ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಮುಂಬೈ ದಾಳಿಯ ಹಿಂದೆ ದಾವೂದ್ ಕೈವಾಡ: ರಷ್ಯಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಂಬೈ ದಾಳಿಯ ಹಿಂದೆ ದಾವೂದ್ ಕೈವಾಡ: ರಷ್ಯಾ
ಕಳೆದ ತಿಂಗಳು ವಾಣಿಜ್ಯ ನಗರಿ ಮುಂಬೈಯಲ್ಲಿ ನಡೆದ ಭಯೋತ್ಪಾದನಾ ದಾಳಿಯ ಹಿಂದೆ ಮಾಫಿಯಾ ಹಾಗೂ ಭೂಗತ ಜಗತ್ತಿನ ದೊರೆ ದಾವೂದ್ ಇಬ್ರಾಹಿಂನ ಕೈವಾಡ ಇರುವುದಾಗಿ ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ.

ಭೂಗತ ಜಗತ್ತಿನ ಪಾತಕಿ ದಾವೂದ್ ಇಬ್ರಾಹಿಂ ಮುಂಬೈ ಮೇಲಿನ ದಾಳಿಗೆ ಬೇಕಾದ ಎಲ್ಲ ರೀತಿಯ ನೆರವನ್ನು ನೀಡಿರುವುದಾಗಿ ರಷ್ಯಾದ ಮಾದಕ ನಿಗ್ರಹ ದಳದ ನಿರ್ದೇಶಕ ವಿಕ್ಟರ್ ಐವನೊವ್ ಅವರು ಹೇಳಿದರು.

ಅವರು ಸರಕಾರದ ಅಧಿಕೃತ ಮಾಧ್ಯಮವಾದ ರೊಸ್ಸಿಕಾಯಾ ಗಜೆಟಾಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿರುವುದಾಗಿ ವರದಿ ಹೇಳಿದೆ. ಭಯೋತ್ಪಾದನೆಗೆ ಕುಮ್ಮಕ್ಕು ನೀಡಲು ಕಾನೂನು ಬಾಹಿರ ಮಾದಕ ವಸ್ತುಗಳ ಕಳ್ಳಸಾಗಣೆ ಜಾಲವನ್ನು ಉಪಯೋಗಿಸಿಕೊಳ್ಳುತ್ತಿರುವುದಾಗಿ ಅವರು ದೂರಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಹೆರಾಯಿನ್ ಕಳ್ಳಸಾಗಣೆಯ ಮೂಲಕ ಅಪಾರ ಪ್ರಮಾಣದಲ್ಲಿ ಹಣಗಳಿಸಿರುವ ದಾವೂದ್ ಸೇರಿದಂತೆ ಇನ್ನಿತರ ಉಗ್ರಗಾಮಿ ಸಂಘಟನೆಗಳು, ಆ ಹಣವನ್ನು ಪಾತಕ ಮತ್ತು ಭಯೋತ್ಪಾದನಾ ಜಾಲ ಬೆಳೆಸಲು ಉಪಯೋಗಿಸುತ್ತಿರುವುದಾಗಿ ಐವನೊವ್ ಹೇಳಿದ್ದಾರೆ.

ದಾವೂದ್ ಇಬ್ರಾಹಿಂ 1993ರ ಸರಣಿ ಬಾಂಬ್ ಸ್ಫೋಟದ ರೂವಾರಿಯಾಗಿದ್ದು, ಇದೀಗ ಪಾಕ್‌ನಲ್ಲಿ ಐಎಸ್‌ಐ ಕೃಪಾಪೋಷಿತದಲ್ಲಿ ರಕ್ಷಣೆ ಪಡೆಯುತ್ತಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜಮಾತ್ ಸಂಘಟನೆಗೆ ಪಾಕ್ ನಿಷೇಧ
ಬಂಧಿತ ಉಗ್ರರನ್ನು ಭಾರತಕ್ಕೆ ಹಸ್ತಾಂತರಿಸುವುದಿಲ್ಲ:ಪಾಕ್
ಪಾಕ್‌ಗೆ ಯುಎಸ್: ಇನ್ನಷ್ಟು ದಾಳಿಗಳಾಗದಂತೆ ನೋಡಿಕೊಳ್ಳಿ
ಕಿಲಿನೊಚ್ಚಿ ವಶದತ್ತ ಲಂಕಾ ಸೈನ್ಯ ದಾಪುಗಾಲು
ವಿಎಚ್‌ಪಿ ವಿರುದ್ಧ ತನಿಖೆಗಾಗಿ ಒಬಾಮಗೆ ದೂರು
ಜಪಾನ್ ಪರಮಾಣು ಘಟಕದಲ್ಲಿ ಬೆಂಕಿ-ತಪ್ಪಿದ ಅನಾಹುತ