ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > 9/11ಗೆ ಮೊದಲು, ಪಾಕ್ ಅಣುವಿಜ್ಞಾನಿಗಳು-ಲಾಡೆನ್ ಭೇಟಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
9/11ಗೆ ಮೊದಲು, ಪಾಕ್ ಅಣುವಿಜ್ಞಾನಿಗಳು-ಲಾಡೆನ್ ಭೇಟಿ
ಅಮೆರಿಕಾದ ಮೇಲಿನ 9/11 ದಾಳಿಗೆ ಕೇವಲ ಒಂದು ತಿಂಗಳು ಮುಂಚಿತವಾಗಿ ಕಳಂಕಿತ ವಿಜ್ಞಾನಿ ಅಬ್ದುಲ್ ಖಾದಿರ್ ಖಾನ್‌ಗೆ ಅಪ್ತರೆನ್ನಲಾದ ಇಬ್ಬರು ಅಣು ವಿಜ್ಞಾನಿಗಳು ಅಲ್ ಕೈದಾ ಮುಖಂಡ ಒಸಾಮ ಬಿನ್ ಲಾಡೆನ್ ಅವರನ್ನು ಭೇಟಿಯಾಗಿದ್ದರು ಮತ್ತು ಆತನಿಗೆ ಅಣು ಶಶ್ತ್ರಾಸ್ತ್ರಗಳನ್ನು ಪೂರೈಸುವುದಾಗಿ ಪ್ರಸ್ತಾವನೆ ಮುಂದಿಟ್ಟಿದ್ದರು ಎಂದು ಹೊಸದಾಗಿ ಬಿಡುಗಡೆಯಾಗಿರುವ ಪುಸ್ತಕದಲ್ಲಿ ಬರೆಯಲಾಗಿದೆ.

ಪಾಕಿಸ್ತಾನದ ಅಣು ಯೋಜನೆಗಳಲ್ಲಿ ಪ್ರಮುಖ ಹುದ್ದೆಗಳನ್ನು ಹೊಂದಿದ್ದ ಚೌಧರಿ ಅಬ್ದುಲ್ ಮಾಜಿದ್ ಮತ್ತು ಸುಲ್ತಾನ್ ಬಶೀರುದ್ದೀನ್ ಮೆಹಮೂದ್ 2001ರ ಅಗಸ್ಟ್ ತಿಂಗಳಿನಲ್ಲಿ ಕಂದಹಾರ್‌ಗೆ ತೆರಳಿದದ್ದರು ಮತ್ತು ವ್ಯಾಪಕ ನಾಶವನ್ನು ಉಂಟುಮಾಡುವಂತಹ ಶಸ್ತ್ರಾಸ್ತ್ರಗಳ ಸಂಗ್ರಹಣೆಯಲ್ಲಿ ತೊಡಗಿದ್ದ ಬಿನ್ ಲಾಡೆನ್ ಜೊತೆ ಮೂರು ದಿನ ಉಳಿದಿದ್ದರು ಎಂದು ಪುಸ್ತಕದಲ್ಲಿ ಹೇಳಾಲಾಗಿದೆ.

ಆದರೆ, ಪಾಕಿಸ್ತಾನಿ ಅಣು ವಿಜ್ಞಾನಿಗಳು ಮತ್ತು ಬಿನ್ ಲಾಡೆನ್ ನಡುವಿನ ಡೀಲ್ ಕಾರ್ಯಗತಗೊಳ್ಳಲಿಲ್ಲ ಮತ್ತು ಅಲ್ ಕೈದಾ ದೊರೆ ತನ್ನ ಕೆಲ ಹಿರಿಯ ಸಂಗಡಿಗರೊಂದಿಗೆ ಈಶಾನ್ಯ ಅಫ್ಘಾನಿಸ್ತಾನದಲ್ಲಿರುವ ಬೆಟ್ಟಗಳಿಗೆ ಹೋರಟುಹೋದ.

'ದ ಮ್ಯಾನ್ ಫ್ರಮ್ ಪಾಕಿಸ್ತಾನ್- ದ ಟ್ರೂ ಸ್ಟೋರಿ ಅಫ್ ದ ವಲ್ಡ್ ಮೊಸ್ಟ್ ಡೇಂಜರಸ್ ನ್ಯೂಕ್ಲೀಯರ್ ಸ್ಮಗ್ಲರ್ ಎ.ಕ್ಯೂ. ಖಾನ್' ಎಂಬ ಪುಸ್ತಕದ ಅನುಸಾರ, ಬಿನ್ ಲಾಡೆನ್ ತೆರಳುವ ಮುನ್ನ ತನ್ನ ಸಹಚರರಲ್ಲಿ ವಿಶೇಷವಾದದ್ದೇನೊ ನಡೆಯಲಿದೆ ಮತ್ತು ಈ ಪವಿತ್ರ ಯುದ್ಧದಲ್ಲಿ ವಿಶ್ವದೆಲ್ಲೆಡೆಯ ಮುಸ್ಲಿಮರು ನಮ್ಮ ಜೊತೆ ಸೇರಲಿದ್ದಾರೆ ಎಂದು ಹೇಳಿದ್ದ.

ಎರಡು ವಾರ ಕಳೆಯುವಷ್ಟರಲ್ಲಿ ಅಮೆರಿಕಾದ ಅವಳಿ ಕಟ್ಟಡವನ್ನು ನೆಲಕ್ಕೆ ಕೆಡವಲಾಗಿತ್ತು. ತನಿಖಾ ಪತ್ರಕರ್ತರಾದ ಡಾಗ್ಲಸ್ ಫ್ರಾಂಟ್ಜಾ ಮತ್ತು ಕ್ಯಾತರಿನ್ ಕೋಲಿನ್ಸ್ 414ಪುಟಗಳ ಪುಸ್ತಕದ ಲೇಖಕರಾಗಿದ್ದಾರೆ.

ಬಿನ್ ಲಾಡೆನ್ ಅನ್ನು ಕಂದಹಾರ್‌ನಲ್ಲಿ ಭೇಟಿಯಾಗುವ ಮುನ್ನ, ಪಾಕ್‌ನ ಇಬ್ಬರು ಅಣು ವಿಜ್ಞಾನಿಗಳು, ಅಫ್ಘಾನಿಸ್ತಾನದಲ್ಲಿ ಪರಿಹಾರ ಕಾರ್ಯಗಳನ್ನು ನಡೆಸಲು ಉಮ್ಮಹ್ ತಾಮೀರ್-ಎ-ನೌ ಎಂಬ ಸಂಘಟನೆಯನ್ನು ಆರಂಭಿಸಿದ್ದರು. ಆದರೆ ಕಾಬೂಲ್‌ನ ಮನೆಯೊಂದರಲ್ಲಿ ತಮ್ಮ ಕಛೇರಿ ತೆರದ ಮೇಲೆ ಈ ವಿಜ್ಞಾನಿಗಳು ಮುಲ್ಲಾ ಒಮರ್ ಮತ್ತು ಬಿನ್ ಲಾಡೆನ್ ಅನ್ನು ಭೇಟಿಯಾದರು ಮತ್ತು ಮಾತುಕತೆ ಪರಿಹಾರ ಕಾರ್ಯದಿಂದ ಶಸ್ತ್ರಾಸ್ತ್ರ ಪೂರೈಕೆಯ ಕಡೆ ಹೊರಳಿತು.

ಒಂದು ಸಮಯ ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿದಾಗ ಮೆಹಮೂದ್, ಲಾಡೆನ್ ಸಹಚರರಿಗೆ ಅಣು ಶಸ್ತ್ರಾಸ್ತ್ರಗಳನ್ನು ತಯಾರಿಸುವ ಬಗ್ಗೆ ಮಾಹಿತಿಗಳನ್ನು ನೀಡಿದ್ದ.

ಆದರೆ, ಅಮೆರಿಕಾವನ್ನು ನಡುಗಿಸಿದ 9/11 ದಾಳಿಯ ನಂತರ, ಉಗ್ರವಾದಿಗಳ ದಮನ ಕಾರ್ಯಾಚರಣೆಯ ಅಂಗವಾಗಿ ಆಗಿನ ಪಾಕ್ ಅಧ್ಯಕ್ಷ ಪರವೇಜ್ ಮುಶರಫ್, ತಾಲಿಬಾನ್ ಮತ್ತು ಇತರ ಭಯೋತ್ಪಾದಕ ಸಂಘಟನೆಗಳ ಪರವಾಗಿದ್ದ ಮೆಹಮೂದ್‌ಗೆ ಆಕಾಲಿಕ ನಿವೃತ್ತಿ ತೆಗೆದುಕೊಳ್ಳುವಂತೆ ಒತ್ತಡ ಹೇರಿದ್ದರು.

ಲಾಸ್ ಏಂಜಲೀಸ್ ಟೈಮ್ಸ್, ಅತ್ಯುತ್ತಮ ವರದಿ ಎಂದಿರುವ ಪುಸ್ತಕದಲ್ಲಿ, ಮೆಹಮೂದ್ ತನ್ನ ಬರಹ ಮತ್ತು ಭಾಷಣಗಳಲ್ಲಿ ಪಾಕಿಸ್ತಾನದ ಅಣು ತಂತ್ರಜ್ಞಾನವನ್ನು ಇತರ ಇಸ್ಲಾಮಿಕ್ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳುವುದರ ಮೂಲಕ ವಿಶ್ವದ ಮೇಲೆ ಇಸ್ಲಾಮಿಕ್ ರಾಷ್ಟ್ರಗಳ ಪ್ರಾಬಲ್ಯ ಮೆರೆಯಬಹುದು ಎಂಬುದಾಗಿ ವಾದಿಸಿದ್ದ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಮರಿಕ ಅಧ್ಯಕ್ಷ ಬುಶ್‌ಗೆ ಬೂಟುಗಳನ್ನೆಸೆದ ಇರಾಕಿ ಪತ್ರಕರ್ತ
ಆಕ್ರಮಣ ಮಾಡಿದರೆ ಪ್ರತಿದಾಳಿ ಮಾಡುತ್ತೇವೆ: ಪಾಕ್
'ಯಾವುದೇ ಪಾಕ್ ಪ್ರಜೆಯನ್ನು ಭಾರತಕ್ಕೆ ಹಸ್ತಾಂತರಿಸುವುದಿಲ್ಲ'
ಹೆಚ್ಚಿನ ಉಗ್ರರ ದಾಳಿಗಳಿಗೆ ಪಾಕ್‌ ಹೊಣೆ :ಬ್ರೌನ್
ಲಷ್ಕರ್‌ಗೆ ಐಎಸ್‌ಐ ಮತ್ತೆ ಬೆಂಬಲಿಸುವುದಿಲ್ಲ: ಜರ್ದಾರಿ
ಪಾಕ್ ಭಯೋತ್ಪಾದಕ ರಾಷ್ಟ್ರವೆಂದು ಘೋಷಿಸಲು ಆಗ್ರಹ