ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ದೇಶ ತಪ್ಪು ದಿಕ್ಕಿನಲ್ಲಿ ಸಾಗುತ್ತಿದೆ: ಪಾಕಿಸ್ತಾನೀಯರ ಅಭಿಮತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೇಶ ತಪ್ಪು ದಿಕ್ಕಿನಲ್ಲಿ ಸಾಗುತ್ತಿದೆ: ಪಾಕಿಸ್ತಾನೀಯರ ಅಭಿಮತ
ಪಾಕಿಸ್ತಾನವು ತಪ್ಪು ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದಾಗಿ ಭಾವಿಸಿರುವ ಹೆಚ್ಚಿನ ಪಾಕಿಸ್ತಾನೀಯರು, ಆಸಿಫ್ ಅಲಿ ಜರ್ದಾರಿಗಿಂತಲೂ ಪಿಎಂಎಲ್-ಎನ್ ಮುಖ್ಯಸ್ಥ, ಮಾಜಿ ಪ್ರಧಾನಿ ನವಾಜ್ ಶರೀಫ್ ಅವರು ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಸೂಕ್ತ ಎಂದು ಶೇ.60 ಮಂದಿ ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕದ ಇಂಟರ್ನ್ಯಾಶನಲ್ ರಿಪಬ್ಲಿಕನ್ ಇನ್‌ಸ್ಟಿಟ್ಯೂಟ್ ನಡೆಸಿರುವ ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ.88ರಷ್ಟು ಮಂದಿ, ಪಾಕಿಸ್ತಾನವು ತಪ್ಪು ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದರೆ, ಕಳೆದ ಒಂದು ವರ್ಷದಲ್ಲಿ ದೇಶದ ಆರ್ಥಿಕ ಸ್ಥಿತಿ ರಸಾತಳಕ್ಕೆ ಇಳಿಯುತ್ತಿದೆ ಎಂದು ಶೇ.73 ಮಂದಿ ಭಾವಿಸಿದ್ದಾರೆ.

ಪ್ರಮುಖ ವಿಷಯಗಳಲ್ಲಿ ಪಿಪಿಪಿ ನೇತೃತ್ವದ ಸರಕಾರದ ನಿರ್ವಹಣೆ ತೀರಾ ಕಳಪೆ ಎಂದು ಭಾವಿಸಿದವರು ಶೇ.76 ಮಂದಿ. ಈ ಸಮೀಕ್ಷೆಯನ್ನು ಜೂನ್ ತಿಂಗಳಲ್ಲಿ ನಡೆಸಲಾಗಿತ್ತು.

ಇದೀಗ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರಕಾರ ಮತ್ತು ರಾಷ್ಟ್ರಾಧ್ಯಕ್ಷ ಅಧಿಕಾರಕ್ಕೇರಿರುವುದರಿಂದ ಪರಿಸ್ಥಿತಿ ಸುಧಾರಣೆಯಾಗುತ್ತದೆಯೇ ಎಂದು ಕೇಳಲಾದ ಪ್ರಶ್ನೆಗೆ ಶೇ.67ರಷ್ಟು ಮಂದಿ ಋಣಾತ್ಮಕ ಉತ್ತರ ನೀಡಿದ್ದಾರೆ.

ಶರೀಫ್ ಅವರು ರಾಷ್ಟ್ರಾಧ್ಯಕ್ಷರಾಗುವುದಕ್ಕೆ ಶೇ.59 ಮಂದಿ ಬೆಂಬಲ ಸೂಚಿಸಿದ್ದರೆ, ಜರ್ದಾರಿಯನ್ನು ಈ ಪದವಿಗೆ ಬೆಂಬಲಿಸುವವರು ಶೇ.19 ಜನರು ಮಾತ್ರ. ಜರ್ದಾರಿ ನಿರ್ವಹಣೆಯನ್ನು ವಿರೋಧಿಸಿದವರು ಶೇ. 63 ಮಂದಿಯಾದರೆ, ಅವರಿಗೆ ಬೆಂಬಲ ಸೂಚಿಸುವವರ ಸಂಖ್ಯೆ ಶೇ.19 ಮಾತ್ರ.

ದೇಶವನ್ನು ಬಾಧಿಸುತ್ತಿರುವ ಸಮಸ್ಯೆಯನ್ನು ಯಾವ ನೇತಾರ ಅತ್ಯುತ್ತಮವಾಗಿ ನಿಭಾಯಿಸಬಲ್ಲ ಎಂಬ ಪ್ರಶ್ನೆಗೆ, ಶೇ.31 ಮಂದಿ ಬೆಂಬಲಿಸಿದ್ದು ಶರೀಫ್ ಅವರನ್ನು. ಜರ್ಜಾರಿಗೆ ದೊರೆತ ಬೆಂಬಲ ಶೇ. 8 ಆದರೆ, ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್‌ಗೆ ಸಿಕ್ಕಿದ್ದು ಶೇ.3 ಬೆಂಬಲ ಮಾತ್ರ.

ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಶೇ.64 ಮಂದಿ, ಹತ್ಯೆಗೀಡಾದ ಮಾಜಿ ಪ್ರಧಾನಿ ಬೇನಜೀರ್ ಭುಟ್ಟೋ ಅವರ ನಾಯಕತ್ವವನ್ನು ಇಷ್ಟಪಟ್ಟಿರುವುದಾಗಿ ಹೇಳಿದರೆ, ಶೇ.60 ಮಂದಿ ಶರೀಫ್ ಅವರಿಗೆ ಬೆಂಬಲಿಸಿದ್ದಾರೆ. ಆದರೆ ಜರ್ದಾರಿಯನ್ನು ಇಷ್ಟಪಡದವರ ಸಂಖ್ಯೆ ಶೇ.65.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಂತುಲೆಗೆ ಪಾಕ್‌ನಿಂದ ಹರಿದು ಬರುತ್ತಿರುವ ಬೆಂಬಲ
ಪಾಕ್ ಕೋರ್ಟ್‌ನಲ್ಲಿ ಜಿಯೊ ಟಿವಿ ಮೇಲೆ ದೂರು
ಮುಂಬಯಿ ದಾಳಿ ಜಾಗತಿಕ ಜಿಹಾದ್ ಅಂಗ: ಪಾಕ್ ಪತ್ರಕರ್ತ
ಐಎಸ್ಐನಿಂದ ಅಮೆರಿಕ, ನ್ಯಾಟೋ ಪಡೆಗಳ ಹತ್ಯೆ
ಎಲ್‌ಟಿಟಿಇ ಹಡಗನ್ನು ನಾಶಪಡಿಸಿದ ಲಂಕಾ ಸೇನೆ
ಅಮೆರಿಕದಿಂದ ಪಾಕ್‌ಗೆ ಹೆಚ್ಚಿನ ಧನಸಹಾಯ