ದಕ್ಷಿಣ ನೇಪಾಳದ ಹೆದ್ದಾರಿಯ ಸೇತುವೆಯೊಂದರಲ್ಲಿ ಶಾಲಾ ಬಸ್ ನಿಯಂತ್ರಣ ತಪ್ಪಿದ ಪರಿಣಾಮ ಸಂಭವಿಸಿದ ಅವಘಡಕ್ಕೆ ಇಬ್ಬರು ಶಿಕ್ಷಕರ ಸಹಿತ 20 ಮಂದಿ ಮಕ್ಕಳು ಬಲಿಯಾಗಿದ್ದು, ಕನಿಷ್ಠ 57 ಮಕ್ಕಳು ಗಾಯಾಗೊಂಡಿದ್ದಾರೆಂದು ಪೊಲೀಸ್ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ನೇಪಾಳ ರಾಜಧಾನಿ ಕಾಠ್ಮಂಡುವಿನ ನೈರುತ್ಯ ದಿಕ್ಕಿನಿಂದ ಸುಮಾರು 200ಕಿ.ಮೀ. ದೂರದ ಮುಕುಂದಪುರ ಹಳ್ಳಿ ಪ್ರದೇಶದ ಹೆದ್ದಾರಿಯಲ್ಲಿ ಶಾಲಾ ಬಸ್ ಗುರುವಾರ ತಡ ರಾತ್ರಿ ಪ್ರವಾಸಕ್ಕೆ ತೆರಳಿ ಮಿತಿಮೀರಿದ ವೇಗದಿಂದ ಚಲಿಸಿದ ಪರಿಣಾಮ ಚಾಲಕನ ನಿಯಂತ್ರವು ತಪ್ಪಿಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಪಘಾತದಲ್ಲಿ ಮೃತಪಟ್ಟ ಮಕ್ಕಳೆಲ್ಲರು ಹದಿವಯಸ್ಸಿನ ವಿದ್ಯಾರ್ಥಿಗಳಾಗಿದ್ದು, ಗಾಯಾಗೊಂಡ ಇತರ 57 ವಿದ್ಯಾರ್ಥಿಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಪೊಲೀಸ್ ಅಧಿಕಾರಿಯಾದ ಸೇನ್ ತಿಳಿಸಿದರು.
ಪ್ರಾಥಮಿಕ ತನಿಖೆಯ ಪ್ರಕಾರ ಬಸ್ ಅನ್ನು ಮಿತಿಮೀರಿದ ವೇಗದಿಂದ ಚಲಾಯಿಸಿದ್ದೆ ಅವಘಡಕ್ಕೆ ಕಾರಣವಾಗಿದೆಯೆಂದು ಸೇನ್ ತಿಳಿಸಿದರು. ನೇಪಾಳದ ರಸ್ತೆಗಳು ತೀರಾ ಹದೆಗೆಟ್ಟಿದ್ದು, ವಾಹನಗಳ ಅಪಘಾತವು ಸರ್ವ ಸಾಮೂನ್ಯ ದೃಶ್ಯಗಳಾಗಿವೆ. ಯಾವುದೇ ವೇಗದ ನಿಯಂತ್ರಣ ಇಲ್ಲದಿರುವುದೇ ಅಪಘಾತಕ್ಕೆ ಪ್ರಮುಖ ಕಾರಣವಾಗಿದೆ ಎಂದು ಅಧಿಕಾರಿಗಳು ದೂರಿದ್ದಾರೆ.
|