ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕ್‌ಗೆ ಯುಎಸ್: ಇನ್ನಷ್ಟು ದಾಳಿಗಳಾಗದಂತೆ ನೋಡಿಕೊಳ್ಳಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್‌ಗೆ ಯುಎಸ್: ಇನ್ನಷ್ಟು ದಾಳಿಗಳಾಗದಂತೆ ನೋಡಿಕೊಳ್ಳಿ
ಕಳೆದ ತಿಂಗಳು ಭಾರತದ ಮುಂಬಯಿ ಮೇಲೆ ನಡೆದಂತಹ ಭಯೋತ್ಪಾದನಾ ದಾಳಿಗಳು, ಭವಿಷ್ಯದಲ್ಲಿ ಮುಂದೆಂದೂ ಪಾಕಿಸ್ತಾನಿ ಮಣ್ಣಿನ ಮೂಲದಿಂದ ನಡೆಯದಂತೆ ಖಚಿತ ಪಡಿಸಲು ಪಾಕಿಸ್ತಾನ ಎಲ್ಲಾ ಆಸಕ್ತರೊಂದಿಗೆ ಒಂದಾಗಿ ಕ್ರಮ ಕೈಗೊಳ್ಳಬೇಕು ಎಂದು ಪಾಕಿಸ್ತಾನಕ್ಕೆ ಅಮೆರಿಕಾ ಹೇಳಿದೆ.

ಕಾಂಡೋಲೀಸಾ ರೈಸ್ ಅವರ ಭಾರತ ಮತ್ತು ಪಾಕಿಸ್ತಾನ ಭೇಟಿಯ ನಂತರ ಪಾಕಿಸ್ತಾನ ಕೈಗೊಳ್ಳುತ್ತಿರುವ ಕೆಲ ಧನಾತ್ಮಕ ನಡೆಗಳನ್ನು ಗುರುತಿಸಿದ್ದು "ನಾವು ಪರಿಸ್ಥಿತಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಲಿದ್ದೇವೆ" ಎಂದು ರಾಜ್ಯ ಘಟಕದ ವಕ್ತಾರ ಸಿಯಾನ್ ಮಾಕ್ ಕಾರ್ಮಕ್ ಸೋಮವಾರ ಹೇಳಿದ್ದಾರೆ.

ರೈಸ್ ಅವರು ತಮ್ಮ ಪ್ರವಾಸದ ವೇಳೆ ಮತ್ತು ವಾಪಾಸ್ಸಾದ ನಂತರವೂ ಹೇಳಿರುವಂತೆ "ಮುಂಬಯಿ ದಾಳಿಗೆ ಜವಾಬ್ದಾರರು ಇನ್ನಷ್ಟು ಹಿಂಸಾತ್ಮಕ, ಉಗ್ರವಾದಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದಂತೆ ಅವರನ್ನು ಕಾನೂನು ಪರಿಮಿತಿಯೊಳಗೆ ತಂದು ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ" ಎಂದು ಅವರು ಹೇಳಿದ್ದಾರೆ.

"ತಡೆಗಟ್ಟುವಿಕೆಯ ಮೇಲೆ ಗಮನ ನೀಡುವುದು ಅಗತ್ಯವಾಗಿದೆ. ಪಾಕಿಸ್ತಾನಿ ಮೂಲದಿಂದ ಇನ್ನಷ್ಟು ದಾಳಿಗಳು ಸಂಭವಿಸುವುದನ್ನು ನಾವು ಬಯಸುವುದಿಲ್ಲ" ಎಂದು ಮಾಕ್ ಕಾರ್ಮಕ್ ಹೇಳಿದ್ದಾರೆ.

ಪಾಕಿಸ್ತಾನ ಕೈಗೊಂಡ ಕ್ರಮಗಳ ಬಗೆಗಿನ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು ತಾವು ಯಾವ ಕ್ರಮಗಳನ್ನು ಕೈಗೊಂಡಿದ್ದೇವೆ ಮತ್ತು ಈ ನಿಟ್ಟಿನಲ್ಲಿ ತಾವೇನನ್ನು ಮಾಡಿ ತೋರಿಸಿದ್ದೇವೆ ಎಂಬುದನ್ನು ಸಾರ್ವಜನಿಕರಿಗೆ ಪಾಕಿಸ್ತಾನ ಸರಾಕಾರವೇ ವಿಷದ ಪಡಿಸಬೇಕು ಎಂದು ಹೇಳಿದ್ದಾರೆ.

ಪಾಕಿಸ್ತಾನ ತಮ್ಮ ನೆಲದಿಂದ ಉಗ್ರವಾದ ಬೆಳೆದು ಬರದಂತೆ ತಡೆಯಲು ಯಾವ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಮೆರಿಕಾ ಬಯಸುತ್ತದೆ ಎಂದು ಪ್ರಶ್ನಿಸಿದ್ದಕ್ಕೆ, ಮಾಕ್‌ ಕಾರ್ಮಕ್, "9/11ದಾಳಿಯಿಂದಾಗಿ ನಾವೇ ಕಲಿತ ಪಾಠದಂತೆ ಭವಿಷ್ಯದ ಭಯೋತ್ಪಾದನಾ ದಾಳಿಯ ಕುರಿತು ಮತ್ತು ಉಗ್ರರ ಜಾಲವನ್ನು ಬೇಧಿಸಲು ಮಾಹಿತಿ ಮುಖ್ಯಪಾತ್ರ ವಹಿಸುತ್ತದೆ. ಆದ್ದರಿಂದ ಮಾಹಿತಿಯನ್ನು ಸಂಗ್ರಹಿಸುವುದು ಮತ್ತು ಆ ಮಾಹಿತಿಯನ್ನು ಹಂಚಿಕೊಳ್ಳುವುದು ಭವಿಷ್ಯದ ಸಂಭವನೀಯ ದಾಳಿಯನ್ನು ತಡೆಗಟ್ಟಲು ಅತ್ಯಂತ ಅಗತ್ಯವಾಗಿದೆ" ಎಂದು ಅವರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಿಲಿನೊಚ್ಚಿ ವಶದತ್ತ ಲಂಕಾ ಸೈನ್ಯ ದಾಪುಗಾಲು
ವಿಎಚ್‌ಪಿ ವಿರುದ್ಧ ತನಿಖೆಗಾಗಿ ಒಬಾಮಗೆ ದೂರು
ಜಪಾನ್ ಪರಮಾಣು ಘಟಕದಲ್ಲಿ ಬೆಂಕಿ-ತಪ್ಪಿದ ಅನಾಹುತ
ಫಿಲಿಫೈನ್ಸ್: ಉಗ್ರರೊಂದಿಗೆ ಘರ್ಷಣೆಯಲ್ಲಿ 24 ಸೈನಿಕರ ಬಲಿ
ಕಾಶ್ಮೀರ ಬಿಕ್ಕಟ್ಟು ಇತ್ಯರ್ಥಕ್ಕೆ ಒಬಾಮ ಆಗ್ರಹ
ಮುಂಬೈ ದಾಳಿ: ಲಷ್ಕರ್ ಕಮಾಂಡರ್ ಲಕ್ವಿ ಸೆರೆ