ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಜಮಾತ್ ಮೇಲೆ ನಿಷೇಧ ಹೇರಿದ ಪಾಕ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಮಾತ್ ಮೇಲೆ ನಿಷೇಧ ಹೇರಿದ ಪಾಕ್
ಜಮಾತ್ ಉದ್ ದಾವಾ ಮುಖ್ಯಸ್ಥ ಹಫೀಜ್ ಸಯೀದ್ ರೆಹಮಾನ್ ಮಲ್ಲಿಕ್ ಮತ್ತು ಇತರ ಎಂಟು ಮಂದಿಯನ್ನು ಗೃಹಬಂಧನಕ್ಕೆ ಒಳಪಡಿಸಲಾಗಿದೆ ಎಂಬ ವರದಿಗಳಿವೆ.

ಗುರುವಾರ ಪಾಕಿಸ್ತಾನದ ಒಳಾಡಳಿತ ಸಚಿವಾಲಯದ ಮುಖ್ಯಸ್ಥ ರೆಹಮಾನ್ ಮಲ್ಲಿಕ್ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಜಮಾತ್ ಉದ್ ದಾವಾ ಸಂಘಟನೆಯ ಮೇಲೆ ನಿಷೇಧ ಹೇರಲಾಗಿದೆ ಎಂದು ಹೇಳಿಕೆಯೊಂದರಲ್ಲಿ ತಿಳಿಸಿದ್ದರು.

"ಲಾಹೋರ್‌ನಲ್ಲಿರುವ ಹಫೀಜ್ ಮನೆಯನ್ನು ಪೊಲೀಸರು ಸುತ್ತುವರೆದಿದ್ದು, ಅವನು ಮನೆಯಿಂದ ಹೊರಹೋಗುವುದು ಸಾಧ್ಯವಿಲ್ಲವೆಂದು ಆತನಿಗೆ ತಿಳಿಸಿದ್ದಾರೆ. ಸಧ್ಯದಲ್ಲೆ ಬಂಧನದ ಆದೇಶವನ್ನು ಆಧೀಕೃತವಾಗಿ ನೀಡಲಾಗುವುದು ಎಂದು ಅವರು ಹಫೀಜ್‌ಗೆ ತಿಳಿಸಿದ್ದಾರೆ" ಎಂದು ಹಫೀಜ್‌ ವಕ್ತಾರ ಅಬ್ದುಲಾ ಮಾಂಟೆಜಿರ್ ತಿಳಿಸಿದ್ದಾರೆ.

ಜಮಾತ್ ಉದ್ ದಾವಾದ ಕಛೇರಿಗಳನ್ನು ಪಾಕಿಸ್ತಾನದ ಎಲ್ಲಾ ಕಡೆಗಳಲ್ಲೂ ಸೀಲ್ ಮಾಡಲಾಗುತ್ತಿದೆ ಮತ್ತು ಅದರ ಕಾರ್ಯಕರ್ತರ ಮೇಲೆ ಕಣ್ಣಿಡಲಾಗಿದೆ ಎಂದು ಸಚಿನ ರೆಹಮಾನ್ ಮಲ್ಲಿಕ್ ಹೇಳಿದ್ದಾರೆ.

ಏತನ್ಮಧ್ಯೆ, ಜಮಾತ್‌ನ ಮತ್ತು ಸಯೀದ್ ಸೇರಿದಂತೆ ನಾಲ್ವರು ಎಲ್‌ಇಟಿ ಮುಖಂಡರ ಎಲ್ಲಾ ಬ್ಯಾಂಕ್ ಖಾತೆಗಳನ್ನು ತಡೆಹಿಡಿಯಬೇಕಾಗಿ ಪಾಕಿಸ್ತಾನದ ಸ್ಟೇಟ್ ಬ್ಯಾಂಕ್ ಎಲ್ಲಾ ಬ್ಯಾಂಕುಗಳಿಗೆ ಆದೇಶ ನೀಡಿದೆ. ಜಾಕೀರ್ ರೆಹಮಾನ್ ಲಕ್ವಿ, ಹಾಜಿ ಮೊಹಮ್ಮದ್ ಅಶ್ರಫ್ ಮತ್ತು ಅಹಮ್ಮದ್ ಬಾಜಿಕ್ ಈ ಆದೇಶಕ್ಕೆ ಒಳಪಟ್ಟ ಇತರ ಉಗ್ರರು. ಲಕ್ವಿಯನ್ನು ಮುಂಬಯಿ ದಾಳಿಯ ಮಾಸ್ಟರ್ ಮೈಂಡ್ ಎಂಬುದಾಗಿ ಗುರುತಿಸಲಾಗಿದೆ, ಆಶ್ರಫ್ ಎಲ್ಇಟಿಯಾ ಹಣಕಾಸು ಮುಖ್ಯಸ್ಥನೆನ್ನಲಾಗಿದೆ ಮತ್ತು ಬಾಜಿಕ್‌ನನ್ನು ಫೈನಾನ್‌ಶಿಯರ್ ಆಗಿ ಗುರುತಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಫ್ಘಾನ್‌ಗೆ ಅಮೆರಿಕದ ಗೇಟ್ಸ್ ಭೇಟಿ
ವಿಶ್ವಸಂಸ್ಥೆ ನಿಷೇಧಕ್ಕೆ ಹೆದರುವುದಿಲ್ಲ: ಜಮಾತ್
ಸೋಮಾಲಿ ಕಡಲ್ಗಳ್ಳರಿಂದ 2 ಯೆಮೆನ್ ಹಡಗು ಅಪಹರಣ
ಇಸ್ರೇಲ್ ಪ್ರಜೆಗಳು ಗೋವಾಕ್ಕೆ ತೆರಳದಂತೆ ತಾಕೀತು
ಇಲಿನೋಯ್ ರಾಜ್ಯಪಾಲರ ರಾಜೀನಾಮೆಗೆ ಒಬಾಮ ಆಗ್ರಹ
ಜಮಾತ್ ಉದ್ ದಾವಾ ಮೇಲೆ ವಿಶ್ವಸಂಸ್ಥೆ ನಿಷೇಧ