ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಜಮಾತ್ ಸಂಘಟನೆಗೆ ಪಾಕ್ ನಿಷೇಧ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಮಾತ್ ಸಂಘಟನೆಗೆ ಪಾಕ್ ನಿಷೇಧ
ಭಾರತದ ಒತ್ತಡಕ್ಕೆ ಮಣಿದ ಪಾಕ್
ಭಾರತ ಒತ್ತಡಕ್ಕೆ ಕೊನೆಗೂ ಮಣಿದಿರುವ ಪಾಕಿಸ್ತಾನ ಲಷ್ಕರ್ ಇ ತೊಯ್ಬಾದ ಸಹ ಸಂಘಟನೆಯಾದ ಜಮಾತ್ ಉದ್ ದಾವಾ ಅನ್ನು ನಿಷೇಧಿಸಿರುವುದಾಗಿ ಪಾಕಿಸ್ತಾನದ ಅಬ್ದುಲ್ಲಾ ಹುಸೈನ್ ಹಾರೂನ್ ಅವರು ಬುಧವಾರ ತಿಳಿಸಿದ್ದಾರೆ.

ಪಾಕಿಸ್ತಾನ ಮೂಲದ ಲಷ್ಕರೆ-ಇ-ತೋಯ್ಬಾ ಮೂಲದ ಜಮಾತ್-ಉದ್-ದಾವಾ ಸಂಘಟನೆಯನ್ನು ನಿಷೇಧಿಸಬೇಕು ಎಂಬುದಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಭಾರತ ಒತ್ತಾಯಿಸಿತ್ತು.

ಜಮಾತ್ ಸಂಘಟನೆಯ ಬ್ಯಾಂಕ್ ಖಾತೆಯನ್ನೂ ಕೂಡ ಮಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಹುಸೈನ್ ಹಾರೂನ್ ಈ ಸಂದರ್ಭದಲ್ಲಿ ಹೇಳಿದರು.

ಲಷ್ಕರ್ ಸಹ ಸಂಸ್ಥೆಯಾದ ಜಮಾತ್ ಬ್ಯಾಂಕ್ ಖಾತೆಯ ಮೂಲಕ ಹವಾಲ ಹಣದ ವಹಿವಾಟು ನಡೆಸುತ್ತಿತ್ತು. ಈ ಹಿನ್ನೆಲೆಯಲ್ಲಿ ಜಮಾತ್ ಬ್ಯಾಂಕ್ ಖಾತೆಯನ್ನೂ ಮಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪಾಕ್ ಮೂಲದ ಭಯೋತ್ಪಾದಕ ಸಂಘಟನೆಗಳ ಕೈವಾಡ ಭಾರತದ ದಾಳಿಯ ಹಿಂದೆ ಸ್ಪಷ್ಟವಾಗಿದ್ದು, ಈ ಬಗ್ಗೆ ಪಾಕ್ ಕಠಿಣ ನಿಲುವು ಕೈಗೊಳ್ಳಬೇಕು ಎಂದು ಮಂಗಳವಾರ ಭಾರತ ಆಗ್ರಹಿಸಿತ್ತು.

ಮಂಗಳವಾರ ಮತ್ತೊಬ್ಬ ಕುಖ್ಯಾತ ಉಗ್ರ ಜೈಶ್ ಎ ಮೊಹಮ್ಮದ್‌ನ ವರಿಷ್ಠ ಮಸೂದ್‌ನನ್ನು ಪಾಕ್ ಗೃಹಬಂಧನದಲ್ಲಿ ಇರಿಸಿರುವುದಾಗಿ ತಿಳಿಸಿತ್ತು. ಕಂದಹಾರ್ ವಿಮಾನ ಅಪಹರಣ, ಸಂಸತ್ ಮೇಲಿನ ದಾಳಿ ಹಿಂದಿನ ಪ್ರಮುಖ ರೂವಾರಿಯಾಗಿರುವ ಮಸೂದ್ ಇದೀಗ ಪಾಕ್‌ನಲ್ಲಿ ಜೈಶ್ ಹೆಸರಿನ ಸಂಘಟನೆ ಮೂಲಕ ಭಯೋತ್ಪಾದಕ ಚಟುವಟಿಕೆ ನಡೆಸುತ್ತಿದ್ದಾನೆ. ಆದರೆ ಆತನನ್ನು ಪಾಕ್ ಮೂರು ಬಾರಿ ಬಂಧಿಸಿದ್ದರೂ ಕೂಡ ಯಾವುದೇ ಆರೋಪಪಟ್ಟಿ ದಾಖಲಿಸಿಕೊಳ್ಳದೇ ಬಿಡುಗಡೆಗೊಳಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಂಧಿತ ಉಗ್ರರನ್ನು ಭಾರತಕ್ಕೆ ಹಸ್ತಾಂತರಿಸುವುದಿಲ್ಲ:ಪಾಕ್
ಪಾಕ್‌ಗೆ ಯುಎಸ್: ಇನ್ನಷ್ಟು ದಾಳಿಗಳಾಗದಂತೆ ನೋಡಿಕೊಳ್ಳಿ
ಕಿಲಿನೊಚ್ಚಿ ವಶದತ್ತ ಲಂಕಾ ಸೈನ್ಯ ದಾಪುಗಾಲು
ವಿಎಚ್‌ಪಿ ವಿರುದ್ಧ ತನಿಖೆಗಾಗಿ ಒಬಾಮಗೆ ದೂರು
ಜಪಾನ್ ಪರಮಾಣು ಘಟಕದಲ್ಲಿ ಬೆಂಕಿ-ತಪ್ಪಿದ ಅನಾಹುತ
ಫಿಲಿಫೈನ್ಸ್: ಉಗ್ರರೊಂದಿಗೆ ಘರ್ಷಣೆಯಲ್ಲಿ 24 ಸೈನಿಕರ ಬಲಿ