PTI ಭಾರತದ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿರುವ, ಜೈಷ್-ಎ-ಮೊಹಮ್ಮದ್ ಮುಖ್ಯಸ್ಥ ಮೌಲಾನ ಮಸೂದ್ ಅಜರ್ ಪಾಕಿಸ್ತಾನ ಸರಕಾರದ ಬಂಧನದಲ್ಲಿಲ್ಲ ಎಂದು ಪಾಕ್‌ನ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಹೇಳಿದ್ದಾರೆ. ಪಾಕ್ ರಕ್ಷಣಾ ಸಚಿವರು ಅಜರ್‌ನನ್ನು ಬಂಧಿಸಲಾಗಿದೆ ಎಂದು ತಿಳಿಸಿದ ಒಂದು ವಾರದಲ್ಲೇ ಅದಕ್ಕೆ ವಿರುದ್ಧವಾದ ಹೇಳಿಕೆ ವಿದೇಶಾಂಗ ಸಚಿವರಿಂದ ಹೊರಬಿದ್ದಿದೆ.ಮೌಲಾನ್ ಮಸೂದ್ ಅಜರ್ ಪಾಕಿಸ್ತಾನ ಸರಕಾರದ ವಾಂಟೆಡ್ ಪಟ್ಟಿಯಲ್ಲಿದ್ದಾನೆ, ಆದರೆ ಆತ ನಮ್ಮ ಬಂಧನದಲ್ಲಿಲ್ಲ ಅವನು ಇವರೆಗೆ ಸ್ವತಂತ್ರನಾಗಿದ್ದಾನೆ