ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > 55 ಜಮಾತ್ ನಾಯಕರ ಬಂಧನ: ಪಾಕ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
55 ಜಮಾತ್ ನಾಯಕರ ಬಂಧನ: ಪಾಕ್
ವಿಶ್ವಸಂಸ್ಥೆಯಿಂದ ಭಯೋತ್ಪಾದನಾ ಸಂಘಟನೆ ಎಂದು ಘೋಷಿಸಲ್ಪಟ್ಟಿರುವ ಜಮಾತ್-ಉದ್-ದಾವಾದ ವಿರುದ್ಧದ ಕಾರ್ಯಾಚರಣೆಯಲ್ಲಿ ಅದರ 55 ನಾಯಕರನ್ನು ಬಂಧಿಸಿರುವುದಾಗಿ ಶುಕ್ರವಾರ ಪಾಕಿಸ್ತಾನ ತಿಳಿಸಿದೆ.

ಆದರೆ ಜಮಾತ್ ಸಂಘಟನೆ ಮುಂಬಯಿ ದಾಳಿಯಲ್ಲಿ ಪಾತ್ರ ವಹಿಸಿರುವ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳು ದೊರೆತಿಲ್ಲ ಎಂದೂ ಪಾಕ್ ಹೇಳಿದೆ. ಅಂತರಿಕ ಸಚಿವಾಲಯದ ವಕ್ತಾರರೊಬ್ಬರು ಮುಂಬಯಿ ದಾಳಿಯನ್ನು ಸಂಘಟಿಸಿದ ಎನ್ನಲಾದ ಲಷ್ಕರ್-ಎ-ತೊಯ್ಬಾದ ಹೊರಸಂಸ್ಥೆ ಜಮಾತ್-ಉದ್-ದಾವಾದ ಮೇಲಿನ ಕಾರ್ಯಾಚರಣೆ ಜಾರಿಯಲ್ಲಿದೆ, ಜಮಾತ್ ಮುಖಂಡ ಹಫೀಜ್ ಮೊಹಮ್ಮದ್ ಸೇರಿದಂತೆ 55 ಜಮಾತ್ ಮುಖಂಡರನ್ನು ಬಂಧಿಸವಲಾಗಿದೆ, 22 ನಾಯಕರನ್ನು ವಿದೇಶ ಯಾತ್ರೆ ಕೈಗೊಳ್ಳದಂತೆ ತಡೆಯಲಾಗಿದೆ ಎಂದು ತಿಳಿಸಿದ್ದಾರೆ.

ಬಂಧಿತರ ವಿಚಾರಣೆ ಜಾರಿಯಲ್ಲಿದೆ ಎಂದು ಡಾನ್ ನ್ಯೂಸ್ ಚಾನೆಲ್‌ಗೆ ತಿಳಿಸಿದ ವಕ್ತಾರರು ಮುಂಬಯಿ ದಾಳಿಯಲ್ಲಿ ಜಮಾತ್ ಕೈವಾಡದ ಬಗ್ಗೆ ಇದುವರೆಗೆ ಯಾವುದೇ ಸುಳಿವು ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ.

ವಕ್ತಾರರು ಹೇಳುವಂತೆ, ಭಾರತ ಜಮಾತ್ ವಿರುದ್ಧ ಯಾವುದೇ ಸಾಕ್ಷಾಧಾರವನ್ನೂ ನೀಡಿಲ್ಲ. ಪಾಕಿಸ್ತಾನಿ ಅಧಿಕಾರಿಗಳ ಬಳಿ ಜೈಷ್-ಎ-ಮೊಹಮ್ಮದ್ ಮುಖಂಡ ಮಸೂದ್ ಅಜರ್ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದೂ ಅವರು ಹೇಳಿದರು.

ಪಾಕಿಸ್ತಾನದ ವಿದೇಶಿ ಮಂತ್ರಿ ಶಾ ಮೊಹಮ್ಮದ್ ಖುರೇಷಿ, ಮಸೂದ್ ಅಜರ್‌ನನ್ನು ಬಂಧಿಸಲಾಗಿದೆ ಎಂದು ಬುಧವಾರ ಟಿವಿ ಚಾನೆಲ್ ಒಂದಕ್ಕೆ ತಿಳಿಸಿದ್ದರು ಆದರೆ ಎರಡು ಗಂಟೆಯೊಳಗೆ ತಮ್ಮ ಹೇಳಿಕೆ ಬದಲಿಸಿದ್ದರು.

ಸಯೀದ್ ಸಹಿತ ಬಂಧಿಸಲ್ಪಟ್ಟಿರುವ ಜಮಾತ್ ನಾಯಕರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಇಲ್ಲದೇ ಇರುವುದರಿಂದ ಅವರನ್ನು ಪಾಕಿಸ್ತಾನ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸುವುದು ಸಾಧ್ಯವಿಲ್ಲ. ಜಮಾತ್ ನಾಯಕರನ್ನು ಸಾರ್ವಜನಿಕ ಹಿತಾಸಕ್ತಿ ವಿಧೇಯಕದಡಿ ಬಂಧಿಸಲಾಗಿದೆ, ಇದರ ಅನುಸಾರ ಯಾವುದೇ ವ್ಯಕ್ತಿಯನ್ನು 90 ದಿನಗಳ ಕಾಲ ಬಂಧನದಲ್ಲಿಡಬಹುದು ಎಂದು ಪಾಕಿಸ್ತಾನದ ರಕ್ಷಣಾ ಮಂತ್ರಿ ಅಹಮದ್ ಮುಖ್ತರ್ ಖಾನ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜರ್ದಾರಿಗೆ ಸವಾಲ್: ಕಸಬ್ ಪಾಕಿಸ್ತಾನಿ, ಶರೀಫ್
ಬ್ರಿಟನ್ ಮೇಲ್ಮನೆ ಸಭಾಪತಿಯಾದ ಎನ್ಆರ್ಐ
ಪಾಕ್ 'ಹತೋಟಿ ತಪ್ಪಿದ ರಾಷ್ಟ್ರ': ಶರೀಫ್
ನೊಬೆಲ್ ಪ್ರಶಸ್ತಿ ಪ್ರತಿಷ್ಠೆಗೆ ಧಕ್ಕೆ ತಂದ ಲಂಚ ಹಗರಣ
ಬುಷ್‌ಗೆ ಬೂಟು ಎಸೆವ ಗೇಮ್ಸ್ ಜನಪ್ರಿಯ
ತಪ್ಪಾಯಿತು, ಕ್ಷಮಿಸಿ ಎಂದ ಜೈದಿ