ಪಾಕಿಸ್ತಾನಿ ಅಧಿಕಾರಿಗಳು ಮತ್ತು ಅಜ್ಮಲ್ ಅಮೀರ್ ಕಸಬ್‌ನ ಗ್ರಾಮಸ್ಥರು ಮುಂಬಯಿ ದಾಳಿಯಲ್ಲಿ ಬಂಧಿಸಲ್ಪಟ್ಟಿರುವ ಏಕೈಕ ಉಗ್ರನೊಂದಿಗಿನ ಸಂಬಂಧವನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಕಸಬ್ ತಂದೆ ಉಗ್ರನನ್ನು ತಮ್ಮ ಮಗನೆಂದು ಗುರುತಿಸಿದ್ದಾರೆ.ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಓಕಾರಾ ಜಿಲ್ಲೆಯ ಫರೀದ್‌ಕೋಟ್‌ನಲ್ಲಿ ಭಾರೀ ಪ್ರಮಾಣದಲ್ಲಿ ಪಾಕಿಸ್ತಾನದ ಭದ್ರತಾ ಮತ್ತು ಗುಪ್ತಚರ ಸಂಸ್ಥೆಯ ಸಿಬ್ಬಂಧಿಗಳು ಸಿವಿಲ್ ಉಡುಪಿನಲ್ಲಿ ನಿಯೋಜಿಸಲ್ಪಟ್ಟಿದ್ದಾರೆ. ಏಕೆಂದರೆ ಬಂಧಿತ ಉಗ್ರ ಅಜ್ಮಲ್ ಇದೇ ಪ್ರದೇಶದವನಾಗಿದ್ದಾನೆ. ಈ ಪ್ರದೇಶಕ್ಕೆ ಭೇಟಿ ನೀಡಲು ತೆರಳುತ್ತಿರುವ ಪತ್ರಕರ್ತರು ತೀವ್ರ ವಿರೋಧ ಎದುರಿಸಬೇಕಾಗುತ್ತಿದೆ. ಗುಪ್ತಚರ ಸಿಬ್ಬಂಧಿಗಳ ಭಾವಚಿತ್ರಗಳನ್ನು ಜಿಓ ಚಾನೆಲ್ ಪ್ರಸಾರಿಸಿದೆ. ಡಿಸೆಂಬರ್ ಆರರಂದು ಫರೀದ್‌ಕೋಟ್‌ಗೆ ಭೇಟಿ ನೀಡಿದ್ದ ಪತ್ರಕರ್ತರನ್ನು ನೂರಕ್ಕೂ ಆಧಿಕ ಮಂದಿ ಸುತ್ತುವರೆದಿದ್ದರು ಎಂದು ದೈನಿಕವೊಂದು ವರದಿ ಮಾಡಿದೆ. ಅವರು ಪತ್ರಕರ್ತರ ಮೇಲೆ ಯಾರನ್ನು ಭೇಟಿ ಮಾಡಬಾರದಾಗಿ ಮತ್ತು ಪ್ರದೇಶದ ಯಾವುದೇ ಭಾವಚಿತ್ರವನ್ನು ತೆಗೆದುಕೊಳ್ಳಬಾರದೆಂದು ಒತ್ತಡ ಹಾಕಿದರು ಎನ್ನಲಾಗಿದೆ.ಜನರ ಭಾವನೆಗಳಿಗೆ ವಿರುದ್ಧವಾಗಿ ನಡೆದುಕೊಂಡರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಲ್ಲಿನ ಪ್ರಾಂತೀಯ ಮೆಯರ್ ಗುಲಾಮ್ ಮುಸ್ತಾಫ್ ಪತ್ರಕರ್ತರಿಗೆ ಎಚ್ಚರಿಕೆ ನೀಡಿದ್ದರು. |