ಭೂಗತ ದೊರೆ ದಾವೂದ್ ಇಬ್ರಾಹಿಂ ಅನ್ನು ಹಸ್ತಾಂತರಿಸಲು ಭಾರತ ಸರಕಾರ ಪಾಕಿಸ್ತಾನವನ್ನು ಒತ್ತಾಯಿಸುತ್ತಿರುವಂತಯೇ, ಡಿಸೆಂಬರ್ 26ರಂದು ತನ್ನ 53ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ದಾವೂದ್ ರಹಸ್ಯ ತಾಣದಲ್ಲಿ ಬಹುಶಃ ಪಾಕ್‌ನ ಹೊರಗೆ ರಹಸ್ಯ ಔತಣಕೂಟವನ್ನು ನಡೆಸಲಿದ್ದಾನೆ.
ಭೂಗತ ಜಗತ್ತಿನ ಮೂಲಗಳ ಪ್ರಕಾರ, ಈ ವರ್ಷದ ಅದ್ಧೂರಿ ಔತಣಕೂಟಕ್ಕೆ ದಾವೂದ್‌ನ ಹಣಕಾಸು ವಿಚಾರಗಳನ್ನು ನೋಡಿಕೊಳ್ಳುತ್ತಿರುವ ಖ್ಯಾತ ಅಂತಾರಾಷ್ಟ್ರೀಯ ಸಶ್ತ್ರಾಸ್ತೃ ಡೀಲರ್ ಮುಖ್ಯ ಅತಿಥಿಯಾಗಿರುತ್ತಾನೆ. ಭಾರತೀಯ ರಾಜಕಾರಣಿಯೋರ್ವ ಅಂತಾರಾಷ್ಟ್ರೀಯ ಬ್ಯುಸಿನೆಸ್ ಡೀಲ್‌ನಲ್ಲಿ ಕೋಟ್ಯಂತರ ರೂಪಾಯಿಗಳ ಕೊರತೆ ಅನುಭವಿಸಿದಾಗ ಆತ ದಾವೂದ್ ಸಹಾಯ ಬೇಡಿದ, ದಾವೂದ್ ಈ ಸಶ್ತ್ರಾಸ್ತೃ ಡೀಲರ್ ಮೂಲಕ ಹಣಕಾಸನ್ನು ರವಾನೆ ಮಾಡಿದ್ದ ಎಂದು ಮೂಲವೊಂದು ತಿಳಿಸಿರುವುದಾಗಿ ಟೈಮ್ಸ್ ಅಫ್ ಇಂಡಿಯಾ ಶನಿವಾರ ವರದಿ ಮಾಡಿದೆ. ಪಾಕಿಸ್ತಾನ ಸರಕಾರ ನೀಡಿರುವ ಆನೇಕ ಪಾಸ್‌ಪೊರ್ಟ್‌ಗಳನ್ನು ಹೊಂದಿರುವ ದಾವೂದ್, ರಾಜಕಾರಣಿ ಮತ್ತು ಸಶ್ತ್ರಾಸ್ತೃ ಡೀಲರ್ ಕಳೆದ ವರ್ಷ ಜಿನೇವಾದಲ್ಲಿ ಕೈಗೊಳ್ಳಲಾದ ರಹಸ್ಯ ಸಭೆಯಲ್ಲಿ ಭೇಟಿಯಾಗಿ ಹಣಕಾಸು ವಿನಿಮಯದ ಕುರಿತು ತೀರ್ಮಾನ ಕೈಗೊಂಡರು. "ಕೇಂದ್ರದ ಬಳಿ ಈ ಸಭೆಯ ವರದಿ ಇದೆ ಆದರೆ ಅವರು ಕ್ರಮ ಕೈಗೊಳ್ಳುತ್ತಿಲ್ಲ" ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸಾಮಾನ್ಯವಾಗಿ, ಉನ್ನತ ಐಎಸ್ಐ ಅಧಿಕಾರಿಗಳು ಪಾಲ್ಗೊಳ್ಳುವ ದಾವೂದ್ ಹುಟ್ಟುಹಬ್ಬದ ಪ್ರಯುಕ್ತ ಕರಾಚಿಯಲ್ಲಿ ನಡೆವ ಅದ್ಧೂರಿ ಔತಣಕೂಟಕ್ಕೆ ಬಿಲ್ಡರ್‌ಗಳು ಸೇರಿದಂತೆ ಭಾರತೀಯ ಬ್ಯುಸಿನೆಸ್ ಮ್ಯಾನ್‌ಗಳ ಒಂದು ಪಂಗಡಕ್ಕೆ ಅಮಂತ್ರಣವಿರುತ್ತದೆ. ಭಾರತೀಯ ಬ್ಯುಸಿನೆಸ್ ಮ್ಯಾನ್‌ಗಳು ದುಬೈಗೆ ತಲುಪುತ್ತಾರೆ ಅಲ್ಲಿಂದ ಕರಾಚಿಗೆ ಹೋಗುವ 'ಏರ್ಪಾಡು' ಮಾಡಲಾಗುತ್ತದೆ. ಅದನೇ ಇದ್ದರೂ, ಈ ಬಾರಿ ಮುಂಬಯಿ ದಾಳಿಯ ನಂತರ ಅದರಲ್ಲಿ ದಾವೂದ್ ಪಾತ್ರ ವಹಿಸಿದ್ದಾನೆ ಎಂಬ ಅರೋಪದಿಂದಾಗಿ ಎಲ್ಲಾ ಕಣ್ಣುಗಳು ದಾವೂದ್ ಮೇಲೆ ನೆಟ್ಟಿರುವುದರಿಂದ ದಾವೂದ್ ತನ್ನ ಹುಟ್ಟುಹಬ್ಬದ ಔತಣಕೂಟವನ್ನು ರಹಸ್ಯ ತಾಣಕ್ಕೆ ಸ್ಥಳಾಂತರಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ. ಐಎಸ್ಐ ಬೆಂಬಲವಿರುವ ದಾವೂದ್ ಗ್ಯಾಂಗ್‌ನಿಂದ ಮುಂಬಯಿ ದಾಳಿಗೆ ಹಣಕಾಸು ಪೂರೈಕೆಯಾಗಿದೆ ಎಂಬ ಬಗ್ಗೆ ಸಾಕಷ್ಟು ಪುರಾವೆಗಳಿವೆ ಎಂದು ಲಂಡನ್‌ನ ಮೂಲಗಳು ತಿಳಿಸಿದ್ದವು.
ದಾವೂದ್‌ನ ವ್ಯವಹಾರ ಪಾಲುದಾರರೆಂದು ಗುರುತಿಸಲಾಗಿರುವ ಗುಟ್ಕಾ ಬರೋನ್ ಮತ್ತು ಟಾಪ್ ಬಿಲ್ಡರ್‌ಗಳೂ ಸೇರಿದಂತೆ ಮುಂಬಯಿ ವ್ಯವಹಾರಸ್ಥರು ಹುಟ್ಟುಹಬ್ಬ ಔತಣಕೂಟಕ್ಕೆ ಸಾಗುವ 'ಅಡ್ಡದಾರಿ' ದುಬೈಗೆ ಹೋಗಿತ್ತಿದ್ದಾರೆಯೇ ಎಂದು ಕಂಡುಹಿಡಿಯಲು ಅವರ ಚಟುವಟಿಕೆಗಳ ಮೇಲೆ ಭಾರತದ ಗುಪ್ತಚರ ಸಂಸ್ಥೆಗಳು ತೀವ್ರ ನಿಗಾ ಇರಿಸಿವೆ. "ಅದೇನೆ ಇದ್ದರೂ, ನಾವು ಎಷ್ಟೇ ಮಾಹಿತಿ ಕಲೆ ಹಾಕಿದರೂ ಭಾರತ ಸರಕಾರ ಮುಂಬಯಿಯಲ್ಲಿರುವ ದಾವೂದ್‌ನ ಆರ್ಥಿಕ ಸಾಮ್ರಾಜ್ಯವನ್ನು ನಾಶಪಡಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವಾದ್ದರಿಂದ ಈ ಎಲ್ಲಾ ಪ್ರಯತ್ನಗಳಿಂದ ಪ್ರಯೋಜನವೇನಿಲ್ಲ" ಎಂದು ರಕ್ಷಣಾ ಅಧಿಕಾರಿ ನಿರಾಶೆ ವ್ಯಕ್ತಪಡಿಸಿದ್ದಾರೆ. |