಫ್
ಲಷ್ಕರ್ ವಿರುದ್ಧ ಪಾಕ್ ಕ್ರಮ ಕೈಗೊಳ್ಳಬೇಕು: ಅಮೆರಿಕದ ಎಚ್ಚರಿಕೆ
ಜಿಂಬಾಬ್ವೆ: ಕಾಲರಾಕ್ಕೆ 575 ಬಲಿ - ವಿಶ್ವಸಂಸ್ಥೆ