ಸೋಮಾಲಿ ಕಡಲ್ಗಳ್ಳರು ಗಲ್ಪ್ ಆಫ್ ಆಡೆನ್‌ನಲ್ಲಿ ಸೆಪ್ಟೆಂಬರ್‌ನಲ್ಲಿ ಅಪಹರಣಗೈದ ಎಮ್‌ವಿ ಕಾಪ್ಟನ್ ಸ್ಟೆಪನ್ಸ್ ಎಂಬ ಗ್ರೀಕ್ ಹಡಗನ್ನು ಬಂಧಮುಕ್ತಗೊಳಿಸಿದೆ ಎಂದು ಸ್ಥಳೀಯ ನೌಕಯಾನ ಸಂಸ್ಥೆ ತಿಳಿಸಿದೆ.
ಹಡಗು ಹಾಗೂ 19 ಸಿಬ್ಬಂದಿಗಳನ್ನು ಬಂಧಮುಕ್ತಗೊಳಿಸಲಾಗಿದೆ. ಸೆಪ್ಟೆಂಬರ್ 21ರಂದು ಸೋಮಾಲಿ ಕಡಲ್ಗಳ್ಳರಿಂದ ಅಪಹರಿಸಲ್ಪಟ್ಟ ಹಡಗಿನಲ್ಲಿ ಓರ್ವ ಉಕ್ರೇನ್ ಮತ್ತು ಓರ್ವ ಚೀನಾ ಹಾಗೂ 17 ಮಂದಿ ಫಿಲಿಫೈನ್ಸ್‌ನ ಸಿಬ್ಬಂದಿಗಳು ಇದ್ದರು.
ಅಥೆನ್ಸ್‌ನ ಚಾರ್ಟ್ವವಲ್ಡ್ ನೌಕದಳದ ಹಡಗುಗಳಲ್ಲಿ ಒಂದಾದ ಎಮ್‌ವಿ ಕಾಪ್ಟನ್ ಸ್ಟೆಪನ್ಸ್ ಹಡಗು ಮತ್ತು 19 ಸಿಬ್ಬಂದಿಗಳನ್ನು ಸೋಮಾಲಿ ಕಡಲ್ಗಳ್ಳರು ಕಳೆದ 11 ತಿಂಗಳುಗಳಿಂದ ಬಂಧನದಲ್ಲಿರಿಸಿದ್ದು, ಇದೀಗ ಬಂಧಮುಕ್ತಗೊಳಿಸಲಾಗಿದೆಯೆಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಹಡಗಿನಲ್ಲಿದ್ದ ಸಿಬ್ಬಂದಿಗಳೆಲ್ಲರು ಆರೋಗ್ಯವಂತರಾಗಿದ್ದಾರೆಂದು ಉಕ್ರೇನ್‌ನ ವಿದೇಶಾಂಗ ಸಚಿವಾಲಯವು ತಿಳಿಸಿದೆ. |