ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಲಷ್ಕರ್‌ಗೆ ಐಎಸ್‌ಐ ಮತ್ತೆ ಬೆಂಬಲಿಸುವುದಿಲ್ಲ: ಜರ್ದಾರಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲಷ್ಕರ್‌ಗೆ ಐಎಸ್‌ಐ ಮತ್ತೆ ಬೆಂಬಲಿಸುವುದಿಲ್ಲ: ಜರ್ದಾರಿ
ಲಷ್ಕರ್ -ಏ-ತೊಯಿಬಾದಂತಹ ಉಗ್ರಗಾಮಿ ಸಂಘಟನೆಗಳನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳು ಮತ್ತೆ ಬೆಂಬಲಿಸುವುದಿಲ್ಲ ಎಂದು ಪಾಕ್ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಹೇಳಿದ್ದಾರೆ.

ಮುಂಬೈಯಲ್ಲಿ ನಡೆದ ಉಗ್ರರ ದಾಳಿಗೆ ಲಷ್ಕರ್-ಎ-ತೊಯಿಬಾ ಉಗ್ರಗಾಮಿ ಸಂಘಟನೆ ಹೊಣೆಯಾಗಿದೆ ಎಂದು ಭಾರತ ಆರೋಪಿಸಿದ ಹಿನ್ನೆಲೆಯಲ್ಲಿ, ಉಗ್ರಗಾಮಿ ಸಂಘಟನೆಗಳನ್ನು ಪಾಕಿಸ್ತಾನ್ ನಿಷೇಧಿಸಲಿದೆ. ಉಗ್ರಗಾಮಿ ಸಂಘಟನೆಗಳಿಗೆ ದೇಶದ ಗುಪ್ತಚರ ಸಂಸ್ಥೆಗಳು ಬೆಂಬಲಿಸುತ್ತಿಲ್ಲ ಎಂದು ತಿಳಿಸಿದ್ದಾರೆ.

ಕೆಲ ದಶಕಗಳ ಹಿಂದೆ ದೇಶವನ್ನು ಸರ್ವಾಧಿಕಾರಿಗಳು ಆಳುತ್ತಿರುವಾಗ ಪಾಕಿಸ್ತಾನದ ಐಎಸ್‌ಐ ಮತ್ತು ಉಗ್ರಗಾಮಿ ಸಂಘಟನೆಗಳೊಂದಿಗೆ ಬಾಂಧವ್ಯ ವೃದ್ಧಿಯಾಗಿತ್ತು. ಆದರೆ ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್‌ ಮೇಲೆ ನಡೆದ ದಾಳಿಯ ನಂತರ ಐಎಸ್‌ಐ ಧೋರಣೆಯಲ್ಲಿ ಬದಲಾಗಿದೆ ಎಂದು ಅಧ್ಯಕ್ಷ ಜರ್ದಾರಿ ನ್ಯೂಸ್‌ವೀಕ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಪಾಕಿಸ್ತಾನದ ಪ್ರದೇಶವನ್ನು ಬಳಸಿಕೊಂಡು ಇತರ ದೇಶಗಳ ವಿರುದ್ಧ ಉಗ್ರಗಾಮಿ ಕೃತ್ಯಗಳನ್ನು ನಡೆಸುತ್ತಿರುವ ಸಂಘಟನೆಗಳನ್ನು ಸದೆಬಡೆಯಲಾಗುವುದು ಎಂದು ಪಾಕ್ ಅಧ್ಯಕ್ಷ ಜರ್ದಾರಿ ಭರವಸೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕ್ ಭಯೋತ್ಪಾದಕ ರಾಷ್ಟ್ರವೆಂದು ಘೋಷಿಸಲು ಆಗ್ರಹ
ಸ್ವ ರಕ್ಷಣೆಗಾಗಿ ಜಮಾತ್ ಮೇಲೆ ಪಾಕ್ ನಿಷೇಧ: ಅಮೆರಿಕ
ಭ್ರಷ್ಟಾಚಾರದಲ್ಲಿ ಪಾಲುದಾರನಲ್ಲ: ಒಬಾಮ
ವರ್ಷಧಾರೆಗೆ ಇಟಲಿ ತತ್ತರ-ತುರ್ತುಪರಿಸ್ಥಿತಿ ಘೋಷಣೆ
ನೇಪಾಳ : ಬಸ್ ಅಪಘಾತಕ್ಕೆ 20 ವಿದ್ಯಾರ್ಥಿಗಳು ಬಲಿ
ರಷ್ಯಾ : ಗಣಿ ಸ್ಫೋಟಕ್ಕೆ 12 ಬಲಿ