ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಹೀಗಿರುತ್ತದಂತೆ ಭಯೋತ್ಪಾದಕರ ಕನಸಿನ ಭಾರತ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೀಗಿರುತ್ತದಂತೆ ಭಯೋತ್ಪಾದಕರ ಕನಸಿನ ಭಾರತ!
ಒಂದೆಡೆ ಭಯೋತ್ಪಾದನಾ ಕೃತ್ಯ ಎಸಗುವ ಪಾತಕಿಗಳು ದೇಶರಹಿತರು ಎಂಬ ಭಟ್ಟಂಗಿ ಹೇಳಿಕೆಯನ್ನು ಪಾಕಿಸ್ತಾನ ನೀಡುತ್ತಿದ್ದರೆ, ಮತ್ತೊಂದೆಡೆ ಪಾಕ್ ನೆಲದಲ್ಲಿ ಅಡಗಿ ಕುಳಿತಿರುವ ಉಗ್ರರು ತಮ್ಮ ಮುಂದಿನ ಕನಸು, ಸಂಚಿನ ಬಗ್ಗೆ ಪಾಕಿಸ್ತಾನದ ಉರ್ದು ವೆಬ್‌ಸೈಟ್ ಒಂದರಲ್ಲಿ ರಾಜಾರೋಷವಾಗಿ ಬರೆದುಕೊಂಡಿದ್ದಾರೆ. ಇದಕ್ಕಾಗಿ ಎರಡು ನೀಲನಕ್ಷೆಗಳನ್ನೂ ರೂಪಿಸಿದ್ದಾರೆ. 2020ರೊಳಗೆ ಭಾರತದ ಬಹುತೇಕ ಭಾಗವನ್ನು ಆವರಿಸಿಕೊಂಡು 'ಪಾಕಿಸ್ತಾನಿ ಇಸ್ಲಾಮಿಕ್ ಗಣರಾಜ್ಯ' ಕಟ್ಟುವ ಸಂಕಲ್ಪ ಜಿಹಾದ್ ಹೋರಾಟಗಾರರ ಕನಸು ಎಂದು ಪಾಕಿಸ್ತಾನೀ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದೆ.

ದಕ್ಷಿಣ ಭಾರತದ ತುದಿಭಾಗ ಹೊರತುಪಡಿಸಿ (ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದ ಒಂದಷ್ಟು ಪ್ರದೇಶ), ಭಾರತದ ಪಂಜಾಬ್ ಪ್ರಾಂತ್ಯ, ವಿವಾದಿತ ಪಾಕ್ ಆಕ್ರಮಿತ ಕಾಶ್ಮೀರ ಇವುಗಳನ್ನೆಲ್ಲ ತಮ್ಮ ವಶಕ್ಕೆ ತೆಗೆದುಕೊಳ್ಳುವ ಮೂಲಕ 2020ರೊಳಗೆ ಯಾವ ಬಗೆಯಲ್ಲಿ ರಾಷ್ಟ್ರವನ್ನು ತಮ್ಮ ಕಪಿಮುಷ್ಟಿಯೊಳಕ್ಕೆ ತೆಗೆದುಕೊಳ್ಳಲಾಗುತ್ತದೆ ಎಂಬ ಅಂಶವನ್ನು ಈ ನಕ್ಷೆಯಲ್ಲಿ ಉಗ್ರರು ಚಿತ್ರಿಸಿದ್ದಾರೆ. ದಕ್ಷಿಣ ಭಾರತದ ಕೇರಳ ಮತ್ತು ತಮಿಳುನಾಡಿನ ಒಂದಷ್ಟು ಭಾಗವನ್ನು ಈ ನಕಾಶೆಯಲ್ಲಿ "ವಿವಾದಿತ ಪ್ರದೇಶ" ಎಂದವರು ನಮೂದಿಸಿದ್ದಾರೆ!

ಉತ್ತರ ಪ್ರದೇಶ ಸೇರಿದಂತೆ ಪಾಕಿಸ್ತಾನ ಇಸ್ಲಾಮಿಕ್ ಗಣರಾಜ್ಯ (ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನ) ವನ್ನಾಗಿ ಮಾಡಬೇಕೆಂಬುದು ಉಗ್ರರ ಕನಸೆಂದು ಹೇಳಿಕೆಯಲ್ಲಿ ಘೋಷಿಸಿದ್ದಾರೆ.

ಅಲ್ಲದೆ ಮಹಾರಾಷ್ಟ್ರದ ಮುಂಬೈಯನ್ನು ಮುಸ್ಲಿಮಾಬಾದ್ ಎಂದು ಹೆಸರಿಸಿ ಉಗ್ರರ ಕಾರ್ಯಾಚರಣೆಯ ಪ್ರಮುಖ ನೆಲೆಯನ್ನಾಗಿಸಲು ಪಣ ತೊಟ್ಟಿದ್ದಾರೆ. ಆ ನಿಟ್ಟಿನಲ್ಲಿ ಭಾರತವನ್ನು ಮುಂದೆ ಸಂಪೂರ್ಣವಾಗಿ ಮುಸ್ಲಿಂ ರಾಷ್ಟ್ರವಾಗಿಸುವ ಯೋಜನೆಯನ್ನು 2012 ಹಾಗೂ 2020ರ ಎರಡು ನಕ್ಷೆಯಲ್ಲಿ ತೋರಿಸಲಾಗಿದೆ.

ಮುಂಬೈ ಸೇರಿದಂತೆ ಭಾರತದಾದ್ಯಂತ ಉಗ್ರರು ನಡೆಸಿರುವ ದಾಳಿಗೆ ಪ್ರತೀಕಾರ ಎನ್ನುತ್ತಾ ಭಾರತವು ಅಮೆರಿಕದ 'ಆಶೀರ್ವಾದದೊಂದಿಗೆ' ಪಾಕ್ ಮೇಲೆ ಹಗೆ ಸಾಧಿಸುತ್ತಿದೆ. ಆದರೆ ಈ ಹಗೆತನ, ಆಕ್ರಮಣಕ್ಕೆ ಪಾಕಿಸ್ತಾನವು ಭಾರತಕ್ಕೆ 'ಮರೆಯಲಾಗದ ಪಾಠ ಕಲಿಸಲಿದೆ' ಎಂಬುದಾಗಿ 'ಜನರಲ್ ನ್ಯೂಸ್ ರಿಪೋರ್ಟರ್' ಎಂಬ ಹೆಸರಲ್ಲಿ ಉಗ್ರರು ನೀಡಿರುವ ಹೇಳಿಕೆಯನ್ನು ಎಕ್ಸ್‌ಪ್ರೆಸ್ ಡಾಟ್ ಕಾಮ್ ಎಂಬ ಉರ್ದು ಪತ್ರಿಕೆಯು ತನ್ನ ಡಿಸೆಂಬರ್ 3ರ ವರದಿಯಲ್ಲಿ ಉಲ್ಲೇಖಿಸಿದೆ.

ತಮ್ಮ ಕಾರ್ಯ ಸಾಧನೆಗಾಗಿ ನಾವು ಭಾರತೀಯ ಮಾಧ್ಯಮಗಳ ಸಹಾಯ ಪಡೆಯಬೇಕು ಎಂದು ಮನೋಭಾವ ವ್ಯಕ್ತಪಡಿಸಿರುವ ಉಗ್ರರು, ಮುಸ್ಲಿಂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮಾಧ್ಯಮ ಕ್ಷೇತ್ರವನ್ನು ಪ್ರವೇಶ ಮಾಡಬೇಕು ಎಂದು ತಾಕೀತು ಮಾಡಿದೆ.

ಭಾರತದ ಎಲ್ಲಾ ಸ್ನೇಹಿ ದೇಶಗಳ ವಿರುದ್ಧವೂ ಜಿಹಾದ್ ಹೋರಾಟ ಮುಂದುವರಿಯಲಿದೆ. ಈ ಹೋರಾಟದ ಫಲವಾಗಿ ಪಾಕ್‌ನ ತಾಲಿಬಾನ್ ಪಡೆಯು ಮುಂಬೈಯನ್ನು 2020ರಲ್ಲಿ ಮುಸ್ಲಿಮಾಬಾದ್ ಆಗಿ ಪರಿವರ್ತಿಸಲಿದೆ ಎಂದು ತಮ್ಮ ಅಖಂಡ ಮುಸ್ಲಿಂ ರಾಷ್ಟ್ರ ಕನಸಿನ ಚಿತ್ರಣವನ್ನು ಇಂಟರ್‌ನೆಟ್‌ನಲ್ಲಿ ಹರಿಯಬಿಟ್ಟಿದ್ದಾರೆ.

ಆ ಕಾರಣಕ್ಕಾಗಿ ಭಾರತೀಯ ಹಿಂದೂ-ಮುಸ್ಲಿಮರ ನಡುವೆ ದ್ವೇಷ, ಅಪನಂಬಿಕೆ ನಿರಂತರವಾಗಿರುವಂತೆ ನೋಡಿಕೊಳ್ಳುವ ಮೂಲಕ, ಭಾರತೀಯ ಮುಸ್ಲಿಮರು ಸದಾ ಪಾಕ್‌ನೆಡೆಗೆ ನಿಷ್ಠೆ ಹೊಂದಿರುವಂತೆ ನೋಡಿಕೊಳ್ಳಬೇಕು ಎಂಬ ಆಶಯ ಉಗ್ರರದ್ದು! ಹಿಂದೂ-ಮುಸ್ಲಿಮರ ನಡುವೆ ವಿವಾದ ಹುಟ್ಟು ಹಾಕುವುದು, ಭಯೋತ್ಪಾದನಾ ಕೃತ್ಯ, ರಕ್ತಪಾತ ನಡೆಸುವ ಮೂಲಕ ಭಾರತೀಯ 'ಸಂವಿಧಾನ' ಹಾಗೂ 'ಕಾನೂನಿನ' ಬಲವನ್ನು ತಿಳಿದುಕೊಳ್ಳುವುದು ಪ್ರಮುಖ ಉದ್ದೇಶ ಎಂಬುದಾಗಿ ಉಗ್ರಗಾಮಿಗಳ ವಿಚಾರ ಲಹರಿಯಲ್ಲಿ ಹೇಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ವಿಶ್ವದ 50 ಪ್ರಭಾವಿಗಳಲ್ಲಿ ಸೋನಿಯಾ, ಶಾರುಖ್'
ಹುಟ್ಟುಹಬ್ಬ ಔತಣಕೂಟಕ್ಕೆ ದಾವೂದ್ ತಯಾರಿ
ಜಮಾತ್ ನಿಷೇಧ ರದ್ದು ಪಡಿಸಬೇಕು: ಪಾಕ್ ಪಕ್ಷಗಳು
ಸಾವಿನಂಚಿನಲ್ಲಿ ಪಾಪ್ ಸಿಂಗರ್ ಮೈಕಲ್ ಜಾಕ್ಸನ್?
ಇರಾಕಿ ಸೈನಿಕನನ್ನು ಬಲಿತೆಗೆದುಕೊಂಡ 'ಸಾವಿನ್ನಪ್ಪುಗೆ'
ಮುಂಬಯಿ ದಾಳಿ ಸಾಮಾನ್ಯವಲ್ಲ, ಪಾಕ್ ಕ್ರಮ ಸಾಕಾಗಿಲ್ಲ