ಎನ್ಆರ್ಐ ಲಾರ್ಡ್ ಸ್ವರಾಜ್ ಪೌಲ್ ಇಂಗ್ಲೆಂಡ್ ಸಂಸತ್ತಿನ ಮೇಲ್ಮನೆಯ ಏಶ್ಯಾದ ಪ್ರಥಮ ಸಭಾಪತಿಯಾಗುವುದರ ಮೂಲಕ ಇತಿಹಾಸ ಬರೆದಿದ್ದಾರೆ.
ಇಂಗ್ಲೆಂಡ್-ಭಾರತ ಬ್ಯುಸಿನೆಸ್ ಸಮಿತಿಯ ಮುಖ್ಯಸ್ಥರಾಗಿರುವ ಲಾರ್ಡ್ ಕರಣ್ ಬೊಲಿಮೊರಿಯಾ, ಮೇಲ್ಮನೆಯ ಉಪಸಭಾಪತಿಯಾಗಿ ಆಯ್ಕೆಯಾದುದರ ಬಗ್ಗೆ ಲಾರ್ಡ್ ಪೌಲ್‌ರನ್ನು ಅಭಿನಂದಿಸಿದರು.
1996ರಲ್ಲಿ ವರಿಷ್ಠ ಪದವಿ ಮತ್ತು 1983ರಲ್ಲಿ ಭಾರತದ ರಾಷ್ಟ್ರಪತಿಗಳಿಂದ ಪದ್ಮಭೂಷಣ ಪ್ರಶಸ್ತಿಯನ್ನು ಲಾರ್ಡ್ ಪೌಲ್ ಪಡೆದಿದ್ದಾರೆ. 77ರ ಹರೆಯದ ಲಾರ್ಡ್ ಪೌಲ್ ಅತ್ಯಂತ ಪ್ರಸಿದ್ಧ ಭಾರತೀಯ ಮೂಲದ ಬ್ರಿಟನ್ ಬ್ಯುಸಿನೆಸ್ ಮ್ಯಾನ್‌ಗಳಲ್ಲಿ ಒಬ್ಬರಾಗಿದ್ದಾರೆ.
ಲಾರ್ಡ್ ಪೌಲ್, ಕಪರೊ ಎಂಬ ಅಂತಾರಾಷ್ಟ್ರೀಯ ಕಂಪೆನಿಯ ಸ್ಥಾಪಕರಾಗಿದ್ದು ಈ ಕಂಪೆನಿ 1.5 ಬಿಲಿಯನ್ ಪೌಂಡ್ಸ್‌ಗಳಷ್ಟು ವಾರ್ಷಿಕ ಆಯವ್ಯಯ ನಡೆಸುತ್ತಿದೆ.
ತಾವು ಇಂಗ್ಲೆಂಡ್ ಮತ್ತು ಭಾರತದ ನಡುವೆ ನಡೆದ ಚೆನ್ನೈ ಟೆಸ್ಟ್ ಪಂದ್ಯವನ್ನು ಆನಂದಿಸಿದ್ದಾಗಿ ಹೇಳಿದರು. ಸಚಿನ್ ತೆಂಡುಲ್ಕರ್‌ರ ಶತಕ ಮತ್ತು ಅವರು ಅದನ್ನು ಮುಂಬಯಿ ದಾಳಿ ಸಂತ್ರಸ್ತರಿಗೆ ಅರ್ಪಿಸಿದ್ದು ಹಾಗು ಭಾರತದ ವಿಜಯ ತಮ್ಮ ಖುಷಿಯನ್ನು ಇನ್ನಷ್ಟು ಹೆಚ್ಚಿಸಿತು ಎಂದು ಲಾರ್ಡ್ ಬೊಲಿಮೊರಿಯಾ ಹೇಳಿದ್ದಾರೆ.
ಭಾರತದ ಮೇಲೆ ಇತ್ತೀಚಿನ ಭಯೋತ್ಪಾದಕ ದಾಳಿಗಳು ಮತ್ತು ಇತರ ಸವಾಲು ಮತ್ತು ಕಠಿಣತೆಗಳ ಹೊರತಾಗಿಯೂ ಯಾರೊಬ್ಬರು ಭಾರತದ ಅಭಿವೃದ್ದಿಯ ವೇಗವನ್ನು ತಡೆಹಿಡಿಯಲಾಗದು ಎಂದು ಅವರು ಹೇಳಿದ್ದಾರೆ.
ಮುಂಬಯಿ ದಾಳಿಯ ನಂತರ ಭಾರತದ ನಿಯಂತ್ರಣದ ಬಗ್ಗೆ ಶ್ಲಾಘಿಸಿದ ಅವರು ಅವು ಕೇವಲ ಮುಂಬಯಿ ಮೇಲಿನ ದಾಳಿಯಲ್ಲ ಬದಲಾಗಿ ಅಮೆರಿಕ, ಇಸ್ರೇಲ್ ಮತ್ತು ಬ್ರಿಟನ್‌ಗಳ ಮೇಲಿನ ದಾಳಿ ಎಂದು ಹೇಳಿದ್ದಾರೆ. |