ಉತ್ತರ ಮಸುಲ್‌ನ ಕಾರ್ಯನಿರತನಾಗಿದ್ದ ಇರಾಕಿ ಸೈನ್ಯಾಧಿಕಾರಿಯನ್ನು ಹತ್ಯೆಗೈಯಲು ಆತ್ಮಹುತಿ ಬಾಂಬ್ ದಾಳಿಕೋರ 'ಸಾವಿನಪ್ಪುಗೆ' ನೀಡಿದ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ದೊಡ್ಡ ನಗುವಿನೊಂದಿಗೆ ಅಧಿಕಾರಿಯನ್ನು ಸಮೀಪಿಸಿದ ಬಾಂಬರ್, ಗೆಳೆಯನಂತೆ ಅಪ್ಪಿದ, ನಂತರ ತನ್ನನ್ನು ತಾನು ಸ್ಪೋಟಿಸಿದ ಎಂದು ಪೊಲೀಸ್ ಅಧಿಕಾರಿ ಹಮೀದ್ ಅಲ್ ಜುಬುರಿ ತಿಳಿಸಿದ್ದಾರೆ.
ಸ್ಪೋಟದಿಂದಾಗಿ ಇತರ ಇಬ್ಬರು ಸೈನಿಕರು ಮತ್ತು ಇಬ್ಬರು ಸಾರ್ವಜನಿಕರು ಗಾಯಗೊಂಡಿದ್ದಾರೆ ಎಂದು ಮಿಲಿಟರಿ ಅಧಿಕಾರಿ ಕರ್ನಲ್ ಅಹಮದ್ ಸಯೀದ್ ಹೇಳಿದ್ದಾರೆ.
ಇರಾಕ್‌ನ ಮೂರನೇ ಅತಿದೊಡ್ಡ ನಗರವಾಗಿರುವ ಮಸುಲ್, ಅಮೆರಿಕ ಮಿಲಟರಿ ಪ್ರಕಾರ ಇರಾಕ್‌ನಲ್ಲಿ ಅಲ್‌ಕೈದಾ ಹಿಡಿತವಿರುವ ಕೊನೆಯ ನಗರ. ಸದ್ದಾಂ ಹುಸೇನ್ ಅಧಿಕಾರ ಅಂತ್ಯಗೊಳಿಸಲು ಅಮೆರಿಕಾ ಇರಾಕ್ ಮೇಲೆ ದಾಳಿ ನಡೆಸಿದ 2003ರಿಂದ ನೂರಾರು ಬಾಂಬ್ ದಾಳಿಗಳನ್ನು ಅಲ್‌ಕೈದಾ ನಡೆಸಿದೆ. |