ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಉಗ್ರರ ವಿರುದ್ಧ ಪಾಕ್‌‌ ಬಲವಂತದ ಕ್ರಮ ಕೈಗೊಳ್ಳಬೇಕು: ರೈಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಗ್ರರ ವಿರುದ್ಧ ಪಾಕ್‌‌ ಬಲವಂತದ ಕ್ರಮ ಕೈಗೊಳ್ಳಬೇಕು: ರೈಸ್
ಮುಂಬೈಯ ದಾಳಿಯ ಕುರಿತಾಗಿ ಭಾರತ ಅಥವಾ ಪಾಕಿಸ್ತಾನ ಯುದ್ಧಾಕಾಂಕ್ಷಿ ಬಗ್ಗೆ ಮಾತನ್ನಾಡುವ ಅಗತ್ಯವಿಲ್ಲ ಎಂದಿರುವ ಅಮೆರಿಕ, ಪರಿಸ್ಥಿತಿ ಗಂಭೀರವಾಗಿರುವುದರಿಂದ ಪಾಕ್ ಉಗ್ರರ ವಿರುದ್ಧ ಬಲವಂತದ ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿದೆ.

ಭಾರತ ಮತ್ತು ಪಾಕಿಸ್ತಾನ ನಡುವೆ ಯಾವುದೇ ಯುದ್ಧಕಾಂಕ್ಷಿ ಮಾತುಕತೆ ನಡೆದಿಲ್ಲ ಎಂದು ಕೇಳಿರುವುದಾಗಿ ತಿಳಿಸಿದ ಅಮೆರಿಕ, ಆ ನಿಟ್ಟಿನಲ್ಲಿ ಭಾರತ ಮತ್ತು ಪಾಕಿಸ್ತಾನ ಸೌಹಾರ್ದ ಸಂಬಂಧಗಳ ಮೂಲಕ ಬಹಳಷ್ಟು ಕೆಲಸಗಳನ್ನು ಮಾಡಬೇಕಾಗಿದೆ ಎಂದು ಅಮೆರಿಕದ ವಿದೇಶಾಂಗ ಸಚಿವೆ ಕಾಂಡೊಲೀಸಾ ರೈಸ್ ನ್ಯೂಸ್ ನೆಟ್‌ವರ್ಕ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಆ ಕಾರಣಕ್ಕಾಗಿ ಭಾರತ ಮತ್ತು ಪಾಕಿಸ್ತಾನ ಯುದ್ಧಕ್ಕೆ ಮುಂದಾಗುವುದಕ್ಕಿಂತ ಎರಡೂ ದೇಶಗಳ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಬೇಕೆಂದು ಅಮೆರಿಕ ಬಯಸುವುದಾಗಿ ಹೇಳಿದ ರೈಸ್, ಉಗ್ರರನ್ನು ಪಾಕಿಸ್ತಾನ ಬಲವಂತದಿಂದ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.

ಮುಂಬೈ ದಾಳಿಯ ನಂತರ ಕಾಂಡೊಲೀಸಾ ರೈಸ್ ಅವರು ಭಾರತಕ್ಕೆ ಆಗಮಿಸಿದ್ದ ವೇಳೆ, ಉಗ್ರರನ್ನು ಮಟ್ಟಹಾಕುವ ಬಗ್ಗೆ ಪಾಕಿಸ್ತಾನಕ್ಕೆ ಬಲವಾದ ಸಂದೇಶವನ್ನು ರವಾನಿಸಿದ್ದರು. ಅಲ್ಲದೇ ಪಾಕ್ ಉಗ್ರಗಾಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುಂಬೈ ದಾಳಿಯ ಪುರಾವೆ ಒದಗಿಸಲು ಪಾಕ್ ಮನವಿ
ಜಮಾತ್ ಮೇಲೆ ನಿಷೇಧ ಹೇರಿದ ಪಾಕ್
ಅಫ್ಘಾನ್‌ಗೆ ಅಮೆರಿಕದ ಗೇಟ್ಸ್ ಭೇಟಿ
ವಿಶ್ವಸಂಸ್ಥೆ ನಿಷೇಧಕ್ಕೆ ಹೆದರುವುದಿಲ್ಲ: ಜಮಾತ್
ಸೋಮಾಲಿ ಕಡಲ್ಗಳ್ಳರಿಂದ 2 ಯೆಮೆನ್ ಹಡಗು ಅಪಹರಣ
ಇಸ್ರೇಲ್ ಪ್ರಜೆಗಳು ಗೋವಾಕ್ಕೆ ತೆರಳದಂತೆ ತಾಕೀತು