ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಸಮುದಾಯ ಒತ್ತಡ ಹೇರುತ್ತಿರುವಂತೆ, ಬ್ರಿಟನ್ ಪ್ರಧಾನಿ ಗೊರ್ಡಾನ್ ಬ್ರೌನ್ ವಿಶ್ವದಲ್ಲಿ ನಡೆಯುವ ಭಯೋತ್ಪಾದಕ ದಾಳಿಗಳಲ್ಲಿ ಹೆಚ್ಚಿನವು ಪಾಕಿಸ್ತಾನಕ್ಕೆ ಸಂಬಂಧಿಸಿವೆ ಎಂದು ಹೇಳಿದ್ದಾರೆ.
ಪಾಕ್ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿಯವರೊಂದಿಗೆ ಜಂಟಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಪ್ರದಾನಿ ಬ್ರೌನ್,ಹೇಳಿಕೆ ನೀಡುವುದನ್ನು ಬಿಟ್ಟು ಭಯೋತ್ಪಾದಕರ ವಿರುದ್ಧದ ಕಾರ್ಯಚರಣೆಗೆ ಸಿದ್ದವಾಗುವ ಸಮಯವಾಗಿದೆ ಎಂದು ಹೇಳಿದರು..
ಭಯೋತ್ಪಾದಕರ ನಿಗ್ರಹಕ್ಕಾಗಿ ಅಗತ್ಯವಿರುವ ಎಲ್ಲ ಸಹಕಾರವನ್ನು ಪಾಕ್‌ಗೆ ನೀಡಲು ಸಿದ್ದ ಎಂದು ಘೋಷಿಸಿದ ಅವರು, 6 ಮಿಲಿಯನ್ ಡಾಲರ್ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದರು.
ಮುಂಬೈ ಉಗ್ರಗಾಮಿ ದಾಳಿಯಲ್ಲಿ ಮೂವರು ಬ್ರಿಟನ್ ನಾಗರಿಕರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಬ್ರಿಟನ್ ಪೊಲೀಸರಿಗೆ ಉಗ್ರನನ್ನು ವಿಚಾರಣೆ ನಡೆಸಲು ಅನುಮತಿ ನೀಡುವಂತೆ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಪಾಕ್ ಅಧ್ಯಕ್ಷ ಜರ್ದಾರಿಯವರನ್ನು ಕೋರಿರುವುದಾಗಿ ಪ್ರಧಾನಿ ಬ್ರೌನ್ ತಿಳಿಸಿದ್ದಾರೆ. |