ಉಗ್ರವಾದವನ್ನು ಮಟ್ಟಹಾಕಲು ಅಂತಾರಾಷ್ಟ್ರೀಯ ಮಟ್ಟದಿಂದ ಪಾಕಿಸ್ತಾನದ ಮೇಲಿನ ಒತ್ತಡವು ಹೆಚ್ಚುತ್ತಲೇ ಹೋಗುತ್ತಿರುವುದರಿಂದ, ಯಾವುದೇ ರಾಷ್ಟ್ರ ತಮ್ಮ ಹಕ್ಕುಗಳಿಗೆ ಕುಂದುಂಟು ಮಾಡಿ ಅತಿಕ್ರಮಣ ಮಾಡಲು ಪ್ರಯತ್ನಿಸಿದರೆ ತಾವು ತಿರುಗಿ ಬೀಳುವುದಾಗಿ ಪಾಕಿಸ್ತಾನ ಹೇಳಿದೆ." ನಾವು ಶಾಂತಿಯನ್ನು ಬಯಸುತ್ತೇವೆ, ಯುದ್ಧವನ್ನಲ್ಲ ಎಂದು ನಾನು ನನ್ನ ದೇಶವಾಸಿಗಳಿಗೆ ಹೇಳಲು ಬಯಸುತ್ತೇನೆ. ಆದರೆ ಯಾರಾದರೂ ನಮ್ಮ ಹಕ್ಕುಗಳನ್ನು ಅತಿಕ್ರಮಿಸಲು ಬಯಸಿದರೆ ಅಥವಾ ಅವರ ನಿಲುವುಗಳನ್ನು ನಮ್ಮ ಮೇಲೆ ಹೇರಲು ಪ್ರಯತ್ನಿಸಿದರೆ, ತಿರುಗಿ ಬೀಳುವ ಸಾಮರ್ಥ್ಯ ನಮ್ಮಲ್ಲಿದೆ ಮತ್ತು ಈ ಬಗ್ಗೆ ಪಾಕಿಸ್ತಾನದ ಪ್ರಜೆಗಳು ಚಿಂತೆಗೆ ಒಳಗಾಗಬೇಕಾದ ಅಗತ್ಯವಿಲ್ಲ , ದೇಶ ಸಮರ್ಥರ ಕೈಯಲ್ಲಿ ಸುರಕ್ಷಿತವಾಗಿದೆ" ಎಂದು ಪಾಕಿಸ್ತಾನದ ಪ್ರಧಾನಿ ಯೂಸಫ್ ರಜಾ ಗಿಲಾನಿ ಹೇಳಿದ್ದಾರೆ." ನಾವು ಉಗ್ರವಾದದ ಪರವಾಗಿಲ್ಲ ಮತ್ತು ಅದನ್ನು ಬೆಂಬಲಿಸುವುದಿಲ್ಲ. ನಿಜವೇನೆಂದರೆ, ನಮ್ಮ ದೇಶವನ್ನು ಭಯೋತ್ಪಾದನೆಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗದಂತೆ ತಡೆಗಟ್ಟುವುದು ನಮ್ಮ ನಿರ್ಣಯ. ನಿರ್ದೇಶನಗಳ ಅನುಸರಣೆಯ ಕುರಿತು ಹೇಳುವುದಾದರೆ, ನಾವು ವಿಶ್ವಸಂಸ್ಥೆಯ ನಿರ್ದೇಶನವನ್ನು ಪಾಲಿಸುತ್ತಿದ್ದೇವೆ ಮತ್ತು ಇದು ಭಾರತದಿಂದಾಗಿ ಅಲ್ಲ. ಭಯೋತ್ಪಾದನೆಯನ್ನು ತಡೆಗಟ್ಟುವ ನಿರ್ಣಯವೂ 2001ರಿಂದ ಜಾರಿಯಲ್ಲಿದೆ" ಎಂದು ಗಿಲಾನಿ ಹೇಳಿದ್ದಾರೆ.ಇಂಗ್ಲೆಂಡ್ ಪ್ರಧಾನಿ ಗೋರ್ಡನ್ ಬ್ರೌನ್ ಭಾರತಕ್ಕೆ ಮತ್ತು ನಂತರ ಪಾಕಿಸ್ತಾನಕ್ಕೆ ಭೇಟಿ ನೀಡಿ ಉಗ್ರವಾದವನ್ನು ತಡೆಗಟ್ಟುವಂತೆ ಪಾಕ್ ಮೇಲೆ ಒತ್ತಡ ಹೇರಿದ ಒಂದು ದಿನದ ನಂತರ ಗಿಲಾನಿ ಅವರ ಸಮರ್ಥನೆ ಹೊರಬಿದ್ದಿದೆ. |