ಪ್ರಸ್ತುತ ಪಾಕಿಸ್ತಾನಕ್ಕೆ ಅಮೆರಿಕದ ಹಣಕಾಸು ಸಹಾಯವನ್ನು ಸ್ಥಗಿತಗೊಳಿಸಲಾಗಿದ್ದರೂ, ಉಗ್ರವಾದವನ್ನು ದಮನಗೊಳಿಸುವಲ್ಲಿ ಸಹಾಯಕವಾಗುವಂತೆ ಪಾಕ್‌ಗೆ ಹೆಚ್ಚಿನ ಧನಸಹಾಯ ಒದಗಿಸುವ ಬಗ್ಗೆ ಯೋಚಿಸಲಾಗುತ್ತಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ತಿಳಿಸಿದೆ.
ಆದರೆ ಈ ವಿಚಾರ ಈಗಷ್ಟೇ ಮೊಳೆತಿದ್ದು, ಅಂತಿಮ ನಿರ್ಣಯಕ್ಕೆ ಬರಲಾಗಿಲ್ಲ ಎಂದು ರಕ್ಷಣಾ ದಳದ ಹಿರಿಯ ಅಧಿಕಾರಿ ಹೇಳಿದ್ದಾರೆ.
"ಪ್ರಸ್ತುತ ನಾವು ಜಂಟಿ ಸಹಾಯ ನಿಧಿಗಳು ಮತ್ತು ವಿದೇಶಿ ಮಿಲಿಟರಿ ಸಹಾಯ ಧನವನ್ನು ಪೂರೈಸುತ್ತಿದ್ದೇವೆ, ಉಗ್ರವಾದ ದಮಕ್ಕಾಗಿ ಪಾಕಿಸ್ತಾನಕ್ಕೆ ಹೆಚ್ಚುವರಿ ಮಿಲಿಟರಿ ಸಹಾಯಧನ ಪೂರೈಸಬೇಕೆಂಬ ಪ್ರಸ್ತಾವನೆಯು ಸೆಂಟ್‌ಕಾಮ್‌ನಿಂದ ಬಂದಿದೆ" ಎಂದು ರಕ್ಷಣಾ ಇಲಾಖೆಯ ವಕ್ತಾರ ಜಿಯೋಫ್ ಮೊರೇಲ್ ಹೇಳಿದ್ದಾರೆ.
"ಆದರೆ ನನ್ನ ಪ್ರಕಾರ ಇದು ಕೇವಲ ಪ್ರಸ್ತಾವನೆ ಹಂತದಲ್ಲೇ ಇದೆ ಮತ್ತು ರಕ್ಷಣಾ ಕಾರ್ಯದರ್ಶಿ ಬಳಿ ತಲುಪಿಲ್ಲ ಮತ್ತು ಅಮೆರಿಕದ ಶಾಸನಸಭೆಯಲ್ಲಿ ಪ್ರಸ್ತಾಪಿಸಲ್ಪಟ್ಟಿಲ್ಲ. ಆದ್ದರಿಂದ ಈ ವಿಷಯವಿನ್ನೂ ಆರಂಭಿಕ ಹಂತದಲ್ಲಿದೆ" ಎಂದು ಅವರು ಹೇಳಿದ್ದಾರೆ. |