ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಜಮಾತ್‌ಗೆ ಭಯೊತ್ಪಾದನೆಯ ನಂಟಿದೆ: ರೈಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಮಾತ್‌ಗೆ ಭಯೊತ್ಪಾದನೆಯ ನಂಟಿದೆ: ರೈಸ್
ಲಷ್ಕರೆ-ಎ-ತೊಯ್ಬಾ ಸಂಘಟನೆಯ ಹೊರಸಂಸ್ಥೆ ಜಮಾತ್-ಉದ್-ದಾವಾ ಕೇವಲ ಒಂದು ಧಾರ್ಮಿಕ ಸಂಸ್ಥೆ ಎಂಬ ಪಾಕಿಸ್ತಾನದ ವಾದವನ್ನು ಬುಧವಾರದಂದು ಅಮೆರಿಕ ತಳ್ಳಿ ಹಾಕಿದೆ.

ಅಮೆರಿಕಾ ರಾಷ್ಟ್ರ ಕಾರ್ಯದರ್ಶಿ ಕಾಂಡೊಲೀಸಾ ರೈಸ್, ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನಕಛೇರಿಯಲ್ಲಿ ಮಾತನಾಡುತ್ತಾ, ಜಮಾತ್-ಉದ್-ದಾವಾ ಖಂಡಿತವಾಗಿಯೂ ಭಯೋತ್ಪಾದನೆಯೊಂದಿಗೆ ನಂಟು ಹೊಂದಿದೆ ಎಂದು ಹೇಳಿದ್ದಾರೆ. ಜಮಾತ್ ಮೇಲೆ ವಿಶ್ವಸಂಸ್ಥೆ ಹೇರಿರುವ ನಿಷೇಧಕ್ಕೆ ಪಾಕಿಸ್ತಾನ ಬದ್ಧವಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ವಿಶ್ವಸಂಸ್ಥೆಯ ನಿಷೇಧದ ನಂತರ ದೇಶಾದ್ಯಂತ ಜಮಾತ್ ಕಾರ್ಯಾಲಯಗಳನ್ನು ಮುಚ್ಚಿ ಕಾರ್ಯಾಚರಣೆ ಆರಂಭಿಸಿದ್ದ ಪಾಕ್, ಒಂದು ವಾರದೊಳಗೆ ಜಮಾತ್ ಕಾರ್ಯ ಚಟುವಟಿಕೆಗಳ ಮೇಲೆ ಹೇರಿದ್ದ ನಿರ್ಬಂಧಗಳನ್ನು ಸಡಿಲಿಸತೊಡಗಿದೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಬಂಧಿಸಲ್ಪಟ್ಟಿದ್ದ ಲಷ್ಕರೆ ತೊಯ್ಬಾದ ಹೊರಸಂಸ್ಥೆ ಜಮಾತ್‌ನ ನಾಲ್ವರು ಕಾರ್ಯಕರ್ತರನ್ನು ಪಾಕ್ ಅಧಿಕಾರಿಗಳು ಈಗಾಗಲೇ ಬಿಡುಗಡೆಗೊಳಿಸಿದ್ದಾರೆ ಮತ್ತು ಸಂಘಟನೆಯ ಸ್ಥಳೀಯ ಮುಖಂಡ ಮೌಲಾನ ಅಬ್ದುಲ್ ಅಜೀಜ್ ಅಲ್ವಿ ಅವರ ಮನೆಯ ಬಳಿ ನಿಯೋಜಿಸಲ್ಪಟ್ಟಿದ್ದ ಪೊಲೀಸ್ ಗಾರ್ಡ್‌ಗಳನ್ನು ಸಹ ತೆರವುಗೊಳಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗ್ಲಾಸ್ಗೊ ಬಾಂಬ್ ದಾಳಿ: ಬಿಲಾಲ್ ಅಪರಾಧಿ
ಅಜ್ಮಲ್ ಪಾಕಿಸ್ತಾನಿ ಎಂದು ದೃಢಪಡಿಸಿದ ಎಫ್‌ಬಿಐ
ಕಸಬ್‌ ಸಂಬಂಧಿತ ಕೊಂಡಿಗಳನ್ನು ಕತ್ತರಿಸಲಾಗುತ್ತಿದೆ
'ಪಾಕ್‌ನಲ್ಲಿರುವ ರಾಷ್ಟ್ರ ರಹಿತರು ನಮ್ಮ ಜವಾಬ್ದಾರಿ'
ಅಮೆರಿಕಾ ಅಪಹರಣ ವಿಶೇಷಜ್ಞನೇ ಅಪಹೃತ!
ಫಿನಸ್ಟಿನ್ ಅಮೆರಿಕ ಗುಪ್ತದಳದ ಅಧ್ಯಕ್ಷೆ