ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > 'ಪಾಕ್‌ನಲ್ಲಿರುವ ರಾಷ್ಟ್ರ ರಹಿತರು ನಮ್ಮ ಜವಾಬ್ದಾರಿ'
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಪಾಕ್‌ನಲ್ಲಿರುವ ರಾಷ್ಟ್ರ ರಹಿತರು ನಮ್ಮ ಜವಾಬ್ದಾರಿ'
PTI
'ರಾಷ್ಟ್ರರಹಿತ' ಉಗ್ರರು ತಮ್ಮ ಜವಾಬ್ದಾರಿ ಮತ್ತು ತಾವು ಪಾಕಿಸ್ತಾನಿ ನೆಲವನ್ನು ಉಪಯೋಗಿಸಿಕೊಂಡು ಯಾವುದೇ ಮಿತ್ರ ಅಥವಾ ಶತ್ರು ರಾಷ್ಟ್ರದ ವಿರುದ್ಧ ದಾಳಿ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಹೇಳಿದ್ದಾರೆ.

ಕಾಂಡೊಲೀಸಾ ರೈಸ್ ಪಾಕಿಸ್ತಾನದಲ್ಲಿರುವ 'ರಾಷ್ಟ್ರರಹಿತ'ರಿಗೆ ಪಾಕಿಸ್ತಾನವೇ ಭಾದ್ಯಸ್ತ ಎಂದು ಹೇಳಿದ್ದರ ಬಗ್ಗೆ ಪ್ರಶ್ನಿಸಿದ್ದಕ್ಕೆ "ಖಂಡಿತವಾಗಿಯೂ. ನಾನು ಈ ಹೊಣೆಗಾರಿಕೆಯಿಂದ ಜಾರಿಕೊಳ್ಳವುದಿಲ್ಲ" ಎಂದು ಅವರು ನ್ಯೂಸ್‌ವೀಕ್ ಮ್ಯಾಗಜಿನ್‌ಗೆ ನೀಡಿದ ಸಂದರ್ಶನದಲ್ಲಿ ಉತ್ತರಿಸಿದರು.

ಭಾರತ ಮುಂಬಯಿ ದಾಳಿಗೆ ದೂಷಿಸಿರುವ ಲಷ್ಕರೆ ತೋಯ್ಬಾ ಬಗ್ಗೆ ಈ ಹಿಂದೆಯೂ ಪಾಕಿಸ್ತಾನಿ ನಾಯಕರು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದರು ಆದರೆ ಎಂದೂ ಸಹ ನಿಜವಾಗಿಯೂ ಕ್ರಮ ಕೈಗೊಂಡಿರಲಿಲ್ಲ ಎಂದು ಹೇಳಿದಾಗ, "ಅದು ನಾವಲ್ಲ" ಎಂದು ಜರ್ದಾರಿ ಉತ್ತರಿಸಿದರು.

ಎಲ್ಇಟಿಯನ್ನು ನಾಶಪಡಿಸಲು ಪಾಕಿಸ್ತಾನ ಯಾವುದಾದರೂ ದೃಢ ನಡೆಯನ್ನು ಕೈಗೊಳ್ಳುತ್ತದೆಯೇ ಎಂದು ಪ್ರಶ್ನಸಿದ್ದಕ್ಕೆ, "ನಾವು ಕ್ರಮ ಕೈಗೊಂಡಿದ್ದೇವೆ. ನಾವು ತೆಗೆದುಕೊಂಡಿರುವ ಒಂದು ನಡೆಯೆಂದರೆ 'ರಾಷ್ಟ್ರರಹಿತ' ಉಗ್ರರಿಗಾಗಿ ಎಲ್ಲಾ ಪ್ರದೇಶಗಳಲ್ಲಿ ಶೋಧನೆ ನಡೆಸುತ್ತಿದ್ದೇವೆ ಮತ್ತು ನಾವು ಕೆಲವರನ್ನು ಬಂಧಿಸಿದ್ದೇವೆ"
ಎಂದು ಜರ್ದಾರಿ ಹೇಳಿದ್ದಾರೆ.

ಮುಂಬಯಿ ಮೇಲೆ ದಾಳಿ ನಡೆಸಿದ ಎಲ್ಲಾ ಉಗ್ರರಿಗೆ ಪಾಕಿಸ್ತಾನದಲ್ಲಿ ತರಬೇತಿ ನೀಡಲಾಗಿತ್ತು ಎಂಬ ವರದಿಗಳ ಬಗ್ಗೆ ಪ್ರಶ್ನಿಸಿದಾಗ, "ಈ ಬಗ್ಗೆ ನನ್ನಲ್ಲಿ ಯಾವುದೇ ನಿರ್ದಿಷ್ಟ ಮಾಹಿತಿ ಇಲ್ಲ ಏಕೆಂದರೆ ಭಾರತೀಯರು ನಮಗೆ ಬಹಳ ಕಡಿಮೆ ಮಾಹಿತಿ ನೀಡಿದ್ದಾರೆ" ಎಂದು ಅವರು ಹೇಳಿದ್ದಾರೆ.

ಭಯೋತ್ಪಾದಕರಿಗೆ ಪಾಕಿಸ್ತಾನದಲ್ಲಿ ತರಬೇತಿ ದೊರಕಿರುವುದಾದರೆ ಇದು ಪಾಕಿಸ್ತಾನಕ್ಕೇನು ತೊಂದರೆ ಇಲ್ಲವೇ ಎಂದು ಪ್ರಶ್ನಿಸಿದ್ದಕ್ಕೆ, "ಖಂಡಿತವಾಗಿಯೂ ಇದೆ. ಇದರಿಂದ ಅವರಿಗೆ ತೊಂದರೆ ಇಲ್ಲ ಬದಲಾಗಿ ನನಗೆ ಇದೆ... ಪಾಕಿಸ್ತಾನ ಸರಕಾರ ಮತ್ತು ಜನತೆ ಈ ಪರಿಸ್ಥಿತಿಯಿಂದಾಗಿ ಅಂತಿಮ ನಷ್ಟ ಅನುಭವಿಸಿದವರು ಎಂಬುದನ್ನು ಭಾರತೀಯರು ಅರ್ಥ ಮಾಡಿಕೊಳ್ಳಬೇಕು. ನಾವು ಭಾರತದೊಂದಿಗಿನ ಸಂಬಂಧವನ್ನು ಉತ್ತಮಗೊಳಿಸಿಕೊಳ್ಳಲು ಬಹಳಷ್ಟು ಪ್ರಯತ್ನಗಳನ್ನು ಮಾಡಿದ್ದೇವೆ" ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನದ ಗುಪ್ತಚರ ಸಂಸ್ಥೆ (ಐಎಸ್ಐ) ಈ ಹಿಂದೆ ಲಷ್ಕರೆ ತೊಯ್ಬಾದೊಂದಿಗೆ ಸಂಪರ್ಕ ಹೊಂದಿತ್ತು ಎಂಬುದನ್ನು ಜರ್ದಾರಿ ಒಪ್ಪಿಕೊಂಡರು ಆದರೆ "ಈಗ ಪರಿಸ್ಥಿತಿ ತುಂಬಾ ಬದಲಾಗಿದೆ" ಎಂದು ಪ್ರತಿಪಾದಿಸಿದರು.

ಲಷ್ಕರೆ, ಐಎಸ್ಐ ಬೆಂಬಲದಿಂದ ಕಾರ್ಯನಿರ್ವಹಿಸುತ್ತಿದೆ ಎಂಬ ಪ್ರಕರಣವಿರುವುದು ಪ್ರಸ್ತುತ ಮತ್ತು ಹಿಂದೆ ಅಲ್ಲ ಎಂಬುದರ ಬಗ್ಗೆ ಕೇಳಿದ್ದಕ್ಕೆ, "ನಮ್ಮ ಗುಪ್ತಚರ ವಿಭಾಗ ಮತ್ತು ಲಷ್ಕರೆ ನಡುವೆ ಯಾವುದೇ ಸಂಪರ್ಕ ಇಲ್ಲ. ಲಷ್ಕರೆ ತೊಯ್ಬಾ ಪಾಕಿಸ್ತಾನದಲ್ಲಿ ನಿಷೇಧಿತವಾಗಿರುವ ಸಂಘಟನೆ" ಎಂದು ಅವರು ಹೇಳಿದ್ದಾರೆ.

ಕಾಶ್ಮೀರದಲ್ಲಿ ಭಾರತದ ವಿರುದ್ಧ ಹೋರಾಡಲು ಪಾಕಿಸ್ತಾನ ಸೇನೆ ಲಷ್ಕರೆಯನ್ನು ಬಳಸಿಕೊಂಡಿತ್ತು ಎಂಬುದನ್ನೂ ಒಪ್ಪಿಕೊಂಡ ಅವರು ತಾವು ಅಧಿಕಾರ ವಹಿಸಿಕೊಂಡ ಮೇಲೆ ಪರಿಸ್ಥಿತಿ ಬದಲಾಗಿದೆ ಎಂದು ವಾದಿಸಿದ್ದಾರೆ.

ಕಾಬೂಲ್‌ನಲ್ಲಿನ ಭಾರತೀಯ ರಾಯಭಾರಿ ಕಛೇರಿಯ ಮೇಲೆ ನಡೆಸಲಾದ ಬಾಂಬ್ ದಾಳಿಯಲ್ಲಿ ಐಎಸ್ಐ ಕೈವಾಡವಿದ್ದ ಬಗ್ಗೆ ಅಮೆರಿಕ ಗುಪ್ತಚರ ಸಂಸ್ಥೆಯ ಬಳಿ ಸಾಕ್ಷ್ಯಧಾರಗಳಿವೆ ಎಂಬ ವರದಿಗಳ ಬಗ್ಗೆ ಪ್ರಶ್ನಿಸಿದಾಗ, "ನಮಗೆ ಈ ಬಗ್ಗೆ ಅಮೆರಿಕನ್ನರಿಂದ ಯಾವುದೇ ಮಾಹಿತಿ ಬಂದಿಲ್ಲ. ನಾನು ಇದನ್ನು ಸಂಪೂರ್ಣವಾಗಿ ನಿರಾಕರಿಸುತ್ತೇನೆ. ಕಾಬೂಲ್ ಬಾಂಬ್ ದಾಳಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಮತ್ತೆ, ದಾಳಿಕೋರರು ರಾಷ್ಟ್ರರಹಿತರು" ಅವರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಮೆರಿಕಾ ಅಪಹರಣ ವಿಶೇಷಜ್ಞನೇ ಅಪಹೃತ!
ಫಿನಸ್ಟಿನ್ ಅಮೆರಿಕ ಗುಪ್ತದಳದ ಅಧ್ಯಕ್ಷೆ
'ಉಗ್ರವಾದ ದಮನದ ಮೇಲೆ ಪಾಕ್ ಭವಿಷ್ಯ ನಿಂತಿದೆ'
ಶಂಕಿತರ ವಿಚಾರಣೆ ನಡೆಸಲು ಅವಕಾಶವಿಲ್ಲ: ಪಾಕ್
ಅಮೆರಿಕಾವನ್ನು ದ್ವೇಷಿಸುತ್ತಿದ್ದ ಶೂ ಎಸೆದ ಪತ್ರಕರ್ತ
ಜಮಾತ್ ಕಾರ್ಯಕರ್ತರನ್ನು ಬಿಡುಗಡೆ ಮಾಡಿದ ಪಾಕ್