ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಐಎಸ್ಐನಿಂದ ಅಮೆರಿಕ, ನ್ಯಾಟೋ ಪಡೆಗಳ ಹತ್ಯೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಐಎಸ್ಐನಿಂದ ಅಮೆರಿಕ, ನ್ಯಾಟೋ ಪಡೆಗಳ ಹತ್ಯೆ
ಇಸ್ಲಾಮಾಬಾದ್: ಐಎಸ್‍‌‍ಐ ತಾಲಿಬಾನ್‌ ಅನ್ನು ಬೆಂಬಲಿಸುವ ಸಂಘಟನೆಗಳೊಂದಿಗೆ ಸೇರಿಕೊಂಡು ಮತ್ತು ಅಮೆರಿಕ, ನ್ಯಾಟೋ ಮತ್ತು ಅಫ್ಘನ್ ಪಡೆಗಳನ್ನು ಹತ್ಯೆ ಮಾಡುತ್ತಿದೆ ಎಂದು ಅಮೆರಿಕದ ಚಿಂತಕರ ಚಿಲುಮೆಯ ವರದಿಯೊಂದು ಹೇಳಿದೆ.

ಐಎಸ್ಐ ಬೆಂಬಲಿತ ಸಂಘಟನೆ ಅಫ್ಘನ್ ಪ್ರಧಾನಿ ಹಮೀದ್ ಕರ್ಜಾಯಿ ಅವರ ಹತ್ಯೆಯ ಸಂಚು ರೂಪಿಸಿತ್ತು ಎಂಬ ಅಫ್ಘನ್ ಸರಕಾರದ ಅಪಾದನೆ ಮತ್ತು ಕಾಬೂಲ್‌ನಲ್ಲಿ ಭಾರತೀಯ ರಾಯಭಾರಿ ಕಚೇರಿ ಮೇಲಿನ ಬಾಂಬ್ ದಾಳಿಯಲ್ಲಿ ಐಎಸ್ಐ ಕೈವಾಡವಿದೆಯೆಂಬ ಅರೋಪಗಳನ್ನು ವರದಿಯಲ್ಲಿ ಉದಾಹರಿಸಲಾಗಿದೆ.

ಈ ಎಲ್ಲಾ ಅಂಶಗಳು, ಅಫ್ಘಾನಿಸ್ತಾನದಲ್ಲಿ ಸಂಯುಕ್ತ ಸರ್ಕಾರವನ್ನು ಹಿಂದಿಕ್ಕಲು ಭಯೋತ್ಪಾದಕ ಸಂಘಟನೆಗಳನ್ನು ಬಳಸಿಕೊಂಡು ತನ್ನ ಪ್ರಭಾವವನ್ನು ವೃದ್ಧಿಸಿಕೊಳ್ಳಲು ಐಎಸ್ಐ ಪ್ರಯತ್ನಿಸುತ್ತಿದೆ ಎಂಬುದನ್ನು ಸೂಚಿಸುತ್ತದೆ ಎಂದು ಡೈಲಿ ಟೈಮ್ ವರದಿ ಮಾಡಿದೆ.

ಅಮೆರಿಕ ಮತ್ತು ಪಾಕಿಸ್ತಾನಗಳ ನಡುವೆ ಹಲವಾರು ಸಾಮಾನ್ಯ ಹಿತಾಸಕ್ತಿಗಳಿವೆ, ಇದು ಈ ರಾಷ್ಟ್ರಗಳ ನಡುವೆ ದೀರ್ಘಕಾಲಿಕ ಮತ್ತು ಲಾಭದಾಯಕ ಸಹಯೋಗಕ್ಕೆ ಆಧಾರವಾಗಬಲ್ಲದು ಆದರೆ ಉಗ್ರವಾದ ದಮನಕ್ಕೆ ಸಂಬಂಧಿಸಿದಂತೆ ಈ ರಾಷ್ಟ್ರಗಳ ನಡುವೆ ಇರುವ ಮೂಲ ಭಿನ್ನಭಿಪ್ರಾಯಗಳು, ಸಾಮಾನ್ಯ ಹಿತಾಸಕ್ತಿಗಳು ಕಡೆಗಣಿಸಲ್ಪಡುವಂತೆ ಮಾಡಬಲ್ಲದು ಮತ್ತು ಪ್ರತಿಕೂಲ ಸಂಬಂಧಕ್ಕೆ ಕಾರಣವಾಗಬಹುದು ಎಂದು ವರದಿಯಲ್ಲಿ ಬರೆಯಲಾಗಿದೆ.

ಇಂತಹ ಪರಿಸ್ಥಿತಿಯನ್ನು ತಡೆಯಲು, ಅಲ್-ಕೈದಾ ಮತ್ತು ತಾಲಿಬಾನ್ ಹಾಗು ಇತರ ಭಯೋತ್ಪಾದಕ ಸಂಘಟನೆಗಳ ಸುರಕ್ಷಿತ ತಾಣಗಳನ್ನು ನಾಶಗೊಳಿಸುವ ಸ್ಪಷ್ಟ ನಿರ್ಧಾರವನ್ನು ಪಾಕಿಸ್ತಾನ ಕೈಗೊಳ್ಳಬೇಕು ಎಂದು ವರದಿ ಸಲಹಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎಲ್‌ಟಿಟಿಇ ಹಡಗನ್ನು ನಾಶಪಡಿಸಿದ ಲಂಕಾ ಸೇನೆ
ಅಮೆರಿಕದಿಂದ ಪಾಕ್‌ಗೆ ಹೆಚ್ಚಿನ ಧನಸಹಾಯ
55 ಜಮಾತ್ ನಾಯಕರ ಬಂಧನ: ಪಾಕ್
ಜರ್ದಾರಿಗೆ ಸವಾಲ್: ಕಸಬ್ ಪಾಕಿಸ್ತಾನಿ, ಶರೀಫ್
ಬ್ರಿಟನ್ ಮೇಲ್ಮನೆ ಸಭಾಪತಿಯಾದ ಎನ್ಆರ್ಐ
ಪಾಕ್ 'ಹತೋಟಿ ತಪ್ಪಿದ ರಾಷ್ಟ್ರ': ಶರೀಫ್