ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಇರಾಕ್‌ನಿಂದ ಬ್ರಿಟನ್ ಸೇನಾಪಡೆ ವಾಪಸ್: ವರದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇರಾಕ್‌ನಿಂದ ಬ್ರಿಟನ್ ಸೇನಾಪಡೆ ವಾಪಸ್: ವರದಿ
ಇರಾಕ್‌ನಲ್ಲಿ ಕಾರ್ಯಾಚರಿಸುತ್ತಿರುವ ಎಲ್ಲಾ ಸೇನಾ ಪಡೆಗಳನ್ನು ಬ್ರಿಟಿಷ್ ಸರಕಾರವು ಜೂನ್ ತಿಂಗಳೊಳಗೆ ಹಿಂತೆಗೆದುಕೊಳ್ಳಲಿದೆಯೆಂದು ವಾರ್ತಾ ಮೂಧ್ಯಮದ ವರದಿಯೊಂದು ತಿಳಿಸಿದೆ.

ಬ್ರಿಟನ್ ಮಾರ್ಚ್ ತಿಂಗಳಲ್ಲಿ ಇರಾಕ್‌ನಲ್ಲಿ ಕಾರ್ಯಾಚರಿಸುತ್ತಿರುವ ಸೇನಾ ಪಡೆಗಳನ್ನು ಹಂತಹಂತವಾಗಿ ವಾಪಸ್ ಕರೆಯಲು ಆರಂಭಿಸಲಿದ್ದು, ತನ್ನ ಕೊನೆಯ ಸೇನೆಯನ್ನು ದಕ್ಷಿಣ ಇರಾಕ್‌ನ ಬಾಸ್ರಾ ಪ್ರದೇಶದಿಂದ ಜೂನ್ ತಿಂಗಳಲ್ಲಿ ಹಿಂತೆಗೆದುಕೊಳ್ಳಲಿದೆಯೆಂದು ಉನ್ನತ ರಕ್ಷಣಾ ಮ‌ೂಲಗಳ ಹೇಳಿಕೆಯನ್ನು ಗಾರ್ಡಿಯನ್ ತಿಳಿಸಿದ್ದಾರೆ. ಈ ಹೇಳಿಕೆಯನ್ನು ಡೈಲಿ ಮೈಲ್ ಕೂಡ ತನ್ನ ವರದಿಯಲ್ಲಿ ಹೇಳಿದೆ.

ಇರಾಕ್‌ನಲ್ಲಿ ನೆಲೆನಿಂತಿರುವ 4,000 ಬ್ರಿಟನ್ ಸೈನಿಕರಲ್ಲಿ ಹೆಚ್ಚಿನ ಸಂಖ್ಯೆಯವರು ವಿಮೂನ ನಿಲ್ದಾಣವನ್ನು ಕೇಂದ್ರಿಕರಿಸಿದ್ದರು. ಈ ಮೊದಲು ಬ್ರಿಟನ್ ಪ್ರಧಾನಿಯಾದ ಗೋರ್ಡನ್ ಬ್ರೌನ್ ಸರಕಾರವು ಜನವರಿಯಲ್ಲಿ ಸೇನೆಯನ್ನು ಹಿಂತೆಗೆದುಕೊಳ್ಳುವುದಾಗಿ ತಿಳಿಸಿದ್ದರು.

2009ರ ಇರಾಕ್ ಮೂಲಭೂತ ಯೋಜನೆಯಲ್ಲಿ ಬದಲಾವಣೆಯಾಗಲಿದೆ ಎಂಬ ಸಚಿವರ ಹೇಳಿಕೆಯನ್ನು ರಕ್ಷಣಾ ಮಂತ್ರಾಲಯವು ಪುನರಾವರ್ತಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜಮಾತ್ ನಿಷೇಧ ಇಲ್ಲ: ಪಾಕ್ ತಿಪ್ಪರಲಾಗ
ಮುಂಬೈ ದಾಳಿಯ ಹಿಂದೆ ದಾವೂದ್ ಕೈವಾಡ: ರಷ್ಯಾ
ಜಮಾತ್ ಸಂಘಟನೆಗೆ ಪಾಕ್ ನಿಷೇಧ
ಬಂಧಿತ ಉಗ್ರರನ್ನು ಭಾರತಕ್ಕೆ ಹಸ್ತಾಂತರಿಸುವುದಿಲ್ಲ:ಪಾಕ್
ಪಾಕ್‌ಗೆ ಯುಎಸ್: ಇನ್ನಷ್ಟು ದಾಳಿಗಳಾಗದಂತೆ ನೋಡಿಕೊಳ್ಳಿ
ಕಿಲಿನೊಚ್ಚಿ ವಶದತ್ತ ಲಂಕಾ ಸೈನ್ಯ ದಾಪುಗಾಲು