ಪಾಕಿಸ್ತಾನ ವಿಫಲ ಮತ್ತು ಆಡಳಿತ ನಡೆಸಲಾಗದ ರಾಷ್ಟ್ರದ ಚಿತ್ರವನ್ನು ಪ್ರತಿನಿಧಿಸುತ್ತದೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ನವಾಜ್ ಶರೀಫ್ ಹೇಳಿದ್ದಾರೆ ಎಂದು ಡೈಲಿ ಟೈಮ್ಸ್ ವರದಿ ಮಾಡಿದೆ.ಪರವೇಜ್ ಮುಶರಫ್‌ರ ಮಿಲಿಟರಿ ಆಡಳಿತವನ್ನು ನೇರವಾಗಿ ದೂಷಿಸಿದ ಶರೀಫ್, ಜನರಲ್ ರಾಜ್ಯಭಾರದ ಅವಧಿ ರಾಷ್ಟ್ರವನ್ನು ಹತೋಟಿ ಮಾಡಲು ಅಸಾಧ್ಯವೆನಿಸುವಂತಹ ಸ್ಥಿತಿಗೆ ತಂದಿದೆ ಎಂದಿದ್ದಾರೆ. ಏತನ್ಮಧ್ಯೆ, ಪ್ರಸ್ತುತ ಪಾಕ್ ಸರಕಾರವನ್ನು ಅವರು ಬೆಂಬಲಿಸುತ್ತಾ, "ಕ್ಷಯಿಸುತ್ತಿರುವ ಪರಿಸ್ಥಿತಿಗೆ ಪ್ರಸಕ್ತ ಸರಕಾರ ಹೊಣೆಯಲ್ಲ" ಎಂದು ಹೇಳಿದ್ದಾರೆ.ರಾಷ್ಟ್ರವನ್ನು ಮತ್ತೆ ಹಳಿಗೆ ಮರಳಿಸಲು ಮಾರ್ಗಸೂಚಿಯ ಬಗ್ಗೆ ಮಾತನಾಡಿದ ಅವರು, "ರಾಷ್ಟ್ರವನ್ನು ಯಶಸ್ಸಿನತ್ತ ಕೊಂಡೊಯ್ಯಲು ರಾಷ್ಟ್ರದ ಸಾಗಬೇಕಾದ ಪಥದ, ಮಾರ್ಗಸೂಚಿಯನ್ನು ತಯಾರಿಸುವುದು ಅಗತ್ಯವಾಗಿದೆ" ಎಂದು ಹೇಳಿದ್ದಾರೆ.ಮುಂಬಯಿ ಮೇಲಿನ ಭಯೋತ್ಪಾದಕ ದಾಳಿಯ ಕುರಿತು ಪ್ರತಿಕ್ರಿಯಿಸಿದ ಶರೀಫ್ ಭಾರತವನ್ನು ಟೀಕಿಸಿದರು ಮತ್ತು ಅಮೆರಿಕ ರಕ್ಷಣಾ ಸಮಿತಿಯ ಬಳಿಗೋಡುವ ಬದಲು ಪಾಕಿಸ್ತಾನದೊಂದಿಗೆ ಗುಪ್ತಚರ ಮಾಹಿತಿಗಳನ್ನು ಹಂಚಿಕೊಳ್ಳವಂತೆ ಆಗ್ರಹಿಸಿದರು. |