ಅಮೆರಿಕದ ಪ್ರತಿಷ್ಠಿತ ಪತ್ರಿಕೆ ಟೈಮ್, ಹೊಸದಾಗಿ ಆಯ್ಕೆಯಾಗಿರುವ ರಾಷ್ಟ್ರಾಧ್ಯಕ್ಷ ಬರಾಕ್ ಒಬಾಮರನ್ನು 2008ರ ವರ್ಷದ ವ್ಯಕ್ತಿಯಾಗಿ ಆರಿಸಿದೆ. ಆದರೆ ಉಪವಿಜೇತರ ಶ್ರೇಣಿಯಲ್ಲಿ ಪ್ರಶಸ್ತಿಗಾಗಿ ಪೈಪೋಟಿ ಇದೆ.ಅಮೆರಿಕಾದ ಪ್ರಥಮ ಕರಿಯ ರಾಷ್ಟ್ರಾಧ್ಯಕ್ಷರಾಗಿ ಆರಿಸಲ್ಪಟ್ಟಿರುವುದಕ್ಕೆ ಒಬಾಮರಿಗೆ ಈ ಗೌರವವನ್ನು ನೀಡಲಾಗಿದೆ. ವೈಟ್ ಹೌಸ್ ಅನ್ನು ತಮ್ಮ ವಶಕ್ಕೆ ತೆಗೆದುಕೊಂಡ ಪ್ರಥಮ ಅಫ್ರಿಕನ್-ಅಮೆರಿಕನ್ ಆಗಿ ಅವರು ಇತಿಹಾಸ ನಿರ್ಮಿಸಿದ್ದಾರೆ ಎಂದು ಟೈಮ್ ಹೇಳಿದೆ.ಪ್ರಸಕ್ತ ವರ್ಷದಲ್ಲಿ ಹೆಚ್ಚು ಸುದ್ದಿಯಲ್ಲಿದ್ದ ಮತ್ತು ಜನಜೀವನದ ಮೇಲೆ ಧನಾತ್ಮಕವಾಗಿ ಅಥವಾ ಋಣಾತ್ಮಕವಾಗಿ ಪರಿಣಾಮ ಬೀರಿದ ಮತ್ತು ವರ್ಷದಲ್ಲಿ ಅತ್ಯಂತ ಪ್ರಮುಖವೆನಿಸಿದ ಬೆಳವಣಿಗೆಗೆ ಕಾರಣವಾದ ವ್ಯಕ್ತಿ ಅಥವಾ ವ್ಯಕ್ತಿಗಳನ್ನು ತಾವು ವರ್ಷದ ವ್ಯಕ್ತಿಯನ್ನಾಗಿ ಆರಿಸುವುದಾಗಿ ಟೈಮ್ ಹೇಳಿದೆ.ಕಳೆದ ಸಲ ಈ ಪತ್ರಿಕೆ ರಷ್ಯಾದ ನಾಯಕ ವ್ಲಾಡಿಮಿರ್ ಪುಟಿನ್‌ರನ್ನು 2007ರ ವರ್ಷದ ವ್ಯಕ್ತಿಯಾಗಿ ಆರಿಸಿತ್ತು.ಉಪವಿಜೇತ ಪಟ್ಟಿಯಲ್ಲಿ ಈ ಗೌರವಕ್ಕಾಗಿ ಅಮೆರಿಕಾದ ಹಣಕಾಸು ಸಚಿವ ಹಿನರಿ ಪೋಲ್‌ಸನ್, ಫ್ರಾನ್ಸ್‌ನ ರಾಷ್ಟ್ರಪತಿ ನಿಕೋಲಸ್ ಸರ್ಕೊಜಿ, ಅಮೆರಿಕದ ರಿಪಬ್ಲಿಕ್ ಪಕ್ಷದ ಉಪರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಯಾಗಿದ್ದ ಸಾರಾ ಪಾಲಿನ್ ಮತ್ತು ಚೀನೀ ನಿರ್ದೇಶಕ ಇಮಿ ಸ್ಪರ್ಧೆಯಲ್ಲಿದ್ದಾರೆ. |