ಅಮೆರಿಕಾದ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್ ಸೋಮವಾರ ಅನಿರೀಕ್ಷಿತವಾಗಿ ಅಫಘಾನಿಸ್ತಾನದಲ್ಲಿ ಬಂದಿಳಿದಿದ್ದು ಅಫ್ಘಾನಿಸ್ತಾನದ ಅಧ್ಯಕ್ಷ ಹಮೀದ್ ಕರ್ಜಾಯಿ ಅವರನ್ನು ಭೇಟಿಯಾಗಿದ್ದಾರೆ ಮತ್ತು ತಮ್ಮ ಅಧಿಕಾರವಧಿ ಕೊನೆಗೊಳ್ಳುತ್ತಿರುವುದರಿಂದ ಅಫ್ಘಾನಿಸ್ತಾನಕ್ಕೆ ಅಮೆರಿಕಾದ ಬೆಂಬಲದಲ್ಲಿ ಹಿನ್ನಡೆ ಉಂಟಾಗುವ ಬಗೆಗಿನ ಸಂದೇಹಗಳನ್ನು ಪರಿಹರಿಸಿದ್ದಾರೆ." ಅಫ್ಘಾನಿಸ್ತಾನದ ಜನತೆಗೆ ಅಮೆರಿಕಾ ಯಾವಾಗಲೂ ಅವರೊಂದಿಗಿತ್ತು ಮತ್ತು ಮುಂದೆಯೂ ಇರುತ್ತದೆ ಎಂಬದನ್ನು ತಿಳಿಸಲು ಮತ್ತು ಅಫ್ಘನ್ ಅಧ್ಯಕ್ಷ ಕರ್ಜಾಯಿ ಅವರಿಗೆ ಧನ್ಯವಾದ ಹೇಳಲು ನಾನು ಅಫ್ಘಾನಿಸ್ತಾನಕ್ಕೆ ತೆರಳಲು ಬಯಸುತ್ತೇನೆ" ಎಂದು ಬುಷ್ ಅಫ್ಘಾನಿಸ್ತಾನಕ್ಕೆ ತೆರಳುವ ದಾರಿಯಲ್ಲಿ ತಿಳಿಸಿದರು.ಶೂಗಳು ನನ್ನ ಅಳತೆಯದಲ್ಲ ಅಫ್ಘನಿಸ್ತಾನ ಭೇಟಿಗೆ ಮೊದಲು ಬುಷ್ ಇರಾಕ್‌ಗೆ ಭೇಟಿ ನೀಡಿದ್ದರು. ಅಮೆರಿಕಾ ಅಧ್ಯಕ್ಷ ಬಾಗ್ದದ್‌ನಲ್ಲಿ ವಿಮಾನದಿಂದ ಕೆಳಗಿಳಿದ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಾ 'ಯುದ್ಧವಿನ್ನೂ ಮುಗಿದಿಲ್ಲ' ಎಂದು ಎಚ್ಚರಿಸಿದರು ಮತ್ತು ಕ್ರೋಧಿತ ಇರಾಕಿ ಪತ್ರಕರ್ತನೊಬ್ಬ ಶೂಗಳನ್ನು ಅವರ ಕಡೆ ಎಸೆದಾಗ ಬುಷ್ ನಕ್ಕು ಇವು ನನ್ನ ಅಳತೆಗೆ ಸರಿಹೊಂದುವುದಿಲ್ಲ ಎಂದರು.ಪತ್ರಿಕಾ ಗೋಷ್ಠಿಯ ಸಂದರ್ಭ 2003ರಲ್ಲಿ ಇರಾಕ್ ವಿರುದ್ದ ಯುದ್ಧ ಸಾರಿದ್ದ ಬುಷ್ ಮೇಲೆ ಕ್ರೋಧಿತ ಪರ್ತಕರ್ತನೊರ್ವ ಅಮೆರಿಕಾ ನಾಯಕನ ಮೇಲೆ ಎರಡು ಶೂಗಳನ್ನು ಬೀಸಿ ಎಸೆದ.ಬುಷ್ ಬಗ್ಗಿದರು ಮತ್ತು ಮೊದಲ ಶೂ ಅವರ ಮತ್ತು ಇರಾಕ್ ಪ್ರಧಾನಿ ನೂರಿ-ಅಲ್-ಮಲಿಕಿ ಅವರ ಹಿಂದೆ ಇದ್ದ ಅಮೆರಿಕಾ-ಇರಾಕ್ ರಾಷ್ಟ್ರಧ್ವಜಗಳಿಗೆ ಬಡಿಯಿತು. ಎರಡನೇ ಶೂ ಪೂರ್ಣವಾಗಿ ಗುರಿತಪ್ಪಿತ್ತು. ಚಪ್ಪಲಿಯೇಟು ಅಥವಾ ಶೂಗಳಿಂದ ಅವಮರ್ಯಾದೆ ತೋರಿಸುವುದು ಅತ್ಯಂತ ಅವಮಾನಕರ ಎಂಬುದಾಗಿ ಅರಬ್ ಸಂಸ್ಕೃತಿಯಲ್ಲಿ ಪರಿಗಣಿಸಲಾಗಿದೆ. ನೆಲಕ್ಕೆ ಕೆಡವಲ್ಪಡುವ ಮೊದಲು "ಇದು ಬೀಳ್ಕೊಡುಗೆಯ ಸನ್ಮಾನ ನಿನಗೆ, ನಾಯಿ" ಎಂಬುದಾಗಿ ಪತ್ರಕರ್ತ ಕಿರುಚಿದ್ದ. |