ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > 26/11 ದಾಳಿ: ಲಷ್ಕರೆ ಬೆನ್ನಿಗಿದ್ದ ದಾವೂದ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
26/11 ದಾಳಿ: ಲಷ್ಕರೆ ಬೆನ್ನಿಗಿದ್ದ ದಾವೂದ್
ಮುಂಬಯಿ ಮೇಲಿನ 26/11 ದಾಳಿಯಲ್ಲಿ ಭೂಗತ ದೊರೆ ದಾವೂದ್ ಇಬ್ರಾಹಿಂ ಸಹ ಭಾಗೀದಾರನಾಗಿದ್ದ ಎಂದು ರಷ್ಯಾದ ಗುಪ್ತಚರ ಇಲಾಖೆ ಹೇಳಿದೆ.

ದಾವೂದ್‌ನ ಡ್ರಗ್ ಜಾಲವನ್ನು ಭಯೋತ್ಪಾದನಾ ದಾಳಿಗೆ ಹಣಕಾಸು ಪೂರೈಸಲು ಬಳಸಿಕೊಳ್ಳಲಾಗಿದೆ ಎಂದು ಹೇಳಿರುವ ರಷ್ಯಾ ಗುಪ್ತಚರ ಇಲಾಖೆ ದಾಳಿಯ ಸಂಚು ರೂಪಿಸುವಲ್ಲಿಯೂ ದಾವೂದ್, ಲಷ್ಕರೆ ಬೆಂಬಲಕ್ಕಿದ್ದ ಎಂದಿದೆ.

ಕರಾಚಿ ಮೂಲದ ಗಾಂಗ್‌ಸ್ಟರ್ ಮತ್ತು ನಿಷೇಧಿತ ಉಗ್ರ ಸಂಘಟನೆಯ ಪ್ರಥಮ ಜಂಟಿ ಕಾರ್ಯಾಚರಣೆ ಎನ್ನಲಾದ ಮುಂಬಯಿ ದಾಳಿ ಸಂಘಟಿಸಲು ಕೋಲಾಬ ಮೂಲದ ಬುಸಿನೆಸ್ ಮ್ಯಾನ್ ಎಂದು ಶಂಕಿಸಲಾಗಿರುವ ದಾವೂದ್‌ನ ನೆಚ್ಚಿನ ಬಂಟ, ಲಷ್ಕರೆ ತೊಯ್ಬಾಗೆ ಸ್ಪೋಟಕ ಮತ್ತು ಶಸ್ತ್ರಾಸ್ತೃಗಳನ್ನು ಪೂರೈಸಿದ್ದ ಎಂದು ಈ ಹಿಂದೆ ವರದಿಯಾಗಿತ್ತು.

ಮುಂಬಯಿ ದಾಳಿಯ ಸಂದರ್ಭ ಬಂದಿಸಲ್ಪಟ್ಟಿರುವ ಏಕೈಕ ಉಗ್ರ ಅಜ್ಮಲ್ ಅಮೀರ್, ಮುಂಬಯಿಯಲ್ಲಿ ಹಲವಾರು ಕಸ್ಟಮ್ ಕ್ಲೀಯರಿಂಗ್ ಸಂಸ್ಥೆಗಳನ್ನು ನಡೆಸುತ್ತಿರುವ ದಾವೂದ್ ಸಹಚರ ತಾವು ಮುಂಬಯಿ ಗೇಟ್ ತಲುಪಲು ಬೋಟ್‌ಗಳ ವ್ಯವಸ್ಥೆ ಮಾಡಿದ್ದ ಎಂದು ತನಿಖಾಗಾರರಿಗೆ ತಿಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಮುಂಬಯಿ ದಾಳಿಯಲ್ಲಿ ಪಾಕಿಸ್ತಾನದ ಭೂಗತ ದೊರೆ ದಾವೂದ್‌ ಇಬ್ರಾಹಿಂನ ಭಾಗೀದಾರಿಕೆಯನ್ನು ತಳ್ಳಿಹಾಕುವಂತಿಲ್ಲ ಎಂದು ಆರಂಬಿಕ ತನಿಖೆಯ ನಂತರ ಮುಂಬಯಿ ಪೊಲೀಸರು ಹೇಳಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬೂಟ್ ಮಹಿಮೆ: ಹೆಚ್ಚಿದ ಜೈದಿ ಜನಪ್ರಿಯತೆ
ಒಬಾಮಾಗೆ 'ವರ್ಷದ ವ್ಯಕ್ತಿ' ಪುರಸ್ಕಾರ
ಕಸಬ್ ಪಾಕಿಸ್ತಾನೀಯನೇ ಅಲ್ಲ, ನಂಬಬೇಡಿ: ಪಾಕ್
ಅಜರ್ ಮಸೂದ್ ನಮ್ಮಲ್ಲಿಲ್ಲ, ಎಲ್ಲಿದ್ದಾನೆ ಗೊತ್ತಿಲ್ಲ: ಪಾಕ್
'ಮಿಶನ್ ಇರಾಕ್' ಮೇ 31ಕ್ಕೆ ಕೊನೆ: ಬ್ರೌನ್
ಜಮಾತ್‌ನ ಶಾಲೆಗಳನ್ನು ಸರಕಾರ ನಡೆಸುತ್ತಂತೆ!