ಲಷ್ಕರ್ ಇ ತೊಯ್ಬಾದ ಸಹ ಸಂಘಟನೆಯಾದ ಜಮಾತ್ ಉದ್ ದವಾ ಅನ್ನು ಪಾಕಿಸ್ತಾನ ಸರಕಾರ ನಿಷೇಧಿಸುವುದಿಲ್ಲ ಎಂದು ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಬುಧವಾರ ಸ್ಪಷ್ಟಪಡಿಸಿದ್ದಾರೆ.
ಜಮಾತ್ ಭಯೋತ್ಪಾದನೆ ಕೃತ್ಯಗಳಲ್ಲಿ ಭಾಗಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತನಿಖೆಯಿಂದ ತಿಳಿಯದೆ ನಿಷೇಧಿಸುವ ಪ್ರಶ್ನೆ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ, ಅಲ್ಲದೇ ಈ ಬಗ್ಗೆ ನಿಷೇಧ ಹೇರುವಂತೆ ಭಾರತವಾಗಲಿ ಅಂತಾರಾಷ್ಟ್ರೀಯ ಮಟ್ಟದಿಂದಲೂ ಯಾವುದೇ ಒತ್ತಡ ಬಂದಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಲಷ್ಕರ್ ಇ ತೊಯ್ಬಾದ ಸಹ ಸಂಘಟನೆಯಾದ ಜಮಾತ್ ಉದ್ ದವಾ ಅನ್ನು ನಿಷೇಧಿಸಿ, ಬ್ಯಾಂಕ್ ಖಾತೆಯನ್ನು ಮಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಪಾಕ್‌ನ ರಾಷ್ಟ್ರೀಯ ಭದ್ರತಾ ಸಲಹೆಗಾರ ಹಾಗೂ ಯುನೈಟೆಡ್ ನೇಷನಲ್ಲಿನ ಪಾಕ್ ರಾಯಭಾರಿಯಾಗಿರುವ ಅಬ್ದುಲ್ಲಾ ಹುಸೈನ್ ಹಾರೂನ್ ಅವರು ಹೇಳಿಕೆ ನೀಡಿದ ಕೆಲವೇ ಹೊತ್ತಿನಲ್ಲಿ ಪಾಕ್ ಈ ಪ್ರತಿಕ್ರಿಯೆ ನೀಡಿದೆ. |