ಮುಂಬಯಿ ದಾಳಿಕೋರರು ಜಾಗತಿಕ ಜಿಹಾದ್‌ನ ಸದಸ್ಯರು ಮತ್ತು ಪಾಕಿಸ್ತಾನ ಸಂಜಾತರು ಎಂದು ಪಾಕಿಸ್ತಾನದ ಹಿರಿಯ ಪತ್ರಕರ್ತ ಅಹಮ್ಮದ್ ರಶೀದ್ ಹೇಳಿದ್ದಾರೆ.
ಪಾಕಿಸ್ತಾನದಲ್ಲಿನ ಪರಿಸ್ಥಿತಿ ಕ್ಷಣಕ್ಷಣಕ್ಕೂ ಬದಲಾಗುತ್ತಿದೆ ಮತ್ತು ಪಾಕಿಸ್ತಾನದಲ್ಲಿ ಮಿಲಿಟರಿ ಪಾರಮ್ಯ ಗಳಿಸದಂತೆ, ಪ್ರಜಾಪ್ರಭುತ್ವ ಸರಾಕರವನ್ನು ಭದ್ರಗೊಳಿಸಲು ಭಾರತ ಸಹಾಯ ನೀಡಬೇಕೆಂದು ರಶೀದ್ ಹೇಳಿದ್ದಾರೆ.
ಮುಂಬಯಿ ಮೇಲಿ 26/11 ದಾಳಿಯಲ್ಲಿ ಪಾಕಿಸ್ತಾನದಲ್ಲಿ ನೆಲೆಗೊಂಡಿರುವ ಲಷ್ಕರ್-ಎ-ತೊಯ್ಬಾ ಮತ್ತು ಇತರ ಭಯೋತ್ಪಾದಕ ಸಂಘಟನೆಗಳ ಕೈವಾಡದ ಸುಳಿವು ದೊರಕಿರುವುದರಿಂದ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ ಮತ್ತು ಶಾಂತಿ ಮಾತುಕತೆ ಪೂರ್ಣವಾಗಿ ಸ್ಥಗಿತಗೊಂಡಿದೆ. |