ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಇಲಿನೋಯ್ ರಾಜ್ಯಪಾಲರ ರಾಜೀನಾಮೆಗೆ ಒಬಾಮ ಆಗ್ರಹ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಲಿನೋಯ್ ರಾಜ್ಯಪಾಲರ ರಾಜೀನಾಮೆಗೆ ಒಬಾಮ ಆಗ್ರಹ
ಭ್ರಷ್ಟಾಚಾರ ಆರೋಪದ ಮೇಲೆ ಸೆರೆಯಾಗಿರುವ ಇಲಿನೋಯ್ ರಾಜ್ಯಪಾಲ ರೊಡ್ ಬ್ಲಾಗೋಜೆವಿಚ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ನಿಯೋಜಿತ ಅಧ್ಯಕ್ಷ ಬರಾಕ್ ಒಬಾಮ ಆಗ್ರಹಿಸಿದ್ದಾರೆ.

ಈ ಪರಿಸ್ಥಿತಿಯಲ್ಲಿ ರಾಜ್ಯಪಾಲ ರೊಡ್ ಅವರು ಇಲಿನೋಯ್ ಜನತೆಗೆ ಸಮರ್ಪಕ ಸೇವೆ ನೀಡಲು ಸಾಧ್ಯವಿಲ್ಲ ಎಂದು ಬರಾಕ್ ಅವರು ತಿಳಿಸಿರುವುದಾಗಿ ಒಬಾಮ ಅವರ ವಕ್ತಾರ ರೋಬರ್ಟ್ ಗಿಬ್ಸ್ ತಿಳಿಸಿರುವುದಾಗಿ ವಾಷಿಂಗ್ಟನ್ ಪೋಸ್ಟ್ ವರದಿ ವಿವರಿಸಿದೆ.

ಅಮೆರಿಕದ ನಿಯೋಜಿತ ಅಧ್ಯಕ್ಷರಾದ ಬಳಿಕ ಬರಾಕ್ ಒಬಾಮ ಅವರ ಇಲಿನೋಯ್ ಸೆನೆಟ್ ಸೀಟ್ ತೆರವಾಗಿದ್ದು, ಆ ಸ್ಥಾನದ ಟಿಕೆಟ್‌ ಅನ್ನು ರಾಜ್ಯಪಾಲ ರೊಡ್ ಲಂಚಕ್ಕಾಗಿ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪದ ಮೇಲೆ ಮಂಗಳವಾರ ಬಂಧಿಸಲಾಗಿತ್ತು.

ನವೆಂಬರ್ 4ರ ಅಧ್ಯಕ್ಷೀಯ ಚುನಾವಣೆಯಲ್ಲಿ ಬರಾಕ್ ಅಂತಿಮ ಗೆಲವು ಸಾಧಿಸಿದ ಬಳಿಕ, ಇಲಿನೋಯ್‌ನ ತಮ್ಮ ಸೆನೆಟ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ತನ್ನ ಕ್ಷೇತ್ರವಾದ ಇಲಿನೋಯ್‌ನಲ್ಲಿಯೇ ಭ್ರಷ್ಟಾಚಾರ ಎಸಗಿ ರಾಜ್ಯಪಾಲ ರೊಡ್ ಬಂಧಿತರಾಗಿರುವುದು ತುಂಬಾ ದುಃಖಕರವಾದದ್ದು ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಬರಾಕ್, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜಮಾತ್ ಉದ್ ದಾವಾ ಮೇಲೆ ವಿಶ್ವಸಂಸ್ಥೆ ನಿಷೇಧ
ಬ್ರಿಟನ್ ಉಪಸಭಾಧ್ಯಕ್ಷರಾಗಿ ಸ್ವರಾಜ್ ಪೌಲ್
ಜಮಾತ್ ನಿಷೇಧಕ್ಕೆ ಚೀನಾ 3 ಬಾರಿ ಅಡ್ಡಗಾಲು !
ಸೋಮಾಲಿ ಕಡಲ್ಗಳ್ಳರಿಂದ ಗ್ರೀಕ್ ಹಡಗು ಬಂಧಮುಕ್ತ
ಉಳಿದ 20 ಆತ್ಮಾಹುತಿ ಉಗ್ರರು ನಾಪತ್ತೆ: ನ್ಯೂ.ಟೈಮ್ಸ್
ಇರಾಕ್‌ನಿಂದ ಬ್ರಿಟನ್ ಸೇನಾಪಡೆ ವಾಪಸ್: ವರದಿ