ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಭ್ರಷ್ಟಾಚಾರದಲ್ಲಿ ಪಾಲುದಾರನಲ್ಲ: ಒಬಾಮ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭ್ರಷ್ಟಾಚಾರದಲ್ಲಿ ಪಾಲುದಾರನಲ್ಲ: ಒಬಾಮ
ಇಲ್ಲಿನಾಯ್ ರಾಜ್ಯಪಾಲ ಬ್ಲಗೊಜೆವಿಚ್ ಅವರು ಎದುರಿಸುತ್ತಿರುವ ಭ್ರಷ್ಟಾಚಾರ ಪ್ರಕರಣಗಳಲ್ಲಿ ತಮಗೆ ಹಾಗೂ ತಮ್ಮ ಕಚೇರಿಗೆ ಯಾವುದೇ ವಿಧವಾದ ಸಂಬಂಧವಿಲ್ಲ ಎಂದು ಅಮೆರಿಕದ ನಿಯೋಜಿತ ಅಧ್ಯಕ್ಷ ಬರಾಕ್ ಒಬಾಮ ಸ್ಪಷ್ಟನೆ ನೀಡಿದ್ದಾರೆ.

ಇಲ್ಲಿನಾಯ್‌ನಲ್ಲಿ ತೆರವಾಗಿರುವ ಯಾವುದೇ ಹುದ್ದೆಗಳು ವ್ಯಾಪಾರಕ್ಕೆ ಇಲ್ಲ ಹಾಗೂ ತಾವು ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದ ರಾಜ್ಯಪಾಲ ಬ್ಲಗೊಜೆವಿಚ್ ಅವರೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಚಿಕಾಗೊದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.

ಒಬಾಮ ಅವರಿಂದ ತೆರವಾದ ಇಲ್ಲಿನಾಯ್ ರಾಜ್ಯದ ಸೆನೆಟ್ ಹುದ್ದೆಯು ಅಲ್ಲಿನ ರಾಜ್ಯದ ಜನತೆಗೆ ಬಿಟ್ಟ ವಿಚಾರ, ಅವರೇ ತಮಗೆ ಬೇಕಾದ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದಾರೆ ಎಂದು ಹೇಳಿದ್ದಾರೆ.

ಹತ್ತಾರು ಭ್ರಷ್ಟಾಚಾರ ಪ್ರಕರಣಗಳು ಹಾಗೂ ಒಬಾಮರಿಂದ ತೆರವಾದ ಇಲ್ಲಿನಾಯ್ ಸೆನೆಟ್ ಹುದ್ದೆ ಅಲಂಕರಿಸಲು ಇಚ್ಛಿಸುವವರಿಂದ ಲಂಚ ಪಡೆಯಲು ಯತ್ನಿಸಿದ್ದ ಆರೋಪದ ಮೇರೆಗೆ ಮಂಗಳವಾರ ರಾಜ್ಯಪಾಲ ಬ್ಲಗೊಜೆವಿಚ್ ಅವರನ್ನು ಬಂಧಿಸಿ, ಬಿಡುಗಡೆ ಮಾಡಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವರ್ಷಧಾರೆಗೆ ಇಟಲಿ ತತ್ತರ-ತುರ್ತುಪರಿಸ್ಥಿತಿ ಘೋಷಣೆ
ನೇಪಾಳ : ಬಸ್ ಅಪಘಾತಕ್ಕೆ 20 ವಿದ್ಯಾರ್ಥಿಗಳು ಬಲಿ
ರಷ್ಯಾ : ಗಣಿ ಸ್ಫೋಟಕ್ಕೆ 12 ಬಲಿ
ನಿಷೇಧದ ವಿರುದ್ಧ ಅಂತಾರಾಷ್ಟ್ರೀಯ ಕೋರ್ಟ್‌‌ಗೆ: ಜಮಾತ್
ಉಗ್ರರ ವಿರುದ್ಧ ಪಾಕ್‌‌ ಬಲವಂತದ ಕ್ರಮ ಕೈಗೊಳ್ಳಬೇಕು: ರೈಸ್
ಮುಂಬೈ ದಾಳಿಯ ಪುರಾವೆ ಒದಗಿಸಲು ಪಾಕ್ ಮನವಿ