ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ತಪ್ಪಾಯಿತು, ಕ್ಷಮಿಸಿ ಎಂದ ಜೈದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತಪ್ಪಾಯಿತು, ಕ್ಷಮಿಸಿ ಎಂದ ಜೈದಿ
ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲೂ ಬುಷ್‌ರ ಮೇಲೆ ಬೂಟು ಎಸೆದಿದ್ದ ಇರಾಕಿ ಪತ್ರಕರ್ತ ಮುಂತಜಿರ್ ಅಲ್ ಜೈದಿ ಕ್ಷಮೆ ಕೋರಿದ್ದಾನೆ.

ಜೈದಿ ತನ್ನ ವರ್ತನೆ ಅಸಹ್ಯಕರವಾಗಿತ್ತು ಆದರೆ ತಾನು ಈ ಕುರಿತು ಕ್ಷಮೆಯಾಚಿಸುತ್ತೇನೆ ಎಂದು ಇರಾಕ್ ಪ್ರಧಾನಿ ನೂರಿ ಅಲ್ ಮಲ್ಲಿಕಿ ಪತ್ರ ಬರೆದಿದ್ದಾನೆ ಎಂದು ಪ್ರಧಾನಿ ಮಂತ್ರಿಯವರ ವಕ್ತಾರರೊಬ್ಬರು ತಿಳಿಸಿದ್ದಾರೆ.

ಪ್ರಸ್ತುತ ಬಂಧನದಲ್ಲಿರುವ ಜೈದಿ, 2005ರಲ್ಲಿ ತಾನು ಪ್ರಧಾನಿ ನೂರಿ ಅವರನ್ನು ಭೇಟಿಯಾಗಲು ಹೋಗಿದ್ದಾಗ ಅವರು ಬನ್ನಿ ಇದು ನಿಮ್ಮ ಮನೆ ಎಂದಿದ್ದರು ಆದ್ದರಿಂದ ನಾನು ನಿಮ್ಮಲ್ಲಿ ಕ್ಷಮೆಯ ನಿರೀಕ್ಷೆಯಿಸಿದ್ದೇನೆ ಎಂದು ಪತ್ರದಲ್ಲಿ ಬರೆದಿದ್ದಾನೆ ಎಂದು ವಕ್ತಾರ ಯಾಸಿನ್ ಮಜಿದ್ ಹೇಳಿದ್ದಾರೆ.

ಇರಾಕ್ ಸಂವಿಧಾನದ ಅನುಸಾರ ಪ್ರಧಾನಮಂತ್ರಿಗಳ ಶಿಫಾರಸ್ಸಿನ ಮೇರೆಗೆ ಇರಾಕ್ ರಾಷ್ಟ್ರಪತಿ ಜಲಾಲ್ ತಲಾಬನಿ ಕ್ಷಮಾದಾನ ನೀಡಬಲ್ಲರು. ಜೈದಿ ವಿರುದ್ಧ ವಿದೇಶಿ ರಾಷ್ಟ್ರಾಧ್ಯಕ್ಷರನ್ನು ಅವಮಾನಿಸಿದ ಪ್ರಕರಣ ನಡೆಸಲಾದಲ್ಲಿ ಆತ 2 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆಗಳಿವೆ.

ಬೂಟುಗಳೆಲ್ಲಿ ?
ಸೌದಿಯ ವ್ಯಕ್ತಿಯೊಬ್ಬ 10 ಲಕ್ಷ ನೀಡಿ ಖರೀದಿಸ ಬಯಸಿದ್ದ ಅಮೆರಿಕ ಅಧ್ಯಕ್ಷರ ಮೇಲೆ ಎಸೆಯಲಾಗಿದ್ದ ಬೂಟುಗಳನ್ನು ನಾಶ ಪಡಿಸಲಾಗಿದೆ. ಬೂಟುಗಳಲ್ಲಿ ಸ್ಪೋಟಕಗಳಿದ್ದುವೇ ಎಂದು ಪರೀಕ್ಷಿಸಿದ ನಂತರ ಭದ್ರತಾ ಸಿಬ್ಬಂದಿಗಳು ಬೂಟುಗಳನ್ನು ನಾಶ ಪಡಿಸಿದ್ದಾರೆ ಎಂದು ತನಿಖೆ ನಡೆಸುತ್ತಿರುವ ಜಡ್ಜ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕ್ 'ವಾಯುಕ್ಷೇತ್ರ ಉಲ್ಲಂಘನೆ': ಭಾರತದ ವಿರುದ್ಧ ದೂರು
ಒಬಾಮಾಗೆ ಬುಷ್ ಸಲಹೆ
ಉಗ್ರರು ಪಾಕಿಸ್ತಾನಿಗಳು ಎಂಬದಕ್ಕೆ ಸಾಕ್ಷಿಯಿಲ್ಲ: ಜರ್ದಾರಿ
ಗ್ಲಾಸ್ಗೊ ಸ್ಪೋಟ: ಅಬ್ದುಲ್ಲಾಗೆ 32 ವರ್ಷ ಜೈಲು
26/11 ದಾಳಿ: ಲಷ್ಕರೆ ಬೆನ್ನಿಗಿದ್ದ ದಾವೂದ್
ಜೈದಿ ಬೂಟಿಗೆ ಭಾರೀ ಡಿಮ್ಯಾಂಡ್