ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ವರ್ಷಧಾರೆಗೆ ಇಟಲಿ ತತ್ತರ-ತುರ್ತುಪರಿಸ್ಥಿತಿ ಘೋಷಣೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವರ್ಷಧಾರೆಗೆ ಇಟಲಿ ತತ್ತರ-ತುರ್ತುಪರಿಸ್ಥಿತಿ ಘೋಷಣೆ
ಇಟಲಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ನಾಲ್ಕು ಮಂದಿ ಬಲಿಯಾಗಿದ್ದು, ರಾಜಧಾನಿ ರೋಮ್‌ನಲ್ಲಿ ಧಾರಾಕಾರ ಮಳೆಗೆ ಟೈಬರ್ ನದಿಯು ಉಕ್ಕಿ ಹರಿದು ಪ್ರವಾಹದ ಸ್ಥಿತಿಯುಂಟಾಗಿದ್ದರಿಂದ ಪ್ರದೇಶದಲ್ಲಿ ಶುಕ್ರವಾರ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

ಎರಡು ದಿನಗಳಿಂದ ಎಡೆಬಿಡದ ಸುರಿಯುತ್ತಿರುವ ಮಳೆಗೆ ಟೈಬರ್ ನದಿ ನೀರು 16 ಅಡಿಗಳಷ್ಟು ಮೇಲೆರಿದೆ ಎಂದು ನಾಗರಿಕ ರಕ್ಷಣಾ ವಿಭಾಗವು ತಿಳಿಸಿದ್ದು, ಪ್ರವಾಹ ಭೀತಿ ಕೂಡ ಇದೆ ಎಂದು ಜನತೆಗೆ ಮುನ್ನಚ್ಚರಿಕೆಯನ್ನು ನೀಡಿದೆ.

ಟೈಬರ್ ನದಿ ಪ್ರದೇಶದಲ್ಲಿ ಅಧಿಕಾರಿಗಳು ನಿರಾಶ್ರಿತರಿಗಾಗಿ ತಾತ್ಕಾಲಿಕ ಕ್ಯಾಂಪ್‌ಗಳನ್ನು ತೆರೆದಿದ್ದು, ಟೈಬರ್ ನದಿಗೆ ಹರಿಯುತ್ತಿರುವ ಸಣ್ಣ ನದಿಯಾದ ಅನ್ನಿ ಈಗಾಗಲೇ ಉಕ್ಕಿ ಹರಿದು ಪ್ರವಾಹದ ಸ್ಥಿತಿಯುಂಟಾಗಿದ್ದು, ಪ್ರದೇಶದಿಂದ ಅಧಿಕಾರಿಗಳು ನಾಗರಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿರುವುದಾಗಿ ಹೇಳಿದ್ದಾರೆ.

ಕಳೆದ ಕೆಲವು ದಿನಗಳ ಹವಾಮೂನ ವೈಪರೀತವು ಇಟಲಿಗೆ ಭಾರೀ ನಷ್ಟವನ್ನು ಉಂಟು ಮಾಡಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಲ್ಲಿ ನಾಲ್ಕು ಮಂದಿಯು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ರಕ್ಷಣಾ ಕಾರ್ಯಕರ್ತರು ಪ್ರವಾಹ ಭಾದಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನೇಪಾಳ : ಬಸ್ ಅಪಘಾತಕ್ಕೆ 20 ವಿದ್ಯಾರ್ಥಿಗಳು ಬಲಿ
ರಷ್ಯಾ : ಗಣಿ ಸ್ಫೋಟಕ್ಕೆ 12 ಬಲಿ
ನಿಷೇಧದ ವಿರುದ್ಧ ಅಂತಾರಾಷ್ಟ್ರೀಯ ಕೋರ್ಟ್‌‌ಗೆ: ಜಮಾತ್
ಉಗ್ರರ ವಿರುದ್ಧ ಪಾಕ್‌‌ ಬಲವಂತದ ಕ್ರಮ ಕೈಗೊಳ್ಳಬೇಕು: ರೈಸ್
ಮುಂಬೈ ದಾಳಿಯ ಪುರಾವೆ ಒದಗಿಸಲು ಪಾಕ್ ಮನವಿ
ಜಮಾತ್ ಮೇಲೆ ನಿಷೇಧ ಹೇರಿದ ಪಾಕ್