ವಿಶ್ವಪ್ರಸಿದ್ಧ ಪಾಪ್ ಸ್ಟಾರ್ ಮೈಕಲ್ ಜಾಕ್ಸನ್ ಅಪರೂಪದ ನಾಲಗೆಯ ಕಾಯಿಲೆಗೆ ತುತ್ತಾಗಿದ್ದು ಸಾವಿನ ಸಮೀಪ ತಲುಪಿದ್ದಾರೆ ಎಂದು ಬ್ರಿಟನ್‌ನ ಸಂಡೆ ಎಕ್ಸ್‌ಪ್ರೆಸ್ ಪತ್ರಿಕೆ ವರದಿ ಮಾಡಿದೆ.
ಪಾಪ್ ಸ್ಟಾರ್‌ರ ಆತ್ಮಚರಿತ್ರೆಯನ್ನು ಬರಹಕ್ಕಿಳಿಸುತ್ತಿರುವ ಇಯಾನ್ ಹಾಲ್‌ಪೆರಿನ್ ಅವರು ಈ ವಿಷಯವನ್ನು ತಿಳಿಸಿರುವುದಾಗಿ ಪತ್ರಿಕೆ ವರದಿ ಮಾಡಿದೆ. ಜಾಕ್ಸನ್‌ರಿಗೆ ಕೂಡಲೆ ಟ್ರಾನ್ಸ್‌ಪ್ಲಾಂಟೇಶನ್ ಶಸ್ತ್ರಕ್ರಿಯೆಯ ಅಗತ್ಯವಿದೆ ಆದರೆ ಅವರು ಬಹಳ ನಿತ್ರಾಣರಾಗಿರುವುದರಿಂದ ಸಾವಿನೊಂದಿಗೆ ಹೋರಾಡುತ್ತಿದ್ದಾರೆ ಎಂದು ಹೇಳಲಾಗಿದೆ.
50ರ ಹರೆಯದ ಜಾಕ್ಸ್‌ನ್‌ರ ಚಿಕಿತ್ಸೆ ಪ್ರಗತಿಯಲ್ಲಿದೆ ಮತ್ತು ಅವರ ಸ್ಥಿತಿ ಎಷ್ಟೊಂದು ಗಂಭೀರವಾಗಿದೆ ಎಂದರೆ ಅವರು ಮಾತನಾಡಲು ಕಷ್ಟಪಡುತ್ತಿದ್ದಾರೆ ಮತ್ತು ಅವರ ಬಲಗಣ್ಣು ಶೇ95ರಷ್ಟು ದೃಷ್ಟಿಯನ್ನು ಕಳೆದುಕೊಂಡಿದೆ ಎಂದು ಹಾಲ್‌ಪೆರಿನ್ ತಿಳಿಸಿದ್ದಾರೆ.
ಜಾಕ್ಸನ್‌ರ ಅಧಿಕೃತ ವಕ್ತಾರ ಹಾಲ್‌ಪೆರಿನ್‌ರ ಮಾತುಗಳನ್ನು ದೃಢಪಡಿಸಲ್ಲವಾದರೂ, ಅವರ ಸಹೋದರ ಜರ್ಮನೆ, "ಅವರ ಅರೋಗ್ಯ ಸ್ಥಿತಿ ಅಷ್ಟೇನು ಉತ್ತಮವಾಗಿಲ್ಲ. ಇದು ಉತ್ತಮ ಕಾಲವಲ್ಲ" ಎಂದು ಪ್ರತಿಕ್ರಿಯಿಸಿರುವ ಮೂಲಕ ಸುದ್ದಿಯನ್ನು ದೃಢಪಡಿಸಿರುವಂತೆ ಕಂಡುಬರುತ್ತಿದೆ. |