ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಅಮೆರಿಕಾವನ್ನು ದ್ವೇಷಿಸುತ್ತಿದ್ದ ಶೂ ಎಸೆದ ಪತ್ರಕರ್ತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮೆರಿಕಾವನ್ನು ದ್ವೇಷಿಸುತ್ತಿದ್ದ ಶೂ ಎಸೆದ ಪತ್ರಕರ್ತ
PTI
ಇರಾಕ್‍‌ಗೆ ಭೇಟಿ ನೀಡಿದ ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯೂ. ಬುಷ್ ಅವರ ಮೇಲೆ ಶೂ ಎಸೆದು ಕೋಲಹಲವೆಬ್ಬಿಸಿದ್ದ ಪತ್ರಕರ್ತ ಅಮೆರಿಕವನ್ನು ದ್ವೇಷಿಸುತ್ತಿದ್ದ ಮತ್ತು ಇಂತಹ ಆಕ್ರಮಣ ಮಾಡುವುದಾಗಿ ಬಹಳ ಸಮಯದಿಂದ ಹೇಳುತ್ತಿದ್ದ ಎಂದು ಆತನ ಸಹೊದ್ಯೋಗಿಗಳು ಹೇಳಿದ್ದಾರೆ.

ಇರಾಕ್ ಮೇಲೆ 2003ರಲ್ಲಿ ಯುದ್ಧ ಸಾರಿದ್ದ ಅಮೆರಿಕ ಅಧ್ಯಕ್ಷನ ವಿರುದ್ಧ 28ರ ಮುಂತಾಜೆರ್ ಅಲ್ ಜೈದಿ ಹಲವರ ದೃಷ್ಟಿಯಲ್ಲಿ ಹಿರೊ ಎನಿಸಿಕೊಂಡು ಬಿಟ್ಟಿದ್ದಾರೆ.

"ನಮ್ಮ ದೇಶವನ್ನು ಆತಿಕ್ರಮಿಸಿರುವ ರಾಷ್ಟ್ರದ ಅಧ್ಯಕ್ಷನಿಗೆ ನಮ್ಮ ಹತಾಶೆಯನ್ನು ಸೂಚಿಸಿದ ಇರಾಕಿ ಪ್ರಜೆಯಿಂದ ಇದು ಉತ್ತೇಜಕ ನಡೆ" ಎಂದು ಅಮೆರಿಕ ವಿರೋಧಿ ಚಳುವಳಿಯ ಲಿವಾ ಸುಮೈಸ್ಸಿಮ್ ಹೇಳಿದ್ದಾರೆ.

ಆದರೆ ಇರಾಕಿ ಸರಕಾರ ಜೌದಿ ಅವರ ವರ್ತನೆಯನ್ನು 'ಲಜ್ಜಾಸ್ಪದ' ಎಂದಿದ್ದು, ಆತನ ಉದ್ಯೋಗದಾತ ಸಂಸ್ಥೆ ಅಲ್-ಬಾಗ್ದಾದೀಯ ಟೆಲಿವಿಶನ್‌ ಕ್ಷಮೆಕೋರಬೇಕೆಂದು ಹೇಳಿದೆ. ಆದರೆ ಅಲ್ ಬಾಗ್ದದೀಯ ಟೆಲಿವಿಶನ್ ಇದಕ್ಕೆ ಬದಲಾಗಿ ಜೈದಿಯನ್ನು ಕೂಡಲೇ ಬಂಧನದಿಂದ ಬಿಡುಗಡೆಗೊಳಿಸಬೇಕೆಂದು ಕೇಳಿದೆ.

ಯಾವಾಗಲಾದರೂ ಅವಕಾಶ ಸಿಕ್ಕಿದಲ್ಲಿ ಬುಷ್ ಮೇಲೆ ಶೂಗಳನ್ನು ಎಸೆಯುವುದಾಗಿ ಜೈದಿ ಹೇಳುತ್ತಿದ್ದುದಾಗಿ ಅಲ್-ಬಾಗ್ದದೀಯದ ಉದ್ಯೋಗಿ ಹೇಳಿದ್ದಾರೆ.

"ನಾನು ಶೂ ಎಸೆಯುತ್ತೇನೆ ಎಂದು ಆತ ಹೇಳಿದಾಗ ನಾವು ಅವರನ್ನು ಸಂಶಯಿಸಲಿಲ್ಲ" ಎಂದು ಅವರು ತಿಳಿಸಿದ್ದಾರೆ.

"ಜೈದಿ ಅಮೆರಿಕವನ್ನು ದ್ವೇಷಿಸುತ್ತಿದ್ದರು. ಅವರು ಅಮೆರಿಕ ಯೋಧರನ್ನು ದ್ವೇಷಿಸುತ್ತಿದ್ದರು ಮತ್ತು ಬುಷ್‌‌ರನ್ನು ದ್ವೇಷಿಸುತ್ತಿದ್ದರು" ಎಂದು ಇನ್ನೊರ್ವ ಸಹೊದ್ಯೋಗಿ ಹೇಳಿದ್ದಾರೆ.

ಜೈದಿ ಮೇಲೆ ರಾಷ್ಟ್ರಕ್ಕೆ ಭೇಟಿ ನೀಡುತ್ತಿರುವ ವಿದೇಶಿ ರಾಷ್ಟ್ರಾಧ್ಯಕ್ಷನನ್ನು ಅವಮಾನಿಸಿದ ಪ್ರಕರಣ ದಾಖಲಿಸಿದಲ್ಲಿ ಕನಿಷ್ಠ ಎರಡು ವರ್ಷ ಜೈಲು, ಆದರೆ ಕೊಲೆ ಯತ್ನದ ದೂರು ದಾಖಲಿಸಲಾದಲ್ಲಿ 15ವರ್ಷ ಸಜೆಯನ್ನು ಆತ ಎದುರಿಸಬೇಕಾಗಬಹುದು ಎಂದು ಇರಾಕಿ ವಕೀಲರೊಬ್ಬರು ಹೇಳಿದ್ದಾರೆ.

ಲಂಡನ್ ಮೂಲದ ಪ್ರಭಾವಿ ಪತ್ರಿಕೆ ಅಲ್-ಖುದ್ಸ್-ಅಲ್-ಅರಬಿ ಪತ್ರಿಕೆಯ ಸಂಪಾದಕ ಅಬ್ದುಲ್ ಬಾರಿ ಅತ್ವಾನ್ ತಮ್ಮ ಪತ್ರಿಕೆಯ ವೆಬ್‌ಸೈಟ್‌ನಲ್ಲಿ ಈ ಘಟನೆಯ ಬಗ್ಗೆ "ಯುದ್ಧ ಅಪರಾಧಿಗೆ ಸೂಕ್ತ ವಿದಾಯ" ಎಂದು ಬರೆದಿದ್ದಾರೆ.

ಅಲ್ ಬಾಗ್ದದೀಯ ಟೆಲಿವಿಶನ್‌ನ ಕಾರ್ಯಕ್ರಮ ನಿರ್ದೇಶಕ ಮುಜಪಿರ್ ಅಲ್ ಖಾಫಜಿ, ಜೈದಿಯನ್ನು 'ಹೆಮ್ಮೆಯ ಅರಬ್ ಮತ್ತು ಮುಕ್ತ ಮನಸ್ಸಿನ ವ್ಯಕ್ತಿ' ಎಂದು ಹೇಳಿದ್ದಾರೆ.

"ನಾವು ಆತನ ಸುರಕ್ಷತೆಯ ಬಗ್ಗೆ ಭಯಭೀತರಾಗಿದ್ದೇವೆ" ಎಂದು ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ, ಅಲ್ಲದೆ ಈ ಮೊದಲು ಎರಡು ಬಾರಿ ಅಮೆರಿಕನ್ನರು ಜೈದಿಯನ್ನು ಬಂಧಿಸಿದ್ದರು ಎಂದೂ ಅವರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜಮಾತ್ ಕಾರ್ಯಕರ್ತರನ್ನು ಬಿಡುಗಡೆ ಮಾಡಿದ ಪಾಕ್
9/11ಗೆ ಮೊದಲು, ಪಾಕ್ ಅಣುವಿಜ್ಞಾನಿಗಳು-ಲಾಡೆನ್ ಭೇಟಿ
ಅಮರಿಕ ಅಧ್ಯಕ್ಷ ಬುಶ್‌ಗೆ ಬೂಟುಗಳನ್ನೆಸೆದ ಇರಾಕಿ ಪತ್ರಕರ್ತ
ಆಕ್ರಮಣ ಮಾಡಿದರೆ ಪ್ರತಿದಾಳಿ ಮಾಡುತ್ತೇವೆ: ಪಾಕ್
'ಯಾವುದೇ ಪಾಕ್ ಪ್ರಜೆಯನ್ನು ಭಾರತಕ್ಕೆ ಹಸ್ತಾಂತರಿಸುವುದಿಲ್ಲ'
ಹೆಚ್ಚಿನ ಉಗ್ರರ ದಾಳಿಗಳಿಗೆ ಪಾಕ್‌ ಹೊಣೆ :ಬ್ರೌನ್