PTI ಮುಂಬಯಿ ಉಗ್ರರ ದಾಳಿಯಲ್ಲಿ ಬಂಧಿಸಲ್ಪಟ್ಟ ಏಕೈಕ ಉಗ್ರ ಮೊಹಮ್ಮದ್ ಅಜ್ಮಲ್ ಅಮೀರ್ ಅಲಿಯಾಸ್ ಕಸಬ್‌ನಿಂದ ಕಾನೂನು ಸಹಾಯ ಕೋರಿ ಯಾವುದೇ ಪತ್ರ ತಮಗೆ ತಲುಪಿಲ್ಲವೆಂದು ಬುಧವಾರ ಹೇಳಿರುವ ಪಾಕಿಸ್ತಾನ ಕಸಬ್ ಪಾಕಿಸ್ತಾನಿ ನಾಗರಿಕನಲ್ಲವೆಂಬ ತನ್ನ ನಿರಾಕರಣೆಗೆ ಅಂಟಿಕೊಂಡಿದೆ. ದಯವಿಟ್ಟು, ಮಾಧ್ಯಮ ವರದಿಗಳಿಗೆ ಹೆಚ್ಚಿನ ಮಹತ್ವ ಕೊಡಬೇಡಿ. ನನಗಾಗಲಿ ಅಥವಾ ಪಾಕ್ ಹೈ ಕಮಿಷನ್‌ಗಾಗಲಿ ಯಾವುದೇ ಪತ್ರ ತಲುಪಿಲ್ಲ ಎಂದು ಪಾಕಿಸ್ತಾನದ ಹೈ ಕಮಿಷನರ್ ಶಾಹಿದ್ ಮಲ್ಲಿಕ್ ಸುದ್ದಿ ಸಂಸ್ಥೆಗೆ