ಅಘ್ಘಾನಿಸ್ಥಾನದಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಸುವ ಉಗ್ರಗಾಮಿಗಳನ್ನು ಮಟ್ಟಹಾಕಲು ಅಮೆರಿಕ ಸೇನಾ ಪಡೆಗಳನ್ನು ಅಘ್ಘಾನಿಸ್ಥಾನಕ್ಕೆ ಕಳುಹಿಸಲು ನಿರ್ಧಾರ ಕೈಗೊಂಡಿದ್ದು, ಇದರ ಅಂಗವಾಗಿ ಅಮೆರಿಕ ರಕ್ಷಣಾ ಕಾರ್ಯದರ್ಶಿಯಾದ ರೊಬೆರ್ಟ್ ಗೇಟ್ಸ್ ಗುರುವಾರ ಅಫ್ಘಾನ್‌ಗೆ ಭೇಟಿ ನೀಡಿದ್ದಾರೆ.
ತಾಲಿಬಾನ್ ಉಗ್ರರ ವಿರುದ್ಧ ಕಾರ್ಯಾಚರಣೆಯನ್ನು ಕೈಗೊಳ್ಳುತ್ತಿರುವ ಕಮಾಂಡರ್‌ಗಳನ್ನು ಗೇಟ್ಸ್ ಭೇಟಿಯಾಗಿ ಮಾತುಕತೆ ನಡೆಸಿದರು. ಅಘ್ಘಾನ್‌ಗೆ ಇನ್ನೂ ಹೆಚ್ಚಿನ ಸೈನಿಕರ ರವಾನೆಗೆ ವಾಷಿಂಗ್ಟನ್ ಆಗ್ರಹ ವ್ಯಕ್ತಪಡಿಸಿದ್ದು, ಇದೇ ಸಮಯ ಅಫ್ಘಾನ್‌ನಲ್ಲಿ ವಿದೇಶಿ ಸೇನೆ ಎದುರಿಸುವ ತೊಂದರೆಯ ಕುರಿತು ಎಚ್ಚರ ವಹಿಸಲಿದೆ ಎಂದು ಹೇಳಿದರು.
ಬೇಸಿಗೆ ಕಾಲದಲ್ಲಿ ಹೆಚ್ಚುವರಿಯಾಗಿ ಎರಡು ಸೇನಾಪಡೆಗಳನ್ನು ಅಘ್ಘಾನ್‌ಗೆ ಕಳುಹಿಸಲಾಗುವುದೆಂದು ಗೇಟ್ಸ್ ಅವರು ವಿಮಾನಯಾನದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಅಮೆರಿಕ ತನ್ನ ಹತ್ತನೇ ತುಕಡಿ ಸೇನಾಪಡೆಯನ್ನು ಜನವರಿಯಲ್ಲಿ ಕಳುಹಿಸಲು ತೀರ್ಮಾನಿಸಲಾಗಿದ್ದು, ಮತ್ತೆ ಎರಡು ಹೆಚ್ಚುವರಿ ಸೇನಾ ಪಡೆಯನ್ನು ಕಳುಹಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ ಸೇನಾ ಪಡೆಗಳನ್ನು ನಿಯೋಜಿಸಿದ್ದರು, ಅಫ್ಘಾನ್‌ನಲ್ಲಿ ಹೆಚ್ಚುವರಿ 20ಸಾವಿರ ಸೈನಿಕರ ಕೊರತೆಯನ್ನು ಅನುಭವಿಸುತ್ತಿದೆ ಎಂದು ಅಫ್ಘಾನಿಸ್ಥಾನದ ಅಮೆರಿಕ ಮತ್ತು ನ್ಯಾಟೋ ಪಡೆಗಳ ಮುಖ್ಯಸ್ಥನಾದ ಜನರಲ್ ಮೆಕ್‌ಕೆರ್ರನ್ ತಿಳಿಸಿದರು. ಅಫ್ಘಾನಿಸ್ಥಾನದಲ್ಲಿ ಒಟ್ಟು 32,000 ಅಮೆರಿಕ ಸೇನಾಪಡೆ ಕಾರ್ಯಾಚರಿಸುತ್ತಿದೆ.
|