ಇರಾಕ್ ವಿರುದ್ಧದ ಬ್ರಿಟಿಷ್ ಮಿಶನ್ 2009ರ ಮೇ 31ರಂದು ಕೊನೆಗೊಳ್ಳುತ್ತದೆ ಎಂದು ಇಂಗ್ಲೆಂಡ್ ಪ್ರಧಾನ ಮಂತ್ರಿ ಜಾರ್ಡನ್ ಬ್ರೌನ್ ಹೇಳಿದ್ದಾರೆ.
ಇರಾಕಿ ಪ್ರಧಾನಿ ನೂರಿ-ಅಲ್-ಮಲಿಕಿ ಅವರೊಂದಿಗೆ ಬಾಗ್ದದ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಬ್ರೌನ್ ಈ ವಿಷಯವನ್ನು ಪ್ರಕಟಿಸಿದ್ದಾರೆ. ಗುರುವಾರ ಬ್ರಿಟಿಷ್ ಸಂಸತ್ತಿನಲ್ಲಿ ಸೇನೆಯನ್ನು ಹಿಂದಕ್ಕೆ ಪಡೆಯುವ ಬಗ್ಗೆ ವಿವರ ಮಂಡಿಸುವುದಾಗಿ ಯೋಚಿಸುತ್ತಿರುವುದಾಗಿ ಅವರು ಹೇಳಿದ್ದಾರೆ.
ಇರಾಕ್‌ನಲ್ಲಿ 2007ರಿಂದ ಒತ್ತೆಯಾಳುಗಳಾಗಿರುವ ಐವರು ಬ್ರಿಟಿಷರನ್ನು ಶರತ್ತು ರಹಿತವಾಗಿ ಬಿಡುಗಡೆ ಮಾಡಬೇಕು ಎಂದು ಬ್ರೌನ್ ಕೇಳಿದ್ದಾರೆ.
ಅಮೆರಿಕ ಹೊರತಾಗಿ ಇತರ ಎಲ್ಲಾ ರಾಷ್ಟ್ರಗಳ ಸೇನೆಗಳನ್ನು ಜುಲೈ ಕೊನೆಯೊಳಗೆ ತಮ್ಮ ಸೇನೆಯನ್ನು ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸುವ ನಿರ್ಣಯವನ್ನು ಇರಾಕಿ ಸರಕಾರ ಕೈಗೊಂಡಿದೆ ಎಂಬ ಸುದ್ದಿಯ ಹಿಂದೆಯೇ ಬ್ರೌನ್ ಪ್ರಕಟಣೆ ಹೊರಬಿದ್ದಿದೆ.
ಇರಾಕ್ ವಿರುದ್ದದ ಅಂತಾರಾಷ್ಟ್ರೀಯ ಮಿಲಿಟರಿ ಕಾರ್ಯಾಚರಣೆಯಲ್ಲಿ ಹೆಚ್ಚಿನ 'ಕೊಡುಗೆ' ನೀಡಿದವರಲ್ಲಿ ಅಮೆರಿಕ ನಂತರದ ಸ್ಥಾನ ಬ್ರಿಟನ್‌ಗಿದೆ.
ಪ್ರಸ್ತುತ 4000 ಸಂಖ್ಯೆಯ ಬ್ರಿಟಿಷ್ ಸೈನ್ಯ ಇರಾಕ್‌ನ ದಕ್ಷಿಣ ಭಾಗದಲ್ಲಿದೆ. |