ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕಿಸ್ತಾನದಿಂದ ಮತ್ತೊಂದು ತಿಪ್ಪರಲಾಗ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕಿಸ್ತಾನದಿಂದ ಮತ್ತೊಂದು ತಿಪ್ಪರಲಾಗ!
PTI
ಕಳೆದ ವಾರ ಭಾರತದ ಫೈಟರ್ ಜೆಟ್ ವಿಮಾನಗಳು ಪಾಕಿಸ್ತಾನದ ವಾಯುಕ್ಷೇತ್ರ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಿವೆ ಎಂಬ ಬಗ್ಗೆ ಗುರುವಾರ ಪಾಕಿಸ್ತಾನವು ಭಾರತದ ವಿರುದ್ಧ ಅಧಿಕೃತ ಪ್ರತಿಭಟನೆ ಸಲ್ಲಿಸಿದೆ. ಇದರೊಂದಿಗೆ, ಕಳೆದ ವಾರವಷ್ಟೇ ಪಾಕ್ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತು ಪಾಕಿಸ್ತಾನ ವಾಯುಪಡೆಯ ಮುಖ್ಯಸ್ಥರು ಸಹ "ಇದು ಸಣ್ಣ ತಪ್ಪಿನಿಂದಾದ ಅನಿರೀಕ್ಷಿತ ಪ್ರವೇಶ" ಎಂದು ಹೇಳುವುದರ ಮೂಲಕ ವಿಷಯಕ್ಕೆ ಮಹತ್ವ ನೀಡಿರಲಿಲ್ಲ. ಇದೀಗ ತಿಪ್ಪರಲಾಗ ಹಾಕಿದ್ದಾರೆ.

ಭಾರತ ಉಪ ಹೈಕಮಿಷನರ್ ಮನ್‌ಪ್ರೀತ್ ಓರಾ ಅವರಿಗೆ ಪಾಕಿಸ್ತಾನದ ಹೆಚ್ಚುವರಿ ಕಾರ್ಯದರ್ಶಿ ಅಜಿಜ್ ಅಹ್ಮದ್ ಚೌಧರಿ ಈ ಕುರಿತು ಅಧಿಕೃತ ಪ್ರತಿಭಟನಾ ಪತ್ರವನ್ನು ಹಸ್ತಾಂತರಿಸಿದ್ದಾರೆ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ.

ಪತ್ರದಲ್ಲಿ ಘಟನೆಯ ಬಗ್ಗೆ ಪಾಕಿಸ್ತಾನ ಕಳವಳ ವ್ಯಕ್ತಪಡಿಸಿದ್ದು ಈ ಬಗ್ಗೆ ಭಾರತದ ಸ್ಪಷ್ಟನೆಯನ್ನು ಕೇಳಿದೆ ಎನ್ನಲಾಗಿದೆ. ಪಾಕ್ ಆಕ್ರಮಿತ ಪಾಕಿಸ್ತಾನ ಮತ್ತು ಲಾಹೋರ್ ವಲಯಕ್ಕೆ ಭಾರತದ ಎರಡು ಜೆಟ್ ವಿಮಾನಗಳು ಪ್ರವೇಶಿಸಿದ್ದವು ಎಂದು ಪಾಕಿಸ್ತಾನ ಅಪಾದಿಸಿದೆ.

ಭಾರತದ ನೌಕಪಡೆಯ ವಕ್ತಾರ ವಿಂಗ್ ಕಮಾಂಡರ್ ಮಹೇಶ್ ಉಪಸಾನಿ, ನಮ್ಮ ಯಾವುದೇ ಫೈಟರ್ ಜೆಟ್‌ಗಳು ಪಾಕಿಸ್ತಾನ ವಾಯುಕ್ಷೇತ್ರವನ್ನು ಪ್ರವೇಶಿಸಿಲ್ಲ ಎಂದು ಹೇಳುವುದರ ಮೂಲಕ ಪಾಕ್ ಅರೋಪವನ್ನು ನಿರಾಕರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಒಬಾಮಾಗೆ ಬುಷ್ ಸಲಹೆ
ಉಗ್ರರು ಪಾಕಿಸ್ತಾನಿಗಳು ಎಂಬದಕ್ಕೆ ಸಾಕ್ಷಿಯಿಲ್ಲ: ಜರ್ದಾರಿ
ಗ್ಲಾಸ್ಗೊ ಸ್ಪೋಟ: ಅಬ್ದುಲ್ಲಾಗೆ 32 ವರ್ಷ ಜೈಲು
26/11 ದಾಳಿ: ಲಷ್ಕರೆ ಬೆನ್ನಿಗಿದ್ದ ದಾವೂದ್
ಜೈದಿ ಬೂಟಿಗೆ ಭಾರೀ ಡಿಮ್ಯಾಂಡ್
ಒಬಾಮಾಗೆ 'ವರ್ಷದ ವ್ಯಕ್ತಿ' ಪುರಸ್ಕಾರ