ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಮುಂಬೈ ದಾಳಿಯ ಪುರಾವೆ ಒದಗಿಸಲು ಪಾಕ್ ಮನವಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಂಬೈ ದಾಳಿಯ ಪುರಾವೆ ಒದಗಿಸಲು ಪಾಕ್ ಮನವಿ
ಮುಂಬೈ ಭಯೋತ್ಪಾದನಾ ದಾಳಿಗೆ ಸಂಬಂಧಿಸಿದಂತ ಮಾಹಿತಿ ಹಾಗೂ ಸಾಕ್ಷ್ಯಗಳನ್ನು ಹಂಚಿಕೊಳ್ಳುವಂತೆ ಪಾಕಿಸ್ತಾನ ಭಾರತಕ್ಕೆ ಮನವಿ ಮಾಡಿಕೊಂಡಿದೆ.

ತನಿಖೆಯನ್ನು ಸಮರ್ಪಕವಾಗಿ ಮುಂದುವರಿಸುವ ನಿಟ್ಟಿನಲ್ಲಿ ಮಾಹಿತಿ ಮತ್ತು ಪುರಾವೆಗಳ ವಿನಿಮಯ ಅತ್ಯಗತ್ಯವಾಗಿದ್ದು, ಎರಡು ದೇಶಗಳ ಸಹಕಾರಕ್ಕೂ ಮುಖ್ಯವಾಗಿದೆ ಎಂದು ಪಾಕ್ ಅಭಿಪ್ರಾಯ ವ್ಯಕ್ತಪಡಿಸಿದೆ.

ಮುಂಬೈ ದಾಳಿಗೆ ಸಂಬಂಧಿಸಿದ ಮಾಹಿತಿ ಅಥವಾ ಸಾಕ್ಷ್ಯಗಳನ್ನು ಪಾಕ್ ಜೊತೆಗೆ ಹಂಚಿಕೊಳ್ಳಲು ತಯಾರಿಲ್ಲದಿದ್ದರೂ ಕೂಡ, ನಾವು ಕೋರಿಕೆ ಸಲ್ಲಿಸುತ್ತಿರುವುದಾಗಿ ಪಾಕ್ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ ತಿಳಿಸಿದ್ದಾರೆ.

ಎರಡು ದೇಶಗಳಲ್ಲಿ ತಾಂಡವಾಡುತ್ತಿರುವ ಭಯೋತ್ಪಾದನೆಯನ್ನು ಮಟ್ಟಹಾಕುವಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಸಹಕಾರ ಅತ್ಯಗತ್ಯವಾಗಿದೆ ಎಂದು ಖುರೇಷಿ ಗುರುವಾರ ರಾತ್ರಿ ಪಿಟಿವಿಗೆ ನೀಡಿದ ಹೇಳಿಕೆಯಲ್ಲಿ ನುಡಿದಿದ್ದಾರೆ.

ಅಲ್ಲದೇ ಮುಂಬೈಯ ಭಯೋತ್ಪಾದನಾ ದಾಳಿ ಕುರಿತಾಗಿ ಜಂಟಿ ಆಯೋಗ ಹಾಗೂ ಜಂಟಿ ತನಿಖೆಯ ಪ್ರಸ್ತಾಪವನ್ನು ಪಾಕಿಸ್ತಾನ ಮಂಡಿಸಿರುವುದಾಗಿ ಈ ಸಂದರ್ಭದಲ್ಲಿ ಹೇಳಿದರು.

ಲಷ್ಕರ್ ಎ ತೊಯ್ಬಾದ ಸಹ ಸಂಘಟನೆಯಾದ ಜಮಾತ್ ಉದ್ ದಾವಾ ಮೇಲೆ ವಿಶ್ವಸಂಸ್ಥೆ ನಿಷೇಧ ಹೇರಿದ ಬೆನ್ನಲ್ಲೇ, ಪಾಕಿಸ್ತಾನ ಕೂಡ ಜಮಾತ್ ಮೇಲೆ ನಿಷೇಧ ಹೇರಿದ್ದು, ಅದರ ವರಿಷ್ಠ ಹಾಫೀಜ್ ಮೊಹಮ್ಮದ್ ಸಯೀದ್‌ನನ್ನು ಗೃಹಬಂಧನದಲ್ಲಿ ಇರಿಸಲಾಗಿದ್ದು, ಹಲವಾರು ಕಚೇರಿಗಳನ್ನು ಮುಚ್ಚಲಾಗಿರುವುದಾಗಿ ಖುರೇಷಿ ವಿವರಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜಮಾತ್ ಮೇಲೆ ನಿಷೇಧ ಹೇರಿದ ಪಾಕ್
ಅಫ್ಘಾನ್‌ಗೆ ಅಮೆರಿಕದ ಗೇಟ್ಸ್ ಭೇಟಿ
ವಿಶ್ವಸಂಸ್ಥೆ ನಿಷೇಧಕ್ಕೆ ಹೆದರುವುದಿಲ್ಲ: ಜಮಾತ್
ಸೋಮಾಲಿ ಕಡಲ್ಗಳ್ಳರಿಂದ 2 ಯೆಮೆನ್ ಹಡಗು ಅಪಹರಣ
ಇಸ್ರೇಲ್ ಪ್ರಜೆಗಳು ಗೋವಾಕ್ಕೆ ತೆರಳದಂತೆ ತಾಕೀತು
ಇಲಿನೋಯ್ ರಾಜ್ಯಪಾಲರ ರಾಜೀನಾಮೆಗೆ ಒಬಾಮ ಆಗ್ರಹ