ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಕಿಲಿನೊಚ್ಚಿ ವಶದತ್ತ ಲಂಕಾ ಸೈನ್ಯ ದಾಪುಗಾಲು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಿಲಿನೊಚ್ಚಿ ವಶದತ್ತ ಲಂಕಾ ಸೈನ್ಯ ದಾಪುಗಾಲು
ತಮಿಳು ಬಂಡುಕೋರರ ರಾಜಕೀಯ ಕಾರ್ಯಕ್ಷೇತ್ರವಾದ ಕಿಲಿನೊಚ್ಚಿ ಪ್ರದೇಶವನ್ನು ವಶಪಡಿಸಿಕೊಳ್ಳುವತ್ತ ಹಲವು ದಿಕ್ಕುಗಳಿಂದಾಗಿ ಲಂಕಾ ಸೈನ್ಯವು ಮುನ್ನುಗ್ಗುತ್ತಿದ್ದು, ನಗರದ ಹೊರಭಾಗದಲ್ಲಿ ಭಾರೀ ಕಾಳಗ ಏರ್ಪಟ್ಟಿರುವುದಾಗಿ ಲಂಕಾ ಸೇನಾ ಮ‌ೂಲಗಳು ಸೋಮವಾರ ತಿಳಿಸಿವೆ.

ಎಲ್‌ಟಿಟಿಇಯ ಬಂಡುಕೋರರನ್ನು ಗುರಿಯಾಗಿಸಿಕೊಂಡು 350 ಕಿ.ಮೀಟರ್ ದೂರದ ಉತ್ತರ ಕಿಲಿನೊಚ್ಚಿ ಪಟ್ಟಣದಲ್ಲಿ ಪ್ರತಿಕೂಲ ಹವಾಮಾನ ಪರಿಸ್ಥಿತಿ ಮತ್ತು ಬಂಡುಕೋರರ ಪ್ರಬಲವಾದ ಪ್ರತಿರೋಧದ ನಡುವೆಯು ಸೇನಾ ಕಾರ್ಯಾಚರಣೆಯನ್ನು ಮುಂದುವರಿಸುತ್ತಿರುವುದಾಗಿ ಲಂಕಾ ರಕ್ಷಣಾ ಸಚಿವಾಲಯವು ಹೇಳಿದೆ.

ಕಿಲಿನೊಚ್ಚಿಯ ಸಮೀಪ ಪ್ರದೇಶವಾದ ದಕ್ಷಿಣ ಆದಂಪಾನ್, ಪುತುಮುರಿಪುಕುಲಮ್, ಉತ್ತರ ಕೋಕ್ಕುವಿಲ್ ಮತ್ತು ತೆರುಮುರಿಕ್ಯಾಂಡಿ ಪ್ರದೇಶದ ಬಂಡುಕೋರರನ್ನು ಗುರಿಯಾಗಿಸಿ ಸೈನ್ಯದ 57 ಸೇನೆ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಎಲ್‌ಟಿಟಿಇಗೆ ಅಪಾರ ನಷ್ಟವನ್ನುಂಟು ಮಾಡಿದೆಯೆಂದು ತಿಳಿಸಿದೆ.

ಎಲ್‌ಟಿಟಿಇ ವಿರುದ್ಧದ ಕದನದಲ್ಲಿ ಲಂಕಾ ಸೈನ್ಯವು ಬಂಡುಕೋರರು ಅಡಗಿದ್ದ ಎರಡು ಪ್ರದೇಶವನ್ನು ವಶಕ್ಕೆ ಪಡೆದಿದ್ದು, ಇನ್ನೊಂದನ್ನು ನಾಶಪಡಿಸಿದೆ.

ಈ ಪ್ರದೇಶಗಳಲ್ಲಿ ಬಂಡುಕೋರರು ಉಗ್ರವಾದ ಪ್ರತಿರೋಧವನ್ನು ಒಡ್ಡುತ್ತಿದ್ದು, ಆದರೆ ಕಿಲಿನೊಚ್ಚಿ ಮತ್ತು ಮುಲೈತ್ತಿವು ಪ್ರದೇಶಗಳಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಬಂಡುಕೋರರಿಗೆ ಅಪಾರ ನಾಶನಷ್ಟವನ್ನುಂಟು ಮಾಡುವುದರಲ್ಲಿ ಸೈನ್ಯವು ಸಫಲತೆಯನ್ನು ಕಂಡಿರುವುದಾಗಿ ಸಚಿವಾಲಯವು ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಿಎಚ್‌ಪಿ ವಿರುದ್ಧ ತನಿಖೆಗಾಗಿ ಒಬಾಮಗೆ ದೂರು
ಜಪಾನ್ ಪರಮಾಣು ಘಟಕದಲ್ಲಿ ಬೆಂಕಿ-ತಪ್ಪಿದ ಅನಾಹುತ
ಫಿಲಿಫೈನ್ಸ್: ಉಗ್ರರೊಂದಿಗೆ ಘರ್ಷಣೆಯಲ್ಲಿ 24 ಸೈನಿಕರ ಬಲಿ
ಕಾಶ್ಮೀರ ಬಿಕ್ಕಟ್ಟು ಇತ್ಯರ್ಥಕ್ಕೆ ಒಬಾಮ ಆಗ್ರಹ
ಮುಂಬೈ ದಾಳಿ: ಲಷ್ಕರ್ ಕಮಾಂಡರ್ ಲಕ್ವಿ ಸೆರೆ
ಶೂಟೌಟ್: ಗ್ರೀಸ್‌‌ನಲ್ಲಿ ಭುಗಿಲೆದ್ದ ಹಿಂಸಾಚಾರ