ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > 'ವಿಶ್ವದ 50 ಪ್ರಭಾವಿಗಳಲ್ಲಿ ಸೋನಿಯಾ, ಶಾರುಖ್'
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ವಿಶ್ವದ 50 ಪ್ರಭಾವಿಗಳಲ್ಲಿ ಸೋನಿಯಾ, ಶಾರುಖ್'
PTI
ಅಮೆರಿಕದ ಪ್ರಸಿದ್ಧ ಪತ್ರಿಕೆ 'ನ್ಯೂಸ್‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌ವೀಕ್‌'ನ ವಿಶ್ವದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ 50 ಜನರ ಪಟ್ಟಿಯಲ್ಲಿ ಬರಾಕ್ ಒಬಾಮ ಮೊದಲಿಗರಾಗಿದ್ದು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಸೇರಿದ್ದಾರೆ.

ಪಾಕಿಸ್ತಾನದ ಮಿಲಿಟರಿ ಮುಖ್ಯಸ್ಥ ಪರವೇಜ್ ಕಯಾನಿ ಪತ್ರಿಕೆ ಹೆಸರಿಸಿರುವ ಪ್ರಬಲರ ಪಟ್ಟಿಯಲ್ಲಿ 20 ಸ್ಥಾನದಲ್ಲಿದ್ದಾರೆ. ಕಯಾನಿ ಪಾಕಿಸ್ತಾನದ ಅಣು ಶಸ್ತ್ರಾಸ್ತೃಗಳ ಉಸ್ತುವಾರಿಯನ್ನೂ ನೋಡಿಕೊಳ್ಳುತ್ತಿದ್ದಾರೆ.

ವೈಟ್ ಹೌಸ್‌ಗೆ ಕಾಲಿರಿಸಿ ಇತಿಹಾಸ ರಚಿಸಿದ ಪ್ರಥಮ ಆಫ್ರಿಕಾ-ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದರೆ, ಅವರ ಹಿಂದೆ ಚೀನಾ ಅಧ್ಯಕ್ಷ ಹು ಜಿನಟಾವೊ, ಫ್ರಾನ್ಸ್ ಅಧ್ಯಕ್ಷ ನಿಕೋಲಸ್ ಸರ್ಕೊಜಿ, ಬ್ರಿಟನ್ ಪ್ರಧಾನಿ ಜಾರ್ಡನ್ ಬ್ರೌನ್, ಜರ್ಮನ್ ವಿತ್ತ ಮಂತ್ರಿ ಏಂಜೆಲಾ ಮಾರ್ಕೆಲ್ ಮತ್ತು ರಷ್ಯನ್ ಪ್ರಧಾನಿ ವ್ಲಾಡಿಮಿರ್ ಪುಟಿನ್ ಸೇರಿದ್ದಾರೆ.

ಈ ಪ್ರಬಲರ ಪಟ್ಟಿಯಲ್ಲಿ ಅಚ್ಚರಿಯ ಸೇರ್ಪಡೆ ಒಸಾಮ ಬಿನ್ ಲಾಡೆನ್. ಈತನನ್ನು 'ಅಂತಾರಾಷ್ಟ್ರೀಯ ಭಯೋತ್ಪಾದಕ' (ಗ್ಲೋಬಲ್ ಟೆರರಿಸ್ಟ್) ಎಂದು ನ್ಯೂಸ್‌ವೀಕ್ ಸಂಭೋದಿಸಿದೆ.

ಸೋನಿಯಾ ಗಾಂಧಿ ಅವರನ್ನು 17 ಸ್ಥಾನದಲ್ಲಿಟ್ಟಿರುವ ಮ್ಯಾಗಜಿನ್, ಒಳಜಗಳಗಳಿಂದ ಭಾರತೀಯ ರಾಜಕೀಯದ ಚಿತ್ರಣಗಳು ಬದಲಾಗಿದ್ದರೂ ಕಾಂಗ್ರೆಸ್ ಪ್ರಬಲ ರಾಷ್ಟ್ರೀಯ ಶಕ್ತಿಯಾಗಿ ಉಳಿದುಕೊಂಡಿದೆ ಮತ್ತು ಸವಾಲಿಲ್ಲದೆ ರಾಜ್ಯಭಾರ ಮುದುವರೆಸುತ್ತಿದೆ ಎಂದಿದೆ.

"ವಿಶ್ವದ ಅತಿದೊಡ್ಡ ಗಣರಾಜ್ಯದಲ್ಲಿ, ಆಕೆ ರಾಣಿ" ಎಂದು ಪತ್ರಿಕೆ ಸೋನಿಯಾರನ್ನು ಬಣ್ಣಿಸಿದೆ. ಮ್ಯಾಗಜಿನ್‌ನ ಪಟ್ಟಿಯಲ್ಲಿ 41ನೇ ಸ್ಥಾನದಲ್ಲಿರುವ ಬಾಲಿವುಡ್ ಬಾದ್‌ ಶಾ ಶಾರುಖ್ ಖಾನ್‌ರನ್ನು, "ಬಾಲಿವುಡ್‌ನ ರಾಜ" (ಕಿಂಗ್ ಅಫ್ ಬಾಲಿವುಡ್) ಎಂದು ಪತ್ರಿಕೆ ಹೇಳಿದೆ.

IFM
"ಅವರ ಚಿತ್ರಗಳಲ್ಲಿ ಹಾಡುಗಳು ಮತ್ತು ಡಾನ್ಸ್ ನಂಬರ್‌‌ಗಳು ಹೆಚ್ಚಿನ ಪ್ರಾಮುಖ್ಯತೆ ಹೊಂದಿರುತ್ತವೆ ಆದರೆ ಖಾನ್( ಹಿಂದುವನ್ನು ವಿವಾಹವಾಗಿರುವ ಮುಸ್ಲಿಂ) ಪ್ರೀತಿಯೇ ಪ್ರಧಾನ ವಿಷಯವಾಗಿರುವ ಜಾತ್ಯತೀತ ಚಿತ್ರಗಳನ್ನು ನಿಷ್ಠೆಯಿಂದ ಮಾಡುತ್ತಾರೆ" ಎಂದು ಹೇಳಿದೆ. ಸೋನಿಯಾ ಗಾಂಧಿ, ಭೇಟಿ ನೀಡಿದವರಿಗೆ ಖಾನ್‌ರ ಡಿವಿಡಿ ನೀಡುತ್ತಾರೆ ವಿಶೇಷವಾಗಿ ಮುಸ್ಲಿಮರಿಗೆ. "ರೀಲ್ ಲೈಫ್‌ನ ಸಹಿಷ್ಣುತೆ ರಿಯಲ್ ಲೈಫ್‌ನಲ್ಲೂ ಕಾಣಿಸಿಕೊಳ್ಳಲಿ ಎಂಬ ಹಾರೈಕೆಯಿಂದಿರಬಹುದು" ಎಂದು ಪತ್ರಿಕೆ ಅಭಿಪ್ರಯಿಸಿದೆ.

ವಿಶ್ವದ ಪಾಲಿಗೆ ಅಪಾಯಕಾರಿ ಎನ್ನಬಹುದಾದ ರಾಷ್ಟ್ರ (ಪಾಕಿಸ್ತಾನ)ದಲ್ಲಿ ಕಯಾನಿ ನೇತೃತ್ವದ ಮಿಲಿಟರಿ, ಗಣರಾಜ್ಯದ ಸ್ಥಾಪನೆಯ ಹೊರತಾಗಿಯೂ ಪ್ರಾಬಲ್ಯ ಹೊಂದಿದೆ ಎಂದು ಪತ್ರಿಕೆ ಅಭಿಪ್ರಯಿಸಿದೆ.

ಬಿನ್ ಲಾಡೆನ್‌ಗೆ 42ನೇ ಸ್ಥಾನ ನೀಡಿರುವ ಪತ್ರಿಕೆ ಒಂದು ಕಾಲದಲ್ಲಿ ಪ್ರಚಾರಕ್ಕೆ ಹಾತೊರೆಯುತ್ತಿದ್ದ ಲಾಡೆನ್ 2007ರಿಂದ ಯಾವುದೇ ಹೊಸ ವಿಡಿಯೊವನ್ನು ಚಿತ್ರೀಕರಿಸಿಲ್ಲ ಮತ್ತು ಮೇ 2008ರ ನಂತರ ಆತನಿಂದ ಯಾವುದೇ ಅಡಿಯೊ ಸಂದೇಶಗಳು ಸಹ ಬಂದಿಲ್ಲ ಎಂದು ಹೇಳಿದೆ.

ಲಾಡೆನ್ ಶಕ್ತಿ ಈಗ ಕುಗ್ಗಿದ್ದು ಆತ ಭೂಗತನಾಗಿದ್ದರೂ, ಆತನ ತತ್ವಗಳು ಆಗಾಧ ಹಾನಿಯುಂಟು ಮಾಡುವುದನ್ನು ಮುಂದುವರೆಸಿದೆ ಎಂದು ಮುಂಬಯಿ ದಾಳಿಗಳು ತೋರಿಸಿಕೊಟ್ಟಿವೆ ಎಂದು ಪತ್ರಿಕೆ ಬೊಟ್ಟುಮಾಡಿದೆ.

ಪಟ್ಟಿಯಲ್ಲಿರುವ ಇತರರೆಂದರೆ, ದಲಾಯಿಲಾಮ, ಮಾಜಿ ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ಮತ್ತು ಅವರ ಪತ್ನಿ ಹಿಲರಿ, ಇರಾನಿಯನ್ ಅಯತೊಲ್ಲಾ ಅಲಿ ಖೆಮಾನೈ, ಸೌದಿ ದೊರೆ ಅಬ್ದುಲ್ಲಾ ಬಿನ್ ಅಬ್ದುಲ್ಲಾಜಿಜ್ ಅಏಲ್-ಸೌದ್, ಅಮೆರಿಕನ್ ಜನರಲ್ ಡೇವಿಡ್ ಪೆಟ್ರೊಯೆಸ್, ಇರಾಕ್ ಪ್ರಧಾನಿ ನೂರಿ ಅಲ್ ಮಲ್ಲಿಕಿ, ಅಮೆರಿಕ ಹೌಸ್ ವಕ್ತಾರ ನಾನ್ಸಿ ಪೆಲೊಸಿ, ನ್ಯೂಯಾರ್ಕ್ ಮೇಯರ್ ಮೈಕಲ್ ಬ್ಲೂಮ್‌ಬರ್ಗ್, ಪೋಪ್ ಬೆನೆಡಿಕ್ಟ್ XVI, ಮಾಧ್ಯಮ ಮೊಗುಲ್ ರಿಪರ್ಟ್ ಮರ್ಡಚ್ ಮತ್ತು ಪ್ರಸಿದ್ಧ ಶೋ ಹೋಸ್ಟ್ ಒಪ್ರಾ ವಿನ್‌ಫ್ರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹುಟ್ಟುಹಬ್ಬ ಔತಣಕೂಟಕ್ಕೆ ದಾವೂದ್ ತಯಾರಿ
ಜಮಾತ್ ನಿಷೇಧ ರದ್ದು ಪಡಿಸಬೇಕು: ಪಾಕ್ ಪಕ್ಷಗಳು
ಸಾವಿನಂಚಿನಲ್ಲಿ ಪಾಪ್ ಸಿಂಗರ್ ಮೈಕಲ್ ಜಾಕ್ಸನ್?
ಇರಾಕಿ ಸೈನಿಕನನ್ನು ಬಲಿತೆಗೆದುಕೊಂಡ 'ಸಾವಿನ್ನಪ್ಪುಗೆ'
ಮುಂಬಯಿ ದಾಳಿ ಸಾಮಾನ್ಯವಲ್ಲ, ಪಾಕ್ ಕ್ರಮ ಸಾಕಾಗಿಲ್ಲ
ಯುದ್ಧಕ್ಕೆ ನಾವೂ ಸಿದ್ಧರಾಗಿದ್ದೇವೆ: ಪಾಕಿಸ್ತಾನ