ಲಂಡನ್: ಬ್ರಿಟನ್ ಚಲನಚಿತ್ರೋದ್ಯಮದ ಪ್ರಮುಖ ವ್ಯಕ್ತಿ ಮತ್ತು ಆಸ್ಕರ್ ಪ್ರಶಸ್ತಿ ವಿಜೇತ ಚಲನಚಿತ್ರ "ಗಾಂಧಿ"ಯ ನಿರ್ದೇಶಕ ಲಾರ್ಡ್ ರಿಚರ್ಡ್ ಅಟೆನ್‌ಬರೊ ಅವರು ತಮ್ಮ ನಿವಾಸದಲ್ಲಿ ಕುಸಿದುಬಿದ್ದಿದ್ದರಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ.
85 ವರ್ಷ ವಯಸ್ಸಿನ ಅಟೆನ್‌ಬರೊ ಸರ್ರೆಯ ನಿವಾಸದಲ್ಲಿ ಕಳೆದ ವಾರ ಕುಸಿದುಬಿದ್ದು ಕೋಮಾ ಸ್ಥಿತಿಗೆ ತಲುಪಿದ್ದರು. ಅವರನ್ನು ಸೇಂಟ್ ಜಾರ್ಜ್ ಆಸ್ಪತ್ರೆಗೆ ಸೇರಿಸಲಾಗಿದ್ದು, ಪ್ರಜ್ಞೆ ಮರಳಿದೆಯೆಂದು ವರದಿಯಾಗಿದೆ.ಡಿಕಿ ಎಂದೇ ಪ್ರೀತಿಯಿಂದ ಕರೆಯಲಾಗುವ ಹಿರಿಯ ನಿರ್ದೇಶಕ ಅಟೆನ್‌ಬರೊ ವನ್ಯಜೀವಿ ತಜ್ಞ ಸರ್ ಡೇವಿಡ್ ಅಟೆನ್‌ಬರೋ ಅವರ ಅಣ್ಣನಾಗಿದ್ದಾರೆ.
1982ರಲ್ಲಿ ಪಾರ್ಶ್ವವಾಯುಪೀಡಿತರಾಗಿ ಮೃತಪಟ್ಟ ಆಸ್ಕರ್ ಪ್ರಶಸ್ತಿ ವಿಜೇತೆ ಡೇಮ್ ಸಿಲಿಯ ಜಾನ್ಸನ್ ಅವರ ಸ್ಮರಣಾರ್ಥ ಸಮಾರಂಭದಲ್ಲಿ ನಿರ್ದೇಶಕರು ಭಾಗವಹಿಸಬೇಕಾಗಿತ್ತು. ಗಾಂಧಿ ಚಿತ್ರವಲ್ಲದೇ ಶಾಡೊಲ್ಯಾಂಡ್, ಚಾಪ್ಲಿನ್ ಮತ್ತು ಓ,ವಾಟ್ ಎ ಲವ್ಲಿ ವಾರ್ ಮುಂತಾದ ಸುಪ್ರಸಿದ್ಧ ಚಿತ್ರಗಳನ್ನು ಕೂಡ ಅವರು ನಿರ್ದೇಶಿಸಿದ್ದಾರೆ. |