ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಅವರ ಮೇಲೆ ಬೂಟ್ ಎಸೆದ ಇರಾಕಿ ಪತ್ರಕರ್ತ ಮುಂತಜಿರ್ ಅಲ್ ಜೈದಿ ಅವರ ಜನಪ್ರೀಯತೆ ದಿನದಿಂದ ದಿನಕ್ಕೆ ಏರುತ್ತಲೇ ಹೋಗುತ್ತಿದೆ. ಒಂದು ಕಡೆ ಜೈದಿಗೆ ವಿವಾಹ ಪ್ರಸ್ತಾಪ ಬಂದಿದ್ದರೆ ಇನ್ನೊಂದೆಡೆ ಜೈದಿ ಬೂಟುಗಳ ಮೇಲೆ ತಮ್ಮ ಸ್ವಾಮ್ಯತೆ ಸ್ಥಾಪಿಸಲು ಶೂ ಕಂಪೆನಿಗಳ ನಡುವೆ ಪೈಪೋಟಿ ಆರಂಭವಾಗಿದೆ.ಬೂಟಿಗೆ 10 ಲಕ್ಷ ಬಿಡ್ಡಿಂಗ್: ಸೌದಿಯ ವ್ಯಕ್ತಿಯೊಬ್ಬ ಮುಂತಜಿರ್ ಅಲ್ ಜೈದಿ ಅಮೆರಿಕಾ ಅಧ್ಯಕ್ಷ ಬುಷ್‌ರ ಮೇಲೆ ಎಸೆದ ಬೂಟಗಳಿಗೆ 10 ಲಕ್ಷ ಪಾವತಿಸುವುದಾಗಿ ಬಾಗ್ದಾದ್‌ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಪ್ರಸ್ತಾವನೆಯಿಟ್ಟಿದ್ದಾರೆ.ನಿವೃತ್ತ ಶಾಲಾ ಶಿಕ್ಷಕರಾಗಿರುವ ಮೊಹಮ್ಮ್ದ್ ಮಕಾಫಾ "ಇದು ನನ್ನಲ್ಲಿರುವ ಎಲ್ಲಾ ಆಸ್ತಿಗಳಿಂಗಿಂತಲೂ ಅಮೂಲ್ಯವಾದುದು. ನಾನು ಇದನ್ನು ನನ್ನ ಮಕ್ಕಳಿಗೆ ಹಸ್ತಾಂತರಿಸುತ್ತೇನೆ ಮತ್ತು ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶನಕ್ಕಿಡುತ್ತೇನೆ ಮತ್ತು ಇದನ್ನು ಸ್ವಾತಂತ್ರ್ಯದ ಪದಕ ಎಂದು ಕರೆಯಬಯಸುತ್ತೇನೆ" ಎಂದು ಹೇಳಿದ್ದಾರೆಜೈದಿಗೆ ಬಂತು ಮದುವೆ ಅಫರ್: ಇರಾಕ್‌ನ ಮಿಸ್ರಾದ ವ್ಯಕ್ತಿಯೊಬ್ಬರು ಬುಷ್ ಮೇಲೆ ಬೂಟು ಎಸೆದ 'ಶೂರ' ಜೈದಿಯೊಂದಿಗೆ ತಮ್ಮ 20ರ ಹರೆಯದ ಪುತ್ರಿಯ ವಿವಾಹ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ.ಆ ವ್ಯಕ್ತಿಯ ಪುತ್ರಿ, ಅಮಲ್ ಸಾದ ಗುಮಾ ತಾವು ಜೈದಿಯನ್ನು ವಿವಾಹವಾಗಲು ಬಯಸಿರುವುದಾಗಿ ಹೇಳಿದ್ದಾರೆ. ಇದರಿಂದ ನನಗೆ ಗೌರವ, ಪ್ರತಿಷ್ಠೆಗಳು ದೊರಕುತ್ತವೆ ಎಂದು ಅಮಲ್ ಹೇಳುತ್ತಾರೆ. ಅಮಲ್ ಮಧ್ಯ ಮಿಸ್ರಾದಲ್ಲಿರುವ ಮಿನ್ಯಾ ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿನಿಯಾಗಿದ್ದಾರೆ.ಬೂಟು ಕಂಪೆನಿಗಳ ಕಿತ್ತಾಟ: ಇದು ತಮ್ಮ ಕಂಪೆನಿಯ ಉತ್ಪನ್ನವನ್ನು ಪ್ರಸಿದ್ಧಿಗೊಳಿಸುವ ತಂತ್ರವಾಗಿರಬಹುದು ಅಥವಾ ಇನ್ನೇನೊ ಆಗಿರಬಹುದು ಆದರೆ ಅಮೆರಿಕಾ ಅಧ್ಯಕ್ಷರ ಮೇಲೆ ಬುಷ್ ಎಸೆದ ಬೂಟುಗಳು ತಮ್ಮ ಕಂಪೆನಿಯವು ಎಂದು ಹಲವಾರು ಕಂಪೆನಿಗಳು ಪೈಪೋಟಿಗೆ ನಿಂತಿವೆ.ಬಹಳಷ್ಟು ಜನರ ದೃಷ್ಟಿಯಲ್ಲಿ ಜೈದಿ ಹೀರೊ ಎನಿಸಿಕೊಂಡು ಬಿಟ್ಟಿದ್ದಾರೆ. ಅದಕ್ಕೆಂದೇ ಎಲ್ಲಾ ಕಂಪೆನಿಗಳು ಅವರ ಬೂಟನ್ನು ತಮ್ಮ ಕಂಪೆನಿಯವು ಎನ್ನುತ್ತಿವೆ. ಬೂಟುಗಳು ತುರ್ಕಿ ಕಂಪೆನಿಯವುಗಳಾಗಿರಬಹುದು, ಲೆಬೆನಾನ್ ಕಂಪೆನಿಯವು ಆಗಿರಬಹುದು ಅಥವಾ ಇರಾಕಿನಲ್ಲಿ ಹೆಚ್ಚಾಗಿ ಖರೀದಿಸಲ್ಪಡುವ ಚೀನಾ ಕಂಪೆನಿಗಳದಾಗಿರಬಹುದು ಎಂಬುದು ಇರಾಕ್‌ನಲ್ಲೀಗ ಬಿಸಿಬಿಸಿ ಚರ್ಚೆಯ ವಿಷಯ.ಬೂಟುಗಳು ಇರಾಕ್‌ನವು: ಚರ್ಚೆಗಳ ಹೊರತಾಗಿಯೂ, ಜೈದಿ ಸಹೋದರ ಉದಯ್ ಅಲ್ ಜೈದಿ, ಬೂಟುಗಳು ಇರಾಕ್‌ನಲ್ಲಿ ತಯಾರಾದವು ಎಂದು ನಾನು ನೂರು ಪ್ರತಿಶತ ವಿಶ್ವಾಸದೊಂದಿಗೆ ಹೇಳಬಲ್ಲೆ ಎಂದಿದ್ದಾರೆ. ಅವರ ಬೂಟುಗಳು ಚೀನಾ ಅಥವಾ ತುರ್ಕಿಯಲ್ಲಿ ತಯಾರಾದವುಗಳಲ್ಲ, ಅವು ಇರಾಕ್‌ನ ಅಲ್ ಹದದ್ ಎಂಬ ಶೂ ಕಂಪೆನಿಯವುಗಳಾಗಿವೆ ಎಂದು ಉದಯ್ ಹೇಳುತ್ತಾರೆ. ಅಲ್ ಹದದ್ ಇರಾಕ್‌ನ ಅತ್ಯಂತ ಪ್ರಸಿದ್ಧಿ ಶೂ ಕಂಪೆನಿ.ಜಾಹಿರಾತಿನಲ್ಲಿ ಬೂಟು: ತುರ್ಕಿಯ ಸುದ್ದಿಪತ್ರಿಕೆ ಯೂನಿ ಸಫಾಕ್‌ದಲ್ಲಿ ತುರ್ಕಿಯ ಒರ್ವ ವ್ಯಾಪಾರಿ ರಾಮಜಾನ್ ಬೇದಾನ್, ಪತ್ರಿಕೆಯ ಮುಖಪುಟದಲ್ಲಿ ಜೈದಿಯ ಬೂಟಿನ ವಿನ್ಯಾಸದ ಜಾಹೀರಾತನ್ನು 'ಮೇಡ್ ಇನ್ ತುರ್ಕಿ' ಎಂಬ ಶೀರ್ಷಿಕೆಯಡಿ ಪ್ರಕಟಿಸಿದ್ದಾರೆ.ಬೇದಾನ್ ಹೇಳುವಂತೆ ಅವರು ಈ ಬೂಟಗಳ ವಿನ್ಯಾಸವನ್ನು 1999ರಲ್ಲಿ ತಯಾರಿಸಿದ್ದು ಮತ್ತು ಈ ಘಟನೆಯ ನಂತರ ಇರಾಕ್‌ನಿಂದ ಈ ಬೂಟುಗಳಿಗಾಗಿನ ಅರ್ಡರ್ 100 ಪಟ್ಟು ಹೆಚ್ಚಾಗಿದೆ. ಜೈದಿ ಬುಷ್‌ರ ಮೇಲೆ ಎಸೆದ ಬೂಟ್‌ನ ಮೇಲ್ಮೈ ಎಷ್ಟು ಮೃದುವಾಗಿದೆಯೆಂದರೆ ಅವು ಬುಷ್‌ರ ತಲೆಗೆ ಬಡಿದಿದ್ದರೂ ಅವರು ಗಾಯಗೊಳ್ಳುತ್ತಿರಲಿಲ್ಲ ಎಂದು ಅವರು ಹೇಳುತ್ತಾರೆ. |