ಲಂಡನ್: ಲಂಡನ್ ಮತ್ತು ಸ್ಕಾಟ್‌ಲ್ಯಾಂಡ್‌ನಲ್ಲಿನ ಕಾರ್ ಬಾಂಬ್ ದಾಳಿ ಪ್ರಕರಣದಲ್ಲಿ ದಾಳಿಯ ಪಿತೂರಿ ನಡೆಸಿದ್ದನ್ನೆಲಾದ ಇರಾಕಿ ವೈದ್ಯ ಬಿಲಾಲ್ ಅಬ್ದುಲ್ಲಾ ಅಪರಾಧಿಯೆಂಬ ನಿರ್ಣಯಕ್ಕೆ ಬರಲಾಗಿದೆ.
ಲಂಡನ್ ಮತ್ತು ಗ್ಲಾಸ್ಗೊ ವಿಮಾನ ನಿಲ್ದಾಣಗಳಲ್ಲಿ ನಡೆದ ಸ್ಪೋಟಗಳ ಸಂಚು ರೂಪಿಸಿದ ಪ್ರಕರಣದಲ್ಲೂ 29ರ ಹರೆಯದ ಬಿಲಾಲ್ ಅಪರಾಧಿಯೆಂದು ತೀರ್ಮಾನಿಸಲಾಗಿದೆ.
ಗ್ಲಾಸ್ಗೊ ವಿಮಾನ ನಿಲ್ದಾಣದ ಪ್ರವೇಶ, ದ್ವಾರದ ಬಳಿ ಸ್ಪೋಟಕಗಳಿಂದ ತುಂಬಿದ ಜೀಪ ನುಗ್ಗಿಸುವ ಸಂದರ್ಭ ಬಿಲಾಲ್ ಜೊತೆಗಿದ್ದ ಭಾರತೀಯ ನಾಗರಿಕ ಕಾಫೀಲ್ ಅಹಮ್ಮದ್ ಗಾಯಗೊಂಡು ಮೃತನಾಗಿದ್ದ. ಕಾಫೀಲ್ ಸಹ ಅಪರಾಧಿ ಎಂದು ಸಾಬೀತಾಗಿದೆ.
ನೈಋತ್ಯ ಲಂಡನ್‌ನ ನ್ಯಾಯಾಲಯದಲ್ಲಿ ತಾನು 'ಉಗ್ರವಾದಿ' ಎಂಬುದನ್ನು ಒಪ್ಪಿಕೊಂಡ ಅಬ್ದಲ್ಲಾ ತಾನು ಯಾರನ್ನೂ ಹತ್ಯೆ ಮಾಡಲು ಅಥವಾ ಗಾಯಗೊಳಿಸಲು ಉದ್ದೇಶಿಸಿರಲಿಲ್ಲ ಎಂದು ಹೇಳಿದ್ದಾನೆ. ಅಬ್ದಲ್ಲಾ ಈ ಮೊದಲೂ ಸಹ ತಾನು ಇಂಗ್ಲೀಷರನ್ನು ಭಯಪಡಿಸಲು ಉದ್ದೇಶಿಸಿದ್ದೆ ಎಂದು ಹೇಳಿದ್ದ.
ನ್ಯಾಯಾಲಯದ ವಿಚಾರಣೆ ಸಂದರ್ಭ ಪ್ರಾಸಿಕ್ಯೂಟರ, ಆಕ್ರಮಣಕಾರಿಗಳು "ತಾರತಮ್ಯವಿಲ್ಲದೆ, ಸಾಮೂಹಿಕ ಹತ್ಯಾಕಾಂಡ" ನಡೆಸಲು ಉದ್ದೇಶಿಸಿದ್ದರು ಎಂದು ವಾದಿಸಿದ್ದರು.
ಕಾಫೀಲ್‌ನ ಹತ್ತಿರದ ಸಂಬಂಧಿ ಡಾಕ್ಟರ್ ಹನೀಫ್‌ರನ್ನು ಸಹ ಆಸ್ಟ್ರೇಲಿಯಾ ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದ್ದರು. ಹನೀಫ್‌ಗೆ ಸಂಚಿನ ಬಗ್ಗೆ ತಿಳಿದಿದ್ದೂ ಅದನ್ನು ಅಧಿಕಾರಿಗಳಿಗೆ ತಿಳಿಸಿರಲಿಲ್ಲ ಎಂದು ಅಪಾದಿಸಲಾಗಿತ್ತು. ಭಾರತೀಯ ನಾಗರಿಕ, ಹನೀಫ್ ಬಂಧನ ಭಾರತೀಯ ಮತ್ತು ವಿದೇಶಿ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. |